ಕೊಚ್ಚಿನ್: ಕೇರಳದಲ್ಲಿ ಮತ್ತೆ ಮಂಕಿಪಾಕ್ಸ್ ಸೋಂಕು ಕಾಣಿಸಿಕೊಂಡಿದ್ದು, ಯುಎಇಯಿಂದ ಶುಕ್ರವಾರ ಮರಳಿದ ಮಹಿಳೆಗೆ ಸೋಂಕು ಇರುವುದು ಪತ್ತೆಯಾಗಿದೆ.
ಅರಬ್ ದೇಶದಿಂದ ಬಂದ 35ವರ್ಷದ ಮಹಿಳೆ ಜ್ವರದಿಂದ ಬಳಲುತ್ತಿದ್ದರು, ಇವರನ್ನು ಮಂಜೇರಿ ಮೆಡಿಕಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಪರೀಕ್ಷೆ ವರದಿ ಬಂದ ಬಳಿಕ ಸೋಂಕು ಇರುವುದು ಪತ್ತೆಯಾಗಿದೆ ಎಂದು ಕೇರಳ ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ.
ಆಕೆಯ ಸಂಪರ್ಕದಲ್ಲಿದ್ದ ಕುಟುಂಬ ಸದಸ್ಯರನ್ನು ಕೂಡ ಐಸೋಲೇಷನ್ಗೆ ಒಳಪಡಿಸಲಾಗಿದ್ದು, ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
ಇನ್ನು ಉಳಿದೆರಡು ಮಂಕಿಪಾಕ್ಸ್ ಪ್ರಕರಣಗಳು ಕೇರಳದಲ್ಲೇ ಪತ್ತೆಯಾಗಿದ್ದು, ಕೊಲ್ಲಂ ಹಾಗೂ ಕಣ್ಣೂರಿನ ವ್ಯಕ್ತಿಗೆ ಮಂಕಿಪಾಕ್ಸ್ ಇರುವುದು ದೃಢವಾಗಿತ್ತು. ಈ ಇಬ್ಬರು ಸಹ ಅರಬ್ ರಾಷ್ಟ್ರದಿಂದಲೇ ಮರಳಿದ್ದರು. (ಏಜೆನ್ಸೀಸ್)
ಎರಡು ಮೂರು ತಲೆಮಾರಿನವರಿಗೆ ಆಸ್ತಿ ಮಾಡಿದ್ದೇವೆಂಬ ಹೇಳಿಕೆ: ಇದು ನನಗೆ ಗೊತ್ತೇ ಇಲ್ಲ ಅಂದ್ರು ಪರಮೇಶ್ವರ್!
ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಸಹೋದರನಿಗೆ ಬೆಂಗಳೂರು ಪೊಲೀಸರಿಂದ ಸಮನ್ಸ್ ಜಾರಿ: ಕಾರಣ ಇಲ್ಲಿದೆ