More

    ಕರ್ತಾಪುರ್ ಕಾರಿಡಾರ್ ಮರು ಆರಂಭಕ್ಕೆ ಸಿದ್ಧತೆ: ಪಾಕಿಸ್ತಾನದ್ದು ತೋರಿಕೆ ಸದ್ಭಾವನೆ ಎಂದ ಕೇಂದ್ರ

    ನವದೆಹಲಿ:ಮಹಾರಾಜ ರಣಜೀತ್ ಸಿಂಗ್ ಅವರ ಪುಣ್ಯಸ್ಮರಣೆಯ ಸಂದರ್ಭದಲ್ಲಿ ಜೂನ್ 29 ರಂದು ಕರ್ತಾರ್‌ಪುರ ಕಾರಿಡಾರ್ ತೆರೆಯಲು ಪಾಕಿಸ್ತಾನ ಸಿದ್ಧತೆಯನ್ನು ತಿಳಿಸಿದ ಕೆಲವೇ ಗಂಟೆಗಳ ನಂತರ ನವದೆಹಲಿಯ ಅಧಿಕೃತ ಮೂಲಗಳು ಇದನ್ನು “ತೋರಿಕೆಯ ಸದ್ಭಾವನೆಯನ್ನು ಸೃಷ್ಟಿಸುತ್ತಿರುವ ಪ್ರಯತ್ನ”ವೆಂದು ಕರೆದಿವೆ.

    “ಜಗತ್ತಿನಾದ್ಯಂತ  ಧಾರ್ಮಿಕ  ಸ್ಥಳಗಳು ತೆರೆಯುತ್ತಿದ್ದಂತೆ, ಪಾಕಿಸ್ತಾನವು ಎಲ್ಲ ಸಿಖ್ ಯಾತ್ರಿಕರಿಗಾಗಿ ಕರ್ತಾರ್ಪುರ್ ಸಾಹಿಬ್ ಕಾರಿಡಾರ್ ಅನ್ನು ಮತ್ತೆ ತೆರೆಯಲು ಸಿದ್ಧತೆ ನಡೆಸಿದೆ, ಕಾರಿಡಾರ್ ಅನ್ನು ಜೂನ್ 29 ರಂದು ಮಹಾರಾಜಾ ರಣಜೀತ್ ಸಿಂಗ್ ಅವರ ಪುಣ್ಯಸ್ಮರಣೆಯ ಸಂದರ್ಭದಲ್ಲಿ ಮತ್ತೆ ತೆರೆಯಲು ಸಿದ್ಧತೆಯ ಕುರಿತು ಭಾರತೀಯರಿಗೆ ತಿಳಿಸಲಾಗುತ್ತಿದೆ” ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ ಶನಿವಾರ ಟ್ವಿಟ್ಟರ್ ನಲ್ಲಿ ಘೋಷಿಸಿದರು.

    ಇದನ್ನೂ ಓದಿ: ಚೆನ್ನೈಗೆ ಬಂದರು ಬ್ಯಾಟ್‌ಮ್ಯಾನ್, ಸ್ಪೈಡರ್‌ಮ್ಯಾನ್!

    ಕರೋನವೈರಸ್ ಹರಡುವುದನ್ನು ನಿಯಂತ್ರಿಸುವ ಮತ್ತು ತಡೆಗಟ್ಟುವ ಕ್ರಮಗಳ ಭಾಗವಾಗಿ ಗಡಿಯಾಚೆಗಿನ ಪ್ರಯಾಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಆರೋಗ್ಯ ಅಧಿಕಾರಿಗಳು ಮತ್ತು ಸಂಬಂಧಪಟ್ಟವರೊಂದಿಗೆ ಸಮಾಲೋಚಿಸಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

    ದ್ವಿಪಕ್ಷೀಯ ಒಪ್ಪಂದದ ಪ್ರಕಾರ ಪ್ರಯಾಣದ ದಿನಾಂಕಕ್ಕಿಂತ ಕನಿಷ್ಠ 7 ದಿನಗಳ ಮೊದಲು ಮಾಹಿತಿಯನ್ನು ಹಂಚಿಕೊಳ್ಳಬೇಕು. ಆದರೆ ಕಾರಿಡಾರ್ ತೆರೆಯುವ ನಿರ್ಧಾರದ ಕುರಿತು ಪಾಕಿಸ್ತಾನ ಕೇವಲ 2 ದಿನ ಮುಂಚೆ ಮಾತ್ರ ಮಾಹಿತಿ ನೀಡಿದೆ ಎಂದು ಅದರ ಟೀಕೆ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ‘ಚೀನಾದ ಹೇಡಿತನದ ಆಕ್ರಮಣವನ್ನು ಸಾರ್ವಜನಿಕವಾಗಿ ಟೀಕಿಸಿ…’: ಪ್ರಧಾನಿಗೆ ಒತ್ತಾಯ

    ಕರೊನಾ ಹಿನ್ನೆಲೆಯಲ್ಲಿ ಮಾರ್ಚ್ 16 ರಂದು ಕಾರಿಡಾರ್ ಅನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು.

    ರಾವಿ ನದಿ ಪ್ರವಾಹ ಬಯಲು ಪ್ರದೇಶಗಳಲ್ಲಿ ಪಾಕಿಸ್ತಾನವು ದ್ವಿಪಕ್ಷೀಯ ಒಪ್ಪಂದದಲ್ಲಿ ಬದ್ಧತೆ ಹೊಂದಿದ್ದರೂ ಸಹ ನದಿಯ ಪ್ರವಾಹ ಬಯಲು ಪ್ರದೇಶದ ಬದಿಯಲ್ಲಿ ಸೇತುವೆಯನ್ನು ನಿರ್ಮಿಸಿಲ್ಲ ಎಂದು ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ರಾಷ್ಟ್ರೀಯ ಭದ್ರತೆಯಲ್ಲಿ ರಾಜಕಾರಣ ಬೇಡ; ರಾಹುಲ್​ ಗಾಂಧಿಗೆ ಶರದ್​ ಪವಾರ್​ ಪಾಠ

    ಮಾನ್ಸೂನ್ ಇರುವುದರಿಂದ ಕಾರಿಡಾರ್ ಮೂಲಕ ಸುರಕ್ಷಿತ ರೀತಿಯಲ್ಲಿ ಯಾತ್ರಾರ್ಥಿಗಳ ಸಂಚಾರ ಸಾಧ್ಯವಿದೆಯೇ ಎಂದು ಮೌಲ್ಯಮಾಪನ ಮಾಡುವುದು ಅಗತ್ಯವಾಗಿದೆ.
    4.2 ಕಿ.ಮೀ.ಉದ್ದದ ಕಾರಿಡಾರ್ ಗುರುದಾಸ್‌ಪುರ ಜಿಲ್ಲೆಯ ದೇರಾ ಬಾಬಾ ನಾನಕ್ ಪಟ್ಟಣವನ್ನು ಪಾಕಿಸ್ತಾನದ ನರೋವಾಲ್ ಜಿಲ್ಲೆಯ ಶಾಕರ್​​ಗರ್​​​ತಾಲ್ಲೂಕಿನ ಕರ್ತಾರ್‌ಪುರ್ ಸಾಹಿಬ್ ಗುರುದ್ವಾರದೊಂದಿಗೆ ಸಂಪರ್ಕಿಸುತ್ತದೆ.
    ಭಾರತೀಯ ಯಾತ್ರಾರ್ಥಿಗಳಿಗೆ ಪವಿತ್ರ ಗುರುದ್ವಾರಕ್ಕೆ ವೀಸಾ ರಹಿತ ಭೇಟಿಗೆ ಅವಕಾಶ ನೀಡುವ ಸಲುವಾಗಿ ಕರ್ತಾರ್‌ಪುರ ಕಾರಿಡಾರ್‌ನ್ನು ಪ್ರಾರಂಭಿಸಲು ಭಾರತ ಮತ್ತು ಪಾಕಿಸ್ತಾನ 2019 ರ ಅಕ್ಟೋಬರ್‌ನಲ್ಲಿ ಸಹಿ ಹಾಕಿದ್ದವು.

    ಲಡಾಖ್​ನಲ್ಲಿ ಆಕ್ರಮಣಕಾರಿ ಮನೋಭಾವ ತೋರುತ್ತಿರುವುದಕ್ಕೆ ಚೀನಾ ಭಾರಿ ಬೆಲೆ ತೆರಬೇಕಾಗುತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts