More

    ನವೋದ್ಯಮವನ್ನು ಬೆಂಬಲಿಸ್ತೇವೆ, ಬದುಕಲ್ಲಿ ನವೋಲ್ಲಾಸ ತುಂಬಿ: ಐಐಟಿ ವಿದ್ಯಾರ್ಥಿಗಳಿಗೆ ಪ್ರಧಾನಿ ಸಲಹೆ

    ನವದೆಹಲಿ: ನವೋದ್ಯಮ, ನವೋನ್ವೇಷಣೆಯನ್ನು ಭಾರತ ಬೆಂಬಲಿಸುತ್ತದೆ. ಈ ನಿಟ್ಟಿನಲ್ಲಿ ಈಸ್ ಆಫ್ ಡೂಯಿಂಗ್ ಬಿಜಿನೆ್​ ಅನ್ನೂ ಖಾತರಿಗೊಳಿಸುವ ಕೆಲಸ ಮಾಡುತ್ತೇವೆ. ನೀವು ಜನರ ಬದುಕಿನಲ್ಲಿ ನವೋಲ್ಲಾಸ ತುಂಬಬೇಕು. ಜನರ ಬದುಕನ್ನು ಸರಳಗೊಳಿಸುವುದಕ್ಕೆ ಕೆಲಸ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

    ಅವರು ಶನಿವಾರ ಐಐಟಿ ದೆಹಲಿಯ 51ನೇ ಘಟಿಕೋತ್ಸವದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ಕೋವಿಡ್ 19 ನಂತರದ ಜಗತ್ತು ವಿಭಿನ್ನವಾಗಿರಲಿದೆ. ಜನರ ಬದುಕಿನಲ್ಲಿ ಟೆಕ್ನಾಲಜಿ ಬಹುದೊಡ್ಡ ಪಾತ್ರವನ್ನು ವಹಿಸಲಿದೆ. ಜಾಗತೀಕರಣ ಅಗತ್ಯ ಎಂಬುದನ್ನು ಕೋವಿಡ್ 19 ಕಲಿಸಿಕೊಟ್ಟಿದೆ. ಆದರೆ, ಸ್ವಾವಲಂಬನೆಯೂ ಅಷ್ಟೇ ಮುಖ್ಯ ಎಂದು ಅವರು ಹೇಳಿದರು.

    ಇದನ್ನೂ ಓದಿ: ಸಿಗಂದೂರು ದೇವಾಲಯದ ಮೇಲ್ವಿಚಾರಣೆ ಸಮಿತಿ ಪುನರ್ ಪರಿಶೀಲಿಸಲು ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟ ಮನವಿ

    ನವೋದ್ಯಮ, ನವೋನ್ವೇಷಣೆಯಲ್ಲಿ ತೊಡಗುವ ಯುವಜನರಿಗೆ ಈಸ್​ ಆಫ್​ ಡೂಯಿಂಗ್ ಬಿಜಿನೆಸ್​ ವಾತಾವರಣ ಒದಗಿಸುವುದಕ್ಕೆ ಭಾರತ ಸರ್ಕಾರ ಬದ್ಧವಾಗಿದೆ. ಈ ಸೌಲಭ್ಯ ಪಡೆದುಕೊಂಡು ದೇಶದ ಕೋಟ್ಯಂತರ ಜನರ ಬದುಕು ಬದಲಾಯಿಸುವುದಕ್ಕೆ ಅವಶ್ಯವಾದ ನವೋನ್ವೇಷಣೆಯನ್ನು, ನವೋದ್ಯಮವನ್ನೂ ನಡೆಸಬೇಕಾದ್ದು ಅವಶ್ಯ ಎಂದು ಪ್ರಧಾನಿ ಹೇಳಿದರು. (ಏಜೆನ್ಸೀಸ್)

    ಬಿಲೀವರ್ಸ್​ ಈಸ್ಟರ್ನ್ ಚರ್ಚ್​ ನಲ್ಲಿ ಕೋಟ್ಯಂತರ ರೂಪಾಯಿ ಹವಾಲಾ ವಹಿವಾಟು: ಐಟಿ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts