More

    ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಮೂರು ಸರಣಿಗಳಲ್ಲೂ ಸೋಲಲಿದೆ ಎಂದ ಇಂಗ್ಲೆಂಡ್ ಮಾಜಿ ನಾಯಕ

    ಲಂಡನ್: ಎಂಟು ತಿಂಗಳ ಬಳಿಕ ಮೊದಲ ಅಂತಾರಾಷ್ಟ್ರೀಯ ಪಂದ್ಯವಾಡಿದ ಭಾರತ ತಂಡ ಮೊದಲ ಹಣಾಹಣಿಯಲ್ಲೇ ನಿರಾಸೆ ಕಂಡಿತು. ಕರೊನಾ ಕಾಲದ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು 66 ರನ್‌ಗಳಿಂದ ವಿರಾಟ್ ಕೊಹ್ಲಿ ಬಳಗ ಸೋಲನುಭವಿಸಿತು. ಭಾರತದ ಬ್ಯಾಟಿಂಗ್ ವೈಫಲ್ಯವೇ ಸೋಲಿಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಅದರಲ್ಲೂ ನಾಯಕ ವಿರಾಟ್ ಕೊಹ್ಲಿ ವೈಫಲ್ಯವೇ ಟೀಕೆಗೆ ಗುರಿಯಾಗಿದೆ. ಒಂದು ಹೆಜ್ಜೆ ಮುಂದೆ ಹೋಗಿರುವ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್, ಆಸ್ಟ್ರೇಲಿಯಾ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಬಳಗ ಮೂರು ಮಾದರಿಯಲ್ಲೂ (ಏಕದಿನ, ಟಿ20, ಟೆಸ್ಟ್) ಸೋಲನುಭವಿಸಲಿದೆ ಎಂದು ಕಾಲೆಳೆದಿದ್ದಾರೆ.

    ಆಸ್ಟ್ರೇಲಿಯಾ ತಂಡವೇ ಭಾರತ ವಿರುದ್ಧ ಜಯ ದಾಖಲಿಸಿದೆ. ನನಗಂತು ಹಾಗೆ ಅನಿಸುತ್ತಿದೆ ಎಂದು ವಾನ್ ಹೇಳಿದ್ದಾರೆ. ಹಳೇ ಶಾಲಾ ಪದ್ಧತಿಯ ಮನಸ್ಥಿತಿಯಂತೆ ಐದು ತಜ್ಞ ಬೌಲರ್‌ಗಳನ್ನು ಕಣಕ್ಕಿಳಿಸಿದ್ದು, ಬ್ಯಾಟಿಂಗ್ ಕ್ರಮಾಂಕವೂ ಉತ್ತಮವಾಗಿರಲಿಲ್ಲ ಎಂದು ವಾನ್ ಟ್ವೀಟ್ ಮಾಡಿದ್ದಾರೆ. ಭಾರತ ತಂಡದ ತನ್ನ 50 ಓವರ್ ಕೋಟಾ ಮುಗಿಸಲು ನಾಲ್ಕು ಗಂಟೆಗೂ ಹೆಚ್ಚು ಸಮಯ ತೆಗೆದುಕೊಂಡಿತು. ಇದು ಸರಿಯಾದ ಕ್ರಮಾಂಕವಲ್ಲ ಎಂದಿದ್ದಾರೆ. ಮೈದಾನದಲ್ಲಿ ಆಟಗಾರರ ದೇಹ ಭಾಷೆ, ಫೀಲ್ಡಿಂಗ್ ಗುಣಮಟ್ಟವೂ ವೃದ್ಧಿಯಾಗಿಲ್ಲ. ಬೌಲಿಂಗ್‌ಗಂತೂ ಸಾಮಾನ್ಯವಾಗಿತ್ತು ಎಂದಿದ್ದಾರೆ. ಮತ್ತೊಂದೆಡೆ, ಆಸ್ಟ್ರೇಲಿಯಾ ತಂಡ ಅತ್ಯುತ್ತಮವಾಗಿ ಆಡಿತು ಎಂದಿದ್ದಾರೆ.

    ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 0-1 ಯಿಂದ ಹಿನ್ನಡೆ ಅನುಭವಿಸಿದೆ. 2ನೇ ಪಂದ್ಯ ಸಿಡ್ನಿ ಮೈದಾನದಲ್ಲೆ ಭಾನುವಾರ ನಡೆಯಲಿದೆ. ಬಳಿಕ ಮೂರು ಪಂದ್ಯಗಳ ಟಿ20 ಸರಣಿ ಹಾಗೂ 4 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ.

    ಪಾಕಿಸ್ತಾನ ಕ್ರಿಕೆಟ್ ತಂಡವನ್ನು ತವರಿಗೆ ಕಳುಹಿಸುವುದಾಗಿ ನ್ಯೂಜಿಲೆಂಡ್ ಎಚ್ಚರಿಕೆ ನೀಡಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts