More

    ಪಾಕಿಸ್ತಾನ ಕ್ರಿಕೆಟ್ ತಂಡವನ್ನು ತವರಿಗೆ ಕಳುಹಿಸುವುದಾಗಿ ನ್ಯೂಜಿಲೆಂಡ್ ಎಚ್ಚರಿಕೆ ನೀಡಿದ್ದೇಕೆ?

    ಕ್ರೈಸ್ಟ್‌ಚರ್ಚ್: ನ್ಯೂಜಿಲೆಂಡ್ ಪ್ರವಾಸಕ್ಕೆ ತೆರಳಿದ ಪಾಕಿಸ್ತಾನ ತಂಡದ 6 ಆಟಗಾರರು ಕರೊನಾ ಸೋಂಕಿತರಾಗಿದ್ದಾರೆ. ಇದಕ್ಕೆ ತಂಡ ಮಾಡಿರುವ ಕೋವಿಡ್-19 ನಿಯಮಾವಳಿಗಳ ಉಲ್ಲಂಘನೆಯೇ ಕಾರಣ ಎಂದು ದೂರಿರುವ ಆತಿಥೇಯ ನ್ಯೂಜಿಲೆಂಡ್ ಸರ್ಕಾರ, ಇನ್ನೊಂದು ಬಾರಿ ನಿಯಮಾವಳಿ ಉಲ್ಲಂಘಿಸಿದರೆ ಪಾಕ್ ತಂಡವನ್ನು ಪ್ರವಾಸದಿಂದಲೇ ವಾಪಸ್ ಕಳುಹಿಸುವುದಾಗಿ ಅಂತಿಮ ಎಚ್ಚರಿಕೆ ನೀಡಿದೆ.

    ಕಿವೀಸ್‌ನಲ್ಲಿ ಐಸೋಲೇಷನ್ ವೇಳೆ ಪಾಕ್ ತಂಡ 3-4 ನಿಯಮಾವಳಿಗಳ ಉಲ್ಲಂಘನೆ ಮಾಡಿದೆ. ಕೆಲ ಆಟಗಾರರು ಮಾಸ್ಕ್ ಕೂಡ ಧರಿಸಿರಲಿಲ್ಲ, ಗುಂಪುಗೂಡಿದ್ದರು ಮತ್ತು ಜತೆಯಾಗಿ ಊಟ ಮಾಡುವ ಮೂಲಕ ನಿಯಮಾವಳಿ ಉಲ್ಲಂಘಿಸಿದ್ದರು ಎಂದು ನ್ಯೂಜಿಲೆಂಡ್ ದೂರಿದೆ.

    ಪ್ರವಾಸಕ್ಕೆ ತೆರಳುವ ಮುನ್ನ ಲಾಹೋರ್‌ನಲ್ಲಿ ನಡೆಸಲಾದ 4 ಕೋವಿಡ್-19 ಟೆಸ್ಟ್‌ಗಳಲ್ಲಿ ತಂಡದ ಎಲ್ಲ ಸದಸ್ಯರು ನೆಗೆಟಿವ್ ಆಗಿದ್ದರು. ಆದರೆ ಕಿವೀಸ್‌ನಲ್ಲಿ ನಡೆಸಲಾದ ಪರೀಕ್ಷೆಯಲ್ಲಿ 6 ಆಟಗಾರರು ಪಾಸಿಟಿವ್ ಆಗಿದ್ದಾರೆ. ಅವರಿಂದ ತಂಡದ ಇತರ ಸದಸ್ಯರಿಗೂ ಸೋಂಕು ಹರಡಿರುವ ಭೀತಿ ಇದೆ. ಇದರಿಂದ ಈಗ ಎಲ್ಲರನ್ನೂ ಕಟ್ಟುನಿಟ್ಟಿನ ಕ್ವಾರಂಟೈನ್‌ನಲ್ಲಿಡಲಾಗಿದೆ. ಅಭ್ಯಾಸದ ಅವಕಾಶವನ್ನೂ ನಿರಾಕರಿಸಲಾಗಿದೆ.

    ಪಾಕ್ ತಂಡ 3 ಟಿ20 ಮತ್ತು 2 ಟೆಸ್ಟ್ ಪಂದ್ಯಗಳ ಸರಣಿ ಆಡುವ ಸಲುವಾಗಿ ನ್ಯೂಜಿಲೆಂಡ್ ಪ್ರವಾಸಕ್ಕೆ ತೆರಳಿದೆ. ಡಿಸೆಂಬರ್ 18ರಂದು ಟಿ20 ಪಂದ್ಯದೊಂದಿಗೆ ಪ್ರವಾಸ ಆರಂಭಗೊಳ್ಳಬೇಕಿದೆ. ಅದಕ್ಕೆ ಮುನ್ನ ಡಿಸೆಂಬರ್ 10ರಿಂದ ನ್ಯೂಜಿಲೆಂಡ್ ಎ ತಂಡದ ವಿರುದ್ಧ ಚತುರ್ದಿನ ಅಭ್ಯಾಸ ಪಂದ್ಯ ನಿಗದಿಯಾಗಿದೆ.

    VIDEO | ಮುಂಬೈನಲ್ಲೇ ದಾರಿ ತಪ್ಪಿದ ತೆಂಡುಲ್ಕರ್‌! ಮನೆಗೆ ಮರಳಲು ನೆರವಾದ ರಿಕ್ಷಾ ಡ್ರೈವರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts