More

    ಬರಲಿದೆ ಅತ್ಯಾಧುನಿಕ ಜಲಾಂತರ್ಗಾಮಿ ನಿರೋಧಕ ಯುದ್ಧ ಹೆಲಿಕಾಪ್ಟರ್

    ನವದೆಹಲಿ: ರಕ್ಷಣಾ ವ್ಯವಸ್ಥೆಯ ಬಲವರ್ಧನೆಗೆ ಮುಂದಾಗಿರುವ ಕೇಂದ್ರ ಸರ್ಕಾರ ಅಮೆರಿಕದಿಂದ 24 ಅತ್ಯಾಧುನಿಕ ಜಲಾಂತರ್ಗಾಮಿ ನಿರೋಧಕ ಯುದ್ಧಹೆಲಿಕಾಪ್ಟರ್​​ಗಳ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಿದೆ.
    ಖರೀದಿ ಒಪ್ಪಂದದ ಒಟ್ಟಾರೆ ಮೌಲ್ಯ 1.3 ದಶಲಕ್ಷ ಡಾಲರ್​ ಆಗಿದೆ. ಇದರಲ್ಲಿ ಯುದ್ಧಹೆಲಿಕಾಪ್ಟರ್​ಗಳ ಸಂವೇದಕಗಳು, ಸಂವಹನ ವ್ಯವಸ್ಥೆ ಮತ್ತು ಹೆಲ್​​ಫೈರ್ ಕ್ಷಿಪಣಿ ಸೇರಿ ಹಲವು ಶಸ್ತ್ರಾಸ್ತ್ರಗಳು, ಎಂಕೆ 54 ಟಾರ್ಪೆಡೋಗಳು ಸ್ಟ್ರೈಕ್ ರಾಕೆಟ್ ವ್ಯವಸ್ಥೆಗಳು ಸೇರಿವೆ.

    ಇದನ್ನೂ ಓದಿ: ನೋಡನೋಡುತ್ತಿದ್ದಂತೆ ಧರೆಗುರುಳಿದರು ಸ್ಕೈಡೈವರ್​​ಗಳು….!

    ನಾರ್ವೆ ಕಂಪನಿ ಕಾಂಗ್ಸ್​​​ಬರ್ಗ್ ಡಿಫೆನ್ಸ್ ಆ್ಯಂಡ್ ಏರೋಸ್ಪೇಸ್ ಈ ಹೆಲಿಕಾಪ್ಟರ್​​ಗಳನ್ನು ಅಭಿವೃದ್ಧಿಪಡಿಸಿದ್ದು, ನೇವಲ್ ಸ್ಟ್ರೈಕ್ ಕ್ಷಿಪಣಿಯನ್ನು (ಎನ್​ಎಸ್​ಎಂ) ಹೊಡೆದುರುಳಿಸಲು ಸಹಾಯವಾಗುವಂತೆ ಇವುಗಳನ್ನು ವಿನ್ಯಾಸಗೊಳಿಸಲಾಗಿದೆ. ಈ ಒಪ್ಪಂದವನ್ನು ಅಮೆರಿಕ ನೌಕಾಪಡೆ ಮೂಲಕ ನಿರ್ವಹಿಸಲಾಗುತ್ತಿದೆ. ಲಾಕ್​ಹೀಡ್​ ಮಾರ್ಟಿನ್ ಕಂಪನಿ ವಿತರಣಾ ಪ್ರಕ್ರಿಯೆಯನ್ನು ವೇಗಗೊಳಿಸಲು ಮುಂದಾಗುತ್ತಿದೆ. ಭಾರತೀಯ ನೌಕಾಪಡೆಯ ಪೈಲಟ್​ಗಳು ಮತ್ತು ಇಂಜಿನಿಯರ್​​ಗಳು ಹೆಲಿಕಾಪ್ಟರ್​ಗಳ ಚಾಲನೆ ಮತ್ತು ನಿರ್ವಹಣೆ ತರಬೇತಿ ಪಡೆಯಲಿದ್ದಾರೆ. ಎಂಎಚ್​- 60ಆರ್ ಹೆಲಿಕಾಪ್ಟರ್​ಗಳು ಅಮೆರಿಕದಿಂದ ಮುಂದಿನ ವರ್ಷ ಬರಲಿವೆ.

    ಸದ್ಯಕ್ಕಿಲ್ಲ ಪ್ರಯಾಣಿಕ ರೈಲ್ವೆ ಸೇವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts