More

    ಷೇರು ವಿನಿಮಯ ಕೇಂದ್ರವಷ್ಟೇ ಅಲ್ಲ, ಇದೀಗ ಅನಿಲ ವಿನಿಮಯ ಕೇಂದ್ರವೂ ಆರಂಭವಾಗಿದೆ…!

    ನವದೆಹಲಿ: ಭಾರತದ ಮೊದಲ ನೈಸರ್ಗಿಕ ಅನಿಲ ವಿನಿಮಯ ಕೇಂದ್ರಕ್ಕೆ ಸೋಮವಾರ ಚಾಲನೆ ಸಿಕ್ಕಿದೆ. ಪಾರದರ್ಶಕ ಬೆಲೆ ನಿಗದಿ ಹಾಗೂ ಭಾರತದಲ್ಲಿ ನೈಸರ್ಗಿಕ ಅನಿಲ ಬಳಕೆಯ ಪ್ರಮಾಣ ಹೆಚ್ಚಿಸುವಲ್ಲಿ ಇದು ಸಹಕಾರಿಯಾಗಲಿದೆ ಎಂದು ನಂಬಲಾಗಿದೆ.

    ಏನಿದು ಅನಿಲ ವಿನಿಮಯ ಕೇಂದ್ರ?: ಸಾಮಾನ್ಯವಾಗಿ ಷೇರು ವಿನಿಮಯ, ಸರಕು ವಿನಿಮಯ (ಕಮಾಡಿಟಿ ಎಕ್ಸ್​ಚೇಂಜ್​) ಕೇಂದ್ರಗಳ ಬಗ್ಗೆ ಕೇಳಿರುತ್ತೇವೆ. ಅದೇ ರೀತಿ ಇಂಡಿಯನ್​ ಗ್ಯಾಸ್​ ಎಕ್ಸ್​ಚೇಂಜ್​ (ಐಜಿಎಕ್ಸ್​) ಆರಂಭವಾಗಿದೆ. ಸ್ಟಾಕ್​ ಎಕ್ಸ್​ಚೇಂಜ್​ನಂತೆ ಇದು ಕೂಡ ಡಿಜಿಟಲ್​ ವೇದಿಕೆಯಾಗಿದೆ. ಷೇರುಗಳಂತೆ ಇಲ್ಲಿ ನೈಸರ್ಗಿಕ ಅನಿಲವನ್ನು ಖರೀದಿಸಬಹುದು ಹಾಗೂ ಮಾರಾಟ ಮಾಡಬಹುದು.

    ಇದನ್ನೂ ಓದಿ; ಸುಶಾಂತ್​ ಸಿಂಗ್​ನದ್ದು ಆತ್ಮಹತ್ಯೆಯಲ್ಲ, ಕೊಲೆ; ನಟನ ಚಿಕ್ಕಪ್ಪನಿಗೆ ಅನುಮಾನ; ತನಿಖೆಗೆ ಒತ್ತಾಯ

    ಗುಜರಾತ್​ನ ದಹೇಜ್​ ಹಾಗೂ ಹಾಜಿರಾ ಮತ್ತು ಆಂಧ್ರಪ್ರದೇಶದ ಕಾಕಿನಾಡದ ನೈಸರ್ಗಿಕ ಅನಿಲ ಕೇಂದ್ರಗಳಲ್ಲಿ ಗ್ರಾಹಕರು ವಹಿವಾಟು ನಡೆಸಬಹುದು. ಸ್ಥಳದಲ್ಲೇ ಖರೀದಿ ಹಾಗೂ ಮುಂಗಡ ಕಾದಿರಿಸುವಿಕೆಗೂ ಇಲ್ಲಿ ಅವಕಾಶ ಇರಲಿದೆ.

    ಗ್ಯಾಸ್​ ಎಕ್ಸ್​ಚೇಂಜ್​ ಆರಂಭದಿಂದಾಗಿ ಖರೀದಿದಾರರು ಹಲವು ಏಜೆಂಟ್​ ಅಥವಾ ಪೂರೈಕೆದಾರರನ್ನು ಸಂಪರ್ಕಿಸುವ ಅಗತ್ಯವಿರುವುದಿಲ್ಲ. ಇಲ್ಲಿ ನ್ಯಾಯಯುತ ಹಾಗೂ ಸ್ಪರ್ಧಾತ್ಮಕ ಬೆಲೆಯಲ್ಲಿ ಅವರಿಗೆ ನೈಸರ್ಗಿಕ ಅನಿಲ ಖರೀದಿ ಸಾಧ್ಯವಾಗಲಿದೆ ಎಂದು ಐಜಿಎಕ್ಸ್​ ನಿರ್ದೇಶಕ ರಾಜೇಶ್​ಕುಮಾರ್​ ಮೆದಿರತ್ತಾ ಹೇಳಿದ್ದಾರೆ.

    ಇದನ್ನೂ ಓದಿ; ನಟ ಸುಶಾಂತ್​ ಸಿಂಗ್​ನ ವೈದ್ಯರನ್ನು ಹುಡುಕುತ್ತಿದ್ದಾರೆ ಪೊಲೀಸರು; ಕೊನೆಯ ಕರೆ ಮಾಡಿದ್ಯಾರಿಗೆ?

    ಸದ್ಯ ಈ ಕೇಂದ್ರ ಆಮದು ನೈಸರ್ಗಿಕ ಅನಿಲ ಮಾತ್ರ ವಹಿವಾಟಿಗೆ ಮುಕ್ತವಾಗಿದೆ. ದೇಶೀಯವಾಗಿ ಉತ್ಪಾದಿಸಲಾಗುವ ಅನಿಲದ ಬೆಲೆಯನ್ನು ಸದ್ಯ ಸರ್ಕಾರವೇ ನಿಗದಿಪಡಿಸುತ್ತದೆ. ಮುಂದಿನ ದಿನಗಳಲ್ಲಿ ವಹಿವಾಟಿಗೆ ಅಗತ್ಯ ನೀತಿಯನ್ನು ರೂಪಿಸಲಿದೆ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್​ ಹೇಳಿದ್ದಾರೆ.

    ಸರ್ಕಾರಿ ಜಾಹೀರಾತಿನಲ್ಲಿ ನೀಲಿಚಿತ್ರ ತಾರೆ; ನೆಟ್ಟಿಗರಿಂದಲೂ ಮೆಚ್ಚುಗೆ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts