More

    ವಿದೇಶಿಯರಿಗೆ ಮನ ಮಿಡಿಯುತ್ತಿರುವ ರಾಷ್ಟ್ರಗಳು, ಅಮೆರಿಕ- ಭಾರತ ಬಾಂಧವ್ಯಕ್ಕೆ ಹೊಸ ಸಾಕ್ಷ್ಯ

    ನವದೆಹಲಿ: ಕರೊನಾ ಸಂಕಷ್ಟ ವಿಶ್ವವನ್ನೆಲ್ಲ ವ್ಯಾಪಿಸಿದೆ. ಹಲವು ದೇಶಗಳಲ್ಲಿ ವಿದೇಶಿಯರು ಸಿಲುಕಿದ್ದಾರೆ. ವಿಮಾನ ಸಂಚಾರಕ್ಕೆ ನಿರ್ಬಂಧ ಹಾಗೂ ಲಾಕ್​​ಡೌನ್​ ಕಾರಣದಿಂದಾಗಿ ತಮ್ಮ ದೇಶಗಳಿಗೆ ತೆರಳಲು ಸಾಧ್ಯವಾಗದೆ, ಅಲ್ಲಲ್ಲಿಯೇ ಉಳಿದುಕೊಳ್ಳುವಂತಾಗಿದೆ. ತಮ್ಮ ಪ್ರಜೆಗಳನ್ನು ಆದಷ್ಟು ಬೇಗನೆ ಹಿಂದಕ್ಕೆ ಕರೆಯಿಸಿಕೊಳ್ಳಬೇಕೆಂದು ಕೊಲ್ಲಿ ರಾಷ್ಟ್ರಗಳು ಒತ್ತಡ ಹೇರುತ್ತಿದ್ದರೆ, ಕೆಲ ರಾಷ್ಟ್ರಗಳ ವಿದೇಶಿಯರ ವೀಸಾ ಅವಧಿಯನ್ನು ವಿಸ್ತರಿಸಿ ಉದಾರತೆ ಮೆರೆಯುತ್ತಿವೆ.

    ಅಮೆರಿಕದಲ್ಲಿರುವ ಭಾರತೀಯರ ವೀಸಾ ಅವಧಿಯನ್ನು ವಿಸ್ತರಿಸುವಂತೆ ಮಾಡಿಕೊಂಡಿರುವ ಕೇಂದ್ರ ಸರ್ಕಾರದ ಮನವಿಯನ್ನು ಪರಿಗಣಿಸುವುದಾಗಿ ಅಮೆರಿಕ ಹೇಳಿದೆ.

    ಕರೊನಾ ಸಂಕಷ್ಟದ ಕಾರಣದಿಂದಾಗಿ ವೀಸಾ ಅವಧೀ ವಿಸ್ತರಣೆ ಅನಿವಾರ್ಯವಾಗಿದೆ. ಹೀಗಾಗಿ, ಎಚ್​-1ಬಿ ಹಾಗೂ ಇತರ ವೀಸಾಗಳನ್ನು ಹೊಂದಿರುವವರು ಅಮೆರಿಕದಲ್ಲಿ ಇನ್ನಷ್ಟು ಅವಧಿಗೆ ಅವಕಾಶ ಕಲ್ಪಿಸುವುದಾಗಿ ಅಮೆರಿಕ ಅಧಿಕಾರಿಗಳು ತಿಳಿಸಿದ್ದಾರೆ. ವೀಸಾ ವಿಸ್ತರಣೆ ಕೋರಿ ಬರುವ ಅರ್ಜಿಗಳನ್ನು ಅವುಗಳನ್ನು ಸ್ವೀಕರಿಸಿದ ಆಧಾರದಲ್ಲಿ ವಿಲೇವಾರಿ ಮಾಡಲಾಗುವುದು ಎಂದು ಹೇಳಿದ್ದಾರೆ.
    ವಿದೇಶಾಂಗ ಕಾರ್ಯದರ್ಶಿ ಹರ್ಷ ಶ್ರಿಂಗ್ಲಾ ಕಳೆದ ವಾರ ಅಮೆರಿಕದ ಅಧಿಕಾರಿಗಳೊಂದಿಗೆ ದೂರವಾಣಿ ಸಂಭಾಷಣೆ ನಡೆಸಿ, ಭಾರತೀಯರ ವೀಸಾ ಅವಧಿ ವಿಸ್ತರಣೆಗೆ ಮನವಿ ಮಾಡಿದ್ದರು. ಜತೆಗೆ ಅವರಿಗೆ ಅಗತ್ಯ ಔಷಧ ಹಾಗೂ ಇತರ ಅವಶ್ಯಕ ವಸ್ತುಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದರು. ಒಂದು ಅಂದಾಜಿನ ಪ್ರಕಾರ ಅಮೆರಿಕವೊಂದರಲ್ಲಿಯೇ ಸಾವಿರಾರು ಭಾರತೀಯರು ಭಾರತಕ್ಕೆ ಬರಲಾಗದೆ ಉಳಿದುಕೊಂಡಿದ್ದಾರೆ.

    ಭಾರತದಿಂದಲೂ ವೀಸಾ ಅವಧಿ ವಿಸ್ತರಣೆ: ದೇಶದಲ್ಲಿರುವ ವಿದೇಶಿಯರ ವೀಸಾ ಅವಧಿಯನ್ನು ಭಾರತವೂ ವಿಸ್ತರಿಸಿದೆ. ಸಾಮಾನ್ಯ ವೀಸಾ, ಇ-ವೀಸಾ ಹಾಗೂ ನಿಗದಿತ ಅವಧಿಯ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸುವ ವೀಸಾ ಅವಧಿ ಫೆ.1ರಿಂದ ಏಪ್ರಿಲ್​ 30ರ ನಡುವಿನ ಅವಧಿಯಲ್ಲಿ ಮುಗಿಯುವಂತಿದ್ದರೆ ಅದನ್ನು ಏಪ್ರಿಲ್​ 30ರ ಮಧ್ಯರಾತ್ರಿವರೆಗೆ ವಿಸ್ತರಿಸಿದೆ.

    ವಿಶೇಷವೆಂದರೆ, ತನ್ನ ಪ್ರಜೆಗಳನ್ನು ಕರೆದೊಯ್ಯಲು ಅಮೆರಿಕಾ ವಿಶೇಷ ವಿಮಾನಗಳನ್ನು ಸಜ್ಜುಗೊಳಿಸಿದ್ದರು. ಹಲವು ಭಾತದಲ್ಲಿಯೇ ಉಳಿಯಲು ನಿರ್ಧರಿಸಿದ್ದಾರೆ. ಅಮೆರಿಕದಲ್ಲಿ ವೇಗವಾಗಿ ಕರೊನಾ ಸೋಂಕು ಹರಡುತ್ತಿರುವುದೇ ಇದಕ್ಕೆ ಕಾರಣ.

    ಯುರೋಪಿಯನ್​ ರಾಷ್ಟ್ರಗಳಲ್ಲಿ ಲಾಕ್​ಡೌನ್​ ‘ಔಟ್​’ ಆಗಿದ್ದೇಕೆ? ಬೀದಿಗಿಳಿದು ವ್ಯಾಪಾರ- ವಹಿವಾಟು ನಡೆಸುತ್ತಿರುವ ಜನರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts