More

    ಬಿಲೀವರ್ಸ್​ ಈಸ್ಟರ್ನ್ ಚರ್ಚ್​ ನಲ್ಲಿ ಕೋಟ್ಯಂತರ ರೂಪಾಯಿ ಹವಾಲಾ ವಹಿವಾಟು: ಐಟಿ ಇಲಾಖೆ

    ತಿರುವಲ್ಲ: ಬಿಲೀವರ್ಸ್ ಈಸ್ಟರ್ನ್ ಚರ್ಚ್ ಮತ್ತು ಅದರ ಅಂಗ ಸಂಸ್ಥೆಗಳಲ್ಲಿ ಕೋಟ್ಯಂತರ ರೂಪಾಯಿ ಹವಾಲಾ ವಹಿವಾಟು ನಡೆದಿದ್ದು, ಅದಕ್ಕೆ ಸಂಬಂಧಿಸಿದ ದಾಖಲೆಗಳೂ ಲಭ್ಯವಾಗಿವೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.

    ಕರ್ನಾಟಕವೂ ಸೇರಿ ಹಲವು ರಾಜ್ಯಗಳಲ್ಲಿ

    ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ, ಪಂಜಾಬ್​, ಪಶ್ಚಿಮ ಬಂಗಾಳ, ಛತ್ತೀಸ್​ಗಢ, ದೆಹಲಿ ಸೇರಿ ದೇಶದ ಹಲವೆಡೆ ಬಿಲೀವರ್ಸ್ ಈಸ್ಟರ್ನ್ ಚರ್ಚ್​ನ ಅಂಗ ಸಂಸ್ಥೆಗಳು ಕಾರ್ಯಾಚರಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.

    ಬಿಲೀವರ್ಸ್ ಚರ್ಚ್​ನ ಕೇಂದ್ರ ಕಚೇರಿ ಮತ್ತು ಅದರ ಅಂಗಸಂಸ್ಥೆಗಳ ಮೇಲಿನ ಐಟಿ ದಾಳಿ ಗುರುವಾರ ಆರಂಭವಾಗಿದ್ದು, ಶನಿವಾರವೂ ಮುಂದುವರಿದಿದೆ. ದೇಶಾದ್ಯಂತ 66 ಸ್ಥಳಗಳಲ್ಲಿ ಬಿಲೀವರ್ಸ್ ಚರ್ಚ್​ ಕಾರ್ಯಾಚರಿಸುತ್ತಿದ್ದು, ಅಲ್ಲೆಲ್ಲ ಐಟಿ ದಾಳಿ ಆಗಿದ್ದು, ದಾಖಲೆಗಳ ಪರಿಶೀಲನೆ ಮುಂದುವರಿದಿದೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ಹೆಂಡತಿ ಕೆಎಎಸ್ ಆಫೀಸರ್​, ಗಂಡ ಫೈನಾನ್ಸಿಯರ್​; ಎಸಿಬಿ ದಾಳಿ ವೇಳೆ ಸಿಕ್ಕಿತು ಭಾರಿ ಚಿನ್ನಾಭರಣ!

    ವಿವಿಧೆಡೆಗಳಲ್ಲಾಗಿ ಇದುವರೆಗೆ 14.5 ಕೋಟಿ ರೂಪಾಯಿ ನಗದು ಹಣ ಲಭ್ಯವಾಗಿದ್ದು, ಇದಕ್ಕೆ ದಾಖಲೆಗಳು ಇಲ್ಲ. ಆದಾಗ್ಯೂ, ಈ ವಿಚಾರವಾಗಿ ದಾಖಲೆಗಳ ತಪಾಸಣೆ ಮುಂದುವರಿದಿದ್ದು, ಅಧಿಕೃತ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ. ನಿಯಮಗಳನ್ನು ಉಲ್ಲಂಘಿಸಿ ವಿದೇಶದಿಂದಲೂ ದೇಣಿಗೆ ಪಡೆದುಕೊಂಡಿರುವುದಕ್ಕೆ ನೀಡಲಾದ ರಸೀದಿ ಮತ್ತು ಇತರೆ ದಾಖಲೆಗಳೂ ಐಟಿ ಅಧಿಕಾರಿಗಳಿಗೆ ಸಿಕ್ಕಿದೆ.

    ಇದನ್ನೂ ಓದಿ: ದೀಪಾವಳಿ ಸಂಭ್ರಮಕ್ಕೆ ಸಾವರಿನ್ ಗೋಲ್ಡ್ ಬಾಂಡ್: ಗ್ರಾಂಗೆ 5,177 ರೂಪಾಯಿ ದರ ಸೋಮವಾರದಿಂದ ಲಭ್ಯ

    ಈ ಚರ್ಚ್ ವಿವಿಧ ರಾಜ್ಯಗಳಲ್ಲಿ ಚಾರಿಟೆಬಲ್ ಟ್ರಸ್ಟ್​ಗಳ ಮೂಲಕ ಹಣ ಲೇವಾದೇವಿ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಬಿಲೀವರ್ಸ್ ಚರ್ಚ್​ನ ವಹಿವಾಟಿನಲ್ಲಿ ಪಾಲುದಾರರಾದವರೆಲ್ಲರ ಮೇಲೂ ನಿಗಾ ಇರಿಸಲಾಗಿದೆ. ಜಾರಿ ನಿರ್ದೇಶನಾಲಯವೂ ಪ್ರಾಥಮಿಕ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಶೀಘ್ರವೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳೂ ಈ ವಿಚಾರಣೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)

    ಬಿಹಾರ ಚುನಾವಣೆ: ಜೆಡಿಯುಗೆ ಮತ ಎಂದ ವಯೋವೃದ್ಧನನ್ನು ಥಳಿಸಿದ್ರು ಆರ್​ಜೆಡಿ ಬೆಂಬಲಿಗರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts