ಮೆಕ್‌ಕೇ: ಯುವ ಬ್ಯಾಟುಗಾರ್ತಿಯರಾದ ಶೆಫಾಲಿ ವರ್ಮ (56 ರನ್, 91 ಎಸೆತ, 7 ಬೌಂಡರಿ) ಮತ್ತು ಯಸ್ತಿಕಾ ಭಾಟಿಯಾ (64 ರನ್, 69 ಎಸೆತ, 9 ಬೌಂಡರಿ) ಉಪಯುಕ್ತ ಆಟದ ನೆರವಿನಿಂದ ಭಾರತ ಮಹಿಳಾ ತಂಡ ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ದಾಖಲೆಯ ಚೇಸಿಂಗ್ ಗೆಲುವು ಸಾಧಿಸಿದೆ. 2 ವಿಕೆಟ್‌ಗಳಿಂದ ಕಂಡ ಸಮಾಧಾನಕರ ಗೆಲುವಿನೊಂದಿಗೆ ವೈಟ್‌ವಾಷ್‌ನಿಂದ ಪಾರಾದ ಮಿಥಾಲಿ ರಾಜ್ ಪಡೆ ಸರಣಿ ಸೋಲಿನ ಅಂತರವನ್ನು 1-2ಕ್ಕೆ ಇಳಿಸಿಕೊಂಡಿತು. ಈ ಸಾಹಸಿಕ ಜಯದೊಂದಿಗೆ, ಏಕದಿನ ಕ್ರಿಕೆಟ್‌ನಲ್ಲಿ ಆಸೀಸ್ ತಂಡದ ಸತತ 26 ಗೆಲುವಿನ ಓಟಕ್ಕೂ ಬ್ರೇಕ್ ಹಾಕಿತು.
ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಆಸೀಸ್, ಜೂಲನ್ ಗೋಸ್ವಾಮಿ (37ಕ್ಕೆ 3) ಮತ್ತು ಪೂಜಾ ವಸಾಕರ್ (46ಕ್ಕೆ 3) ಬಿಗಿ ದಾಳಿಯ ನಡುವೆ ಬೆತ್ ಮೂನಿ (52) ಮತ್ತು ಆಶ್ಲೆಗ್ ಗಾರ್ಡ್ನರ್ (67) ಅರ್ಧಶತಕದಿಂದ 9 ವಿಕೆಟ್‌ಗೆ 264 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಪ್ರತಿಯಾಗಿ ಶೆಫಾಲಿ-ಯಸ್ತಿಕಾ 2ನೇ ವಿಕೆಟ್‌ಗೆ ನಡೆಸಿದ ಶತಕದ ಜತೆಯಾಟದಿಂದ ಭಾರತ ದಿಟ್ಟವಾಗಿ ಮುನ್ನುಗ್ಗಿತು. ಆದರೆ ಅನಾಬೆಲ್ ಸುದರ್‌ಲ್ಯಾಂಡ್ (30ಕ್ಕೆ 3) ಭಾರತ ತಂಡದ ಮಧ್ಯಮ ಕ್ರಮಾಂಕಕ್ಕೆ ಆಘಾತ ನೀಡಿದರು. ಆಗ ದೀಪ್ತಿ ಶರ್ಮ (31) ಮತ್ತು ಸ್ನೇಹಾ ರಾಣಾ (30) ಉಪಯುಕ್ತ ಕೊಡುಗೆ ನೀಡಿ ಗೆಲುವಿನ ಆಸೆ ಜೀವಂತವಿಟ್ಟರು.
ಕೊನೇ ಓವರ್‌ನಲ್ಲಿ ಭಾರತಕ್ಕೆ 4 ರನ್ ಬೇಕಿದ್ದಾಗ ಬೌಂಡರಿ ಸಿಡಿಸುವ ಮೂಲಕ ಜೂಲನ್ ಗೋಸ್ವಾಮಿ ಗೆಲುವು ತಂದುಕೊಟ್ಟರು. ಕಳೆದ ಪಂದ್ಯದ ಕೊನೇ ಓವರ್‌ನಲ್ಲಿ 2 ನೋಬಾಲ್ ಎಸೆದು ಎಡವಟ್ಟು ಮಾಡಿದ್ದ ಅನುಭವಿ ಆಟಗಾರ್ತಿ ಜೂಲನ್ ಈ ಬಾರಿ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇನ್ನು ಸೆಪ್ಟೆಂಬರ್ 30ರಿಂದ ಕ್ಯಾರ‌್ರಾರಾದಲ್ಲಿ ಉಭಯ ತಂಡಗಳ ನಡುವೆ ಏಕೈಕ ಟೆಸ್ಟ್ ಪಂದ್ಯ ನಡೆಯಲಿದೆ.
https://twitter.com/AbdullahNeaz/status/1442034644094894083
ಭಾರತ ಮಹಿಳಾ ತಂಡ ಏಕದಿನ ಕ್ರಿಕೆಟ್‌ನಲ್ಲಿ ಯಶಸ್ವಿಯಾಗಿ ಬೆನ್ನಟ್ಟಿದ ಗರಿಷ್ಠ ಗುರಿ ಇದಾಗಿದೆ. 2019ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 248 ರನ್ ಬೆನ್ನಟ್ಟಿದ್ದು ಹಿಂದಿನ ದಾಖಲೆ. ಆಸೀಸ್ ಸತತ 26 ಗೆಲುವಿನ ಬಳಿಕ ಅಂದರೆ 2017ರ ಅಕ್ಟೋಬರ್ ಬಳಿಕ ಏಕದಿನ ಕ್ರಿಕೆಟ್‌ನಲ್ಲಿ ಮೊದಲ ಸೋಲು ಅನುಭವಿಸಿತು. ಇದು ಆಸೀಸ್ ವಿರುದ್ಧ ತಂಡವೊಂದರ 2ನೇ ಗರಿಷ್ಠ ಚೇಸಿಂಗ್ ಆಗಿದೆ. 2017ರಲ್ಲಿ ನ್ಯೂಜಿಲೆಂಡ್ 276 ರನ್ ಬೆನ್ನಟ್ಟಿ ಗೆದ್ದಿದ್ದು ದಾಖಲೆಯಾಗಿದೆ. ಆಸೀಸ್‌ನಲ್ಲಿ ತಂಡವೊಂದು ಆತಿಥೇಯರ ವಿರುದ್ಧ 250 ಪ್ಲಸ್ ಮೊತ್ತ ಬೆನ್ನಟ್ಟಿದ್ದು ಇದೇ ಮೊದಲಾಗಿದೆ.
ಆಸ್ಟ್ರೇಲಿಯಾ: 9 ವಿಕೆಟ್‌ಗೆ 264 (ಅಲಿಸ್ಸಾ ಹೀಲಿ 35, ಪೆರ‌್ರಿ 26, ಮೂನಿ 52, ಗಾರ್ಡ್ನರ್ 67, ತಹ್ಲಿಯಾ 47, ಜೂಲನ್ 37ಕ್ಕೆ 3, ಪೂಜಾ 46ಕ್ಕೆ 3). ಭಾರತ: 49.3 ಓವರ್‌ಗಳಲ್ಲಿ 8 ವಿಕೆಟ್‌ಗೆ 266 (ಶೆಫಾಲಿ 56, ಸ್ಮತಿ 22, ಯಸ್ತಿಕಾ 64, ಮಿಥಾಲಿ 16, ದೀಪ್ತಿ 31, ಸ್ನೇಹಾ 30, ಜೂಲನ್ 8*, ಸುದರ್‌ಲ್ಯಾಂಡ್ 30ಕ್ಕೆ 3).
A Ripper from Jhulan Goswami to dismiss Healy!
Sets her up perfectly with the in-swinger, bowling an outswinger in the previous delivery!
First wicket for India!#AUSvsIND pic.twitter.com/Z3VotGxfzv— OneCricket (@OneCricketApp) September 24, 2021
The winning moment. In the dressing room. #AUSvIND #AUSvsIND pic.twitter.com/wDliU7TXnz
— Krithika (@krithika0808) September 26, 2021
ಕರೊನಾ ಭೀತಿಯಿಂದ ರದ್ದುಗೊಂಡಿದ್ದ ಮ್ಯಾಂಚೆಸ್ಟರ್ ಟೆಸ್ಟ್ 2022ರಲ್ಲಿ ಮರುನಿಗದಿ