More

    ವಿಂಡೀಸ್ ವಿರುದ್ಧ ಟಿ20ಯಲ್ಲೂ ಕ್ಲೀನ್‌ಸ್ವೀಪ್ ಸಾಧಿಸಿದರೆ ಭಾರತಕ್ಕೆ ಬೋನಸ್!

    ಕೋಲ್ಕತ: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಕ್ಲೀನ್‌ಸ್ವೀಪ್ ಸಾಧಿಸಿ ಬೀಗಿರುವ ಭಾರತ ತಂಡ, ಟಿ20 ಸರಣಿಯಲ್ಲೂ ಕ್ಲೀನ್‌ಸ್ವೀಪ್ ಸಾಧನೆ ಮಾಡಿದರೆ, ಬೋನಸ್ ಬಹುಮಾನವನ್ನೂ ಪಡೆಯಲಿದೆ. ಅದುವೇ ಐಸಿಸಿ ಟಿ20 ರ‌್ಯಾಂಕಿಂಗ್‌ನಲ್ಲಿ ನಂ. 1 ಪಟ್ಟ!

    ಭಾರತ ತಂಡ ಸದ್ಯ ಟಿ20 ರ‌್ಯಾಂಕಿಂಗ್‌ನಲ್ಲಿ 267 ಅಂಕದೊಂದಿಗೆ 2ನೇ ಸ್ಥಾನದಲ್ಲಿ ನೆಲೆಸಿದ್ದರೆ, ಇಂಗ್ಲೆಂಡ್ ತಂಡ 269 ಅಂಕದೊಂದಿಗೆ ಅಗ್ರಸ್ಥಾನದಲ್ಲಿದೆ. ವೆಸ್ಟ್ ಇಂಡೀಸ್ ತಂಡ 7ನೇ ಸ್ಥಾನದಲ್ಲಿದೆ. 3-0ಯಿಂದ ಸರಣಿ ಗೆದ್ದರೆ ಭಾರತ 2 ಅಂಕ ಗಳಿಸಲಿದ್ದು, ಇಂಗ್ಲೆಂಡ್ ಜತೆಗೆ 269 ಅಂಕಗಳ ಸಮಬಲ ಸಾಧಿಸಿದರೂ, ದಶಾಂಶ ಲೆಕ್ಕಾಚಾರದಲ್ಲಿ ಅಗ್ರಸ್ಥಾನವನ್ನು ಒಲಿಸಿಕೊಳ್ಳಲಿದೆ.

    ಸರಣಿಯಲ್ಲಿ 2-1ರಿಂದಷ್ಟೇ ಗೆದ್ದರೆ ಭಾರತ 1 ಅಂಕ ನಷ್ಟ ಅನುಭವಿಸಲಿದ್ದು, 3ನೇ ಸ್ಥಾನದಲ್ಲಿರುವ ಪಾಕಿಸ್ತಾನದಲ್ಲಷ್ಟೇ (266) ಅಂಕ ಗಳಿಸಲಿದೆ. ಆದರೆ ದಶಾಂಶ ಲೆಕ್ಕಾಚಾರದಲ್ಲಿ 2ನೇ ಸ್ಥಾನ ಕಾಪಾಡಿಕೊಳ್ಳಲಿದೆ. ಭಾರತ 1-2ರಿಂದ ಸರಣಿ ಸೋತರೆ 3 ಅಂಕ ಕಳೆದುಕೊಳ್ಳಲಿದ್ದು, 3ನೇ ಸ್ಥಾನಕ್ಕೆ ಕುಸಿದರೆ, ಪಾಕಿಸ್ತಾನ 2ನೇ ಸ್ಥಾನಕ್ಕೇರಲಿದೆ.

    ಕೋಲ್ಕತ ತಲುಪಿದ ತಂಡಗಳು
    ಟಿ20 ಸರಣಿಯಲ್ಲಿ ಆಡುವ ಸಲುವಾಗಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಸೋಮವಾರ ಕೋಲ್ಕತಕ್ಕೆ ತೆರಳಿದವು. ಐಪಿಎಲ್ ಹರಾಜು ಪ್ರಕ್ರಿಯೆ ವೀಕ್ಷಣೆ, ಕೆಲ ತಂಡಗಳ ನಾಯಕರಾಗಿರುವ ಆಟಗಾರರು ಮಾಲೀಕರು-ಕೋಚ್‌ಗೆ ಸಲಹೆ-ಸೂಚನೆಗಳನ್ನು ನೀಡುತ್ತಿದ್ದ ಹಿನ್ನೆಲೆಯಲ್ಲಿ ಭಾರತ ತಂಡದ ಸದಸ್ಯರು ಏಕದಿನ ಸರಣಿಯ ಬಳಿಕ ಅಹಮದಾಬಾದ್ ಹೋಟೆಲ್‌ನಲ್ಲೇ ಉಳಿದುಕೊಂಡಿದ್ದರು.

    *ನನ್ನ ಪ್ರಕಾರ ವಿರಾಟ್ ಕೊಹ್ಲಿ ಈಗ ಕೆಟ್ಟ ಾರ್ಮ್‌ನಲ್ಲಿಲ್ಲ. ವಿಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಹೆಚ್ಚು ರನ್ ಗಳಿಸಲಿಲ್ಲ. ಆದರೆ ಅವರು ಲಯ ಕಳೆದುಕೊಂಡಂತೆ ಕಾಣಿಸುತ್ತಿಲ್ಲ. ನೆಟ್ಸ್‌ನಲ್ಲೂ ಉತ್ತಮ ಅಭ್ಯಾಸ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಅವರಿಂದ ದೊಡ್ಡ ಇನಿಂಗ್ಸ್ ಬರಲಿದೆ.
    |ವಿಕ್ರಮ್ ರಾಥೋಡ್, ಬ್ಯಾಟಿಂಗ್ ಕೋಚ್

    ಕಿಶನ್ ವರ್ಸಸ್ ಋತುರಾಜ್
    ಕನ್ನಡಿಗ ಕೆಎಲ್ ರಾಹುಲ್ ಗಾಯದಿಂದಾಗಿ ಟಿ20 ಸರಣಿಗೆ ಅಲಭ್ಯರಾಗಿದ್ದಾರೆ. ಇದರಿಂದಾಗಿ ನಾಯಕ ರೋಹಿತ್ ಶರ್ಮ ಜತೆಗೆ ಇನಿಂಗ್ಸ್ ಆರಂಭಿಸಲು ಇಶಾನ್ ಕಿಶನ್ ಮತ್ತು ಋತುರಾಜ್ ಗಾಯಕ್ವಾಡ್ ನಡುವೆ ಪೈಪೋಟಿ ಏರ್ಪಟ್ಟಿದೆ. ಈಡನ್ ಪಿಚ್ ಪರಿಶೀಲಿಸಿದ ಬಳಿಕ ಇವರಿಬ್ಬರಲ್ಲಿ ಒಬ್ಬರನ್ನು ಆರಿಸುವೆವು ಎಂದು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಹೇಳಿದ್ದಾರೆ.

    ಏಕದಿನ ವಿಶ್ವಕಪ್ ಕಡೆಗಣನೆ ಬಳಿಕ ಬ್ಯಾಟ್ ಕೆಳಗಿಟ್ಟು ಹಾಕಿ ಸ್ಟಿಕ್ ಹಿಡಿದ ಜೆಮೀಮಾ ರೋಡ್ರಿಗಸ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts