ಕರೊನಾ ಭೀತಿಯಿಂದ ರದ್ದುಗೊಂಡಿದ್ದ ಮ್ಯಾಂಚೆಸ್ಟರ್ ಟೆಸ್ಟ್ 2022ರಲ್ಲಿ ಮರುನಿಗದಿ

ಲಂಡನ್: ಕರೊನಾ ಭೀತಿಯಿಂದಾಗಿ ಈ ತಿಂಗಳು ರದ್ದುಗೊಂಡ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯವನ್ನು ಭಾರತ-ಇಂಗ್ಲೆಂಡ್ ತಂಡಗಳು ಮುಂದಿನ ವರ್ಷದ ಜೂನ್-ಜುಲೈನಲ್ಲಿ ಆಡಲಿವೆ. ಪಂದ್ಯ ಮರುನಿಗದಿಪಡಿಸಿರುವುದನ್ನು ಬಿಸಿಸಿಐ ಮತ್ತು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗಳು (ಇಸಿಬಿ) ದೃಢಪಡಿಸಿವೆ. ಆದರೆ ಈ ಪಂದ್ಯ ಕಳೆದ ಸರಣಿಯ ಮುಂದುವರಿದ ಭಾಗವಾಗಿರುವುದೇ ಅಥವಾ ಪ್ರತ್ಯೇಕವಾದ ಏಕೈಕ ಟೆಸ್ಟ್ ಪಂದ್ಯವಾಗಿರುವುದೇ ಎಂಬುದನ್ನು ಖಚಿತಪಡಿಸಿಲ್ಲ. ಮ್ಯಾಂಚೆಸ್ಟರ್ ಟೆಸ್ಟ್ ದಿಢೀರ್ ರದ್ದುಗೊಂಡಿದ್ದರಿಂದ ಇಸಿಬಿಗೆ ಆಗಿರುವ ನಷ್ಟವನ್ನು ತುಂಬಿಕೊಡುವ ಸಲುವಾಗಿ ಬಿಸಿಸಿಐ ಈ ಪಂದ್ಯವನ್ನು ಆಡಲು ಸಮ್ಮತಿಸಿದೆ. ಪೂರ್ವ ನಿಗದಿಯ ವೇಳಾಪಟ್ಟಿಯ … Continue reading ಕರೊನಾ ಭೀತಿಯಿಂದ ರದ್ದುಗೊಂಡಿದ್ದ ಮ್ಯಾಂಚೆಸ್ಟರ್ ಟೆಸ್ಟ್ 2022ರಲ್ಲಿ ಮರುನಿಗದಿ