More

    ಇಂಗ್ಲೆಂಡ್ ಎದುರು ಭಾರತ ತಂಡಕ್ಕೆ ಇನಿಂಗ್ಸ್ ಮುನ್ನಡೆ

    ನಾಟಿಂಗ್‌ಹ್ಯಾಂ: ಕನ್ನಡಿಗ ಕೆಎಲ್ ರಾಹುಲ್ (84 ರನ್, 214 ಎಸೆತ, 12 ಬೌಂಡರಿ) ಹಾಗೂ ರವೀಂದ್ರ ಜಡೇಜಾ (56 ರನ್, 86 ಎಸೆತ, 8 ಬೌಂಡರಿ, 1 ಸಿಕ್ಸರ್) ಜೋಡಿಯ ಜವಾಬ್ದಾರಿಯುತ ಜತೆಯಾಟದ ಲವಾಗಿ ಭಾರತ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಎದುರು ಅಮೂಲ್ಯ ಮುನ್ನಡೆ ಸಾಧಿಸಿತು. ವೇಗಿಗಳಾದ ಒಲಿ ರಾಬಿನ್‌ಸನ್ (85ಕ್ಕೆ 5) ಹಾಗೂ ಜೇಮ್ಸ್ ಆಂಡರ್‌ಸನ್ (54ಕ್ಕೆ 4) ಮಾರಕ ದಾಳಿ ನಡುವೆಯೂ ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 95 ರನ್ ಮುನ್ನಡೆ ಗಳಿಸಿತು. ಟ್ರೆಂಟ್‌ಬ್ರಿಜ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 4 ವಿಕೆಟ್‌ಗೆ 125 ರನ್‌ಗಳಿಂದ ಶುಕ್ರವಾರ 3ನೇ ದಿನದಾಟ ಆರಂಭಿಸಿದ ಭಾರತ ತಂಡ 84.5 ಓವರ್‌ಗಳಲ್ಲಿ 278 ರನ್‌ಗಳಿಗೆ ಸರ್ವಪತನ ಕಂಡಿತು. ಬಳಿಕ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ಚಹಾ ವಿರಾಮದ ಬಳಿಕ ಮತ್ತೆ ಮಳೆಯಿಂದ ಆಟ ನಿಂತಾಗ ವಿಕೆಟ್ ನಷ್ಟವಿಲ್ಲದೆ 25 ರನ್ ಪೇರಿಸಿದ್ದು, ಮುನ್ನಡೆ ಸಾಧಿಸಲು ಇನ್ನೂ 70 ರನ್ ಕಲೆಹಾಕಬೇಕಿದೆ. ಮಳೆಯಿಂದಾಗಿ ದಿನದಾಟ ಸ್ಥಗಿತಗೊಂಡಿತು.

    ಇದನ್ನೂ ಓದಿ: ಕನ್ನಡಿಗ ಅನಿಲ್ ಕುಂಬ್ಳೆ ದಾಖಲೆ ಹಿಂದಿಕ್ಕಿದ ಜೇಮ್ಸ್ ಆಂಡರ್‌ಸನ್,

    ರಾಹುಲ್-ಜಡೇಜಾ ಆಸರೆ: ಕ್ರಮವಾಗಿ 57 ಮತ್ತು 7 ರನ್‌ಗಳಿಂದ ದಿನದಾಟ ಆರಂಭಿಸಿದ ರಾಹುಲ್ ಮತ್ತು ರಿಷಭ್ ಪಂತ್ ಅವರನ್ನು ರಾಬಿನ್‌ಸನ್ ಬೇಗನೆ ಬೇರ್ಪಡಿಸಿದರು. ಭರ್ಜರಿ ಸಿಕ್ಸರ್ ಸಿಡಿಸಿ ಲಯ ಕಂಡುಕೊಳ್ಳಲು ಯತ್ನಿಸಿದ ಪಂತ್, ರಾಬಿನ್‌ಸನ್ ಎಸೆತದಲ್ಲಿ ಔಟಾದರು. ಬಳಿಕ ಜತೆಗೂಡಿದ ರಾಹುಲ್-ಜಡೇಜಾ ಜೋಡಿ, ಮುನ್ನಡೆ ತಂದುಕೊಡುವಲ್ಲಿ ಯಶಸ್ವಿಯಾಯಿತು. ಈ ಜೋಡಿ 6ನೇ ವಿಕೆಟ್‌ಗೆ 60 ರನ್ ಜತೆಯಾಟವಾಡಿತು. ಆಂಡರ್‌ಸನ್ ಎಸೆತವನ್ನು ರಕ್ಷಣಾತ್ಮಕವಾಗಿ ಎದುರಿಸಿದರೂ ವಿಕೆಟ್ ಕೀಪರ್‌ಗೆ ಕ್ಯಾಚ್ ನೀಡಿದ ರಾಹುಲ್ ಶತಕವಂಚಿತರಾದರು. ಬಳಿಕ ಜಡೇಜಾ ಸ್ಫೋಟಿಸಿ ನಿರ್ಗಮಿಸಿದರೆ, ಕೆಳಕ್ರಮಾಂಕದಲ್ಲಿ ಮೊಹಮದ್ ಶಮಿ (13), ಜಸ್‌ಪ್ರೀತ್ ಬುಮ್ರಾ (28) ಹಾಗೂ ಮೊಹಮದ್ ಸಿರಾಜ್ (7) ತಂಡದ ಮೊತ್ತವನ್ನು ಹಿಗ್ಗಿಸಿದರು. ಬುಮ್ರಾ-ಸಿರಾಜ್ ಜೋಡಿ 10ನೇ ವಿಕೆಟ್‌ಗೆ 23 ರನ್ ಪೇರಿಸಿ ಗಮನಸೆಳೆಯಿತು.

    ಇದನ್ನೂ ಓದಿ: ಏಷ್ಯನ್ ದಾಖಲೆ ಬರೆದರೂ ಫೈನಲ್‌ಗೇರಲು ಪುರುಷರ ರಿಲೇ ತಂಡ ವಿಫಲ

    ಇಂಗ್ಲೆಂಡ್: 183 ಮತ್ತು 11.1 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 25 (ರೋರಿ ಬರ್ನ್ಸ್ 11*, ಡೊಮಿನಿಕ್ ಸಿಬ್ಲೆ 9*). ಭಾರತ: 278 (ಕೆಎಲ್ ರಾಹುಲ್ 84, ರಿಷಭ್ ಪಂತ್ 25, ರವೀಂದ್ರ ಜಡೇಜಾ 56, ಜಸ್‌ಪ್ರೀತ್ ಬುಮ್ರಾ 28, ಜೇಮ್ಸ್ ಆಂಡರ್‌ಸನ್ 54ಕ್ಕೆ 4, ಒಲಿ ರಾಬಿನ್‌ಸನ್ 85ಕ್ಕೆ 5).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts