More

    VIDEO| ಅದೃಷ್ಟ ಕೈ ಕೊಟ್ರೆ ಈ ಥರಾನೂ ಆಗುತ್ತೆ: ಈವರೆಗೂ ನೋಡಿರದ ವಿಚಿತ್ರ ರನೌಟ್ ಇದು​!

    ಚೆನ್ನೈ: ಅದೃಷ್ಟ ಕೈ ಕೊಟ್ಟರೆ ಈ ರೀತಿಯು ಆಗುತ್ತದೆ ಎಂಬುದಕ್ಕೆ ಚೆನ್ನೈನ ಚೆಪಾಕ್​ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆತಿಥೇಯ ಭಾರತ ಮತ್ತು ಪ್ರವಾಸಿ ಇಂಗ್ಲೆಂಡ್​ ನಡುವಿನ ಟೆಸ್ಟ್​ ಸರಣಿಯಲ್ಲಿ ಚೇತೇಶ್ವರ ಪೂಜಾರ ರನೌಟ್​ ಆದ ಪರಿ ಉದಾಹರಣೆಯಾಗಿದೆ.

    ಟೆಸ್ಟ್​ ಸರಣಿಯ ಎರಡನೇ ಪಂದ್ಯದ ಎರಡನೇ ಇನ್ನಿಂಗ್ಸ್​ನ ಮೂರನೇ ದಿನದಾಟದಲ್ಲಿ ಪೂಜಾರ ರನೌಟ್​ ಆದ ವಿಡಿಯೋ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ. ಮೊಹೀನ್​ ಅಲಿ ಬೌಲಿಂಗ್​ನಲ್ಲಿ ಪೂಜಾರ ಮುನ್ನುಗ್ಗಿ ಹೊಡೆಯಲು ಯತ್ನಿಸುತ್ತಾರೆ. ಆದರೆ, ಚೆಂಡು ಕಾಲಿನ ಪ್ಯಾಡ್​ಗೆ ತಗುಲಿ ಶಾರ್ಟ್​ ಲೆಗ್​ ವಿಭಾದಲ್ಲಿ ನಿಂತಿದ್ದ ಆಲ್ಲಿ ಪೋಪ್​ ಕೈಗೆ ಸೇರುತ್ತದೆ. ತಕ್ಷಣ ಪೋಪ್​ ಚೆಂಡನ್​ ವಿಕೆಟ್​ ಕೀಪರ್​ ಬೆನ್​ ಫೋಕ್ಸ್​ ಕಡೆ ಎಸೆಯುತ್ತಾರೆ. ಅಷ್ಟರಲ್ಲಿ ಪೂಜಾರ ಹಿಂದೆ ತಿರುಗಿ ಕ್ರೀಸ್​ನಲ್ಲಿ ಬ್ಯಾಟ್​ ಇಡುತ್ತಾರೆ. ಆದರೆ, ಬ್ಯಾಟ್​ ಪೂಜಾರ ಕೈಯಿಂದ ಜಾರಿ ಕೆಳಗೆ ಬೀಳುತ್ತದೆ. ಕ್ರೀಸ್​ ಒಳಗೆ ಬರುವಷ್ಟರಲ್ಲಿ ಬೆನ್​ ಫೋಕ್ಸ್​ ವಿಕೆಟ್​ ಬೀಳಿಸಿರುತ್ತಾರೆ. ಅಲ್ಲಿಗೆ ಪೂಜಾರ ಔಟ್​ ಎಂದು ನಿರ್ಣಯಿಸಲಾಗುತ್ತದೆ.

    ಇದನ್ನೂ ಓದಿರಿ: ಸಂಸತ್ತಿನಲ್ಲೇ ಮಹಿಳೆಯನ್ನು ರೇಪ್​ ಮಾಡಲು ಯತ್ನಿಸಿದ ಸಚಿವ! ಕೇಸ್​ ಮುಚ್ಚುವ ಪ್ರಯತ್ನದಲ್ಲಿ ಪೊಲೀಸ್​!

    ಇದಕ್ಕೆ ಸಂಬಂಧಿಸಿದ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗಿದ್ದು, ನಿಜಕ್ಕೂ ಇದು ಪೂಜಾರ ಅವರ ದುರಾದೃಷ್ಟ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ, ಚೆಪಾಕ್‌ನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ 6 ವಿಕೆಟ್‌ಗೆ 300 ರನ್‌ಗಳಿಂದ ದಿನದಾಟ ಆರಂಭಿಸಿದ ಭಾರತ ತಂಡ 329 ರನ್‌ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಇಂಗ್ಲೆಂಡ್ ತಂಡ ರನ್ ಗಳಿಸಲು ಪರದಾಡಿ ಕೇವಲ 134 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಮೊದಲ ಇನಿಂಗ್ಸ್‌ನಲ್ಲಿ 195 ರನ್ ಮುನ್ನಡೆ ಸಂಪಾದಿಸಿದ ಭಾರತ ತಂಡ 2ನೇ ಸರದಿಯಲ್ಲಿ ದಿನದಂತ್ಯಕ್ಕೆ 1 ವಿಕೆಟ್‌ಗೆ 54 ರನ್ ಪೇರಿಸಿತು.

    ಇದನ್ನೂ ಓದಿರಿ: ಒಂದೇ ಮನೆಯಲ್ಲಿ ಲಾಕ್​: ವ್ಯಾಲೆಂಟೈನ್ಸ್​ ದಿನ ಬಯಲಾಯ್ತು ಯುವಕ-ಯುವತಿಯ ಲಾಕ್​ಡೌನ್​​ ರಹಸ್ಯ!

    ಮೂರನೇ ದಿನದಾಟ ಆರಂಭಿಸಿರುವ ಭಾರತ ಈ ಕ್ಷಣದವರೆಗೆ 6 ವಿಕೆಟ್​ ನಷ್ಟಕ್ಕೆ 163 ರನ್​ ಕಲೆಹಾಕಿದ್ದು, 358 ರನ್​ಗಳ ಮುನ್ನಡೆ ಸಾಧಿಸಿದೆ. ಸದ್ಯ ಕ್ರೀಸ್​ನಲ್ಲಿ ನಾಯಕ ವಿರಾಟ್​ ಕೊಹ್ಲಿ ಮತ್ತು ರವಿಚಂದ್ರನ್​ ಅಶ್ವಿನ್ ಉಳಿದುಕೊಂಡಿದ್ದಾರೆ. (ಏಜೆನ್ಸೀಸ್​)​

    ಭಾರತದ ತಿರುಗೇಟಿಗೆ ಇಂಗ್ಲೆಂಡ್ ತತ್ತರ, ಅಶ್ವಿನ್ ಹೊಸ ದಾಖಲೆ

    ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ಯುವಿ ವಿರುದ್ಧ ಎಫ್​ಐಆರ್​ ದಾಖಲು..!

    ರೋಹಿತ್ ಶರ್ಮ ಶತಕದಾಟ, ಗೌರವಯುತ ಮೊತ್ತ ಕಲೆಹಾಕಿದ ಭಾರತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts