More

    ಜ. 20ರಿಂದ ರೂಫ್​ಟಾಪ್​ ಸೋಲಾರ್​ ಸಬ್ಸಿಡಿ ಹೆಚ್ಚಳ: ಮನೆ ಮೇಲ್ಛಾವಣಿಯಲ್ಲಿ ನೀವೂ ವಿದ್ಯುತ್​ ಉತ್ಪಾದಿಸಿ ಲಾಭ ಮಾಡಿಕೊಳ್ಳಿ

    ನವದೆಹಲಿ:  ಪರಿಸರದಲ್ಲಿ ಹೇರಳವಾಗಿ ಹಾಗೂ ಉಚಿತವಾಗಿ ಸಿಗುವ ಸೂರ್ಯನ ಬಿಸಿಲನ್ನು ಬಳಸಿಕೊಳ್ಳುವ
    ಸೌರ ವಿದ್ಯುತ್​ ಉತ್ಪಾದಿಸುವ ಯೋಜನೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರೋತ್ಸಾಹ ಧನ ಹೆಚ್ಚಳ ಮಾಡಿದೆ. ಈ ಪ್ರೋತ್ಸಾಹ ಧನ ಹೆಚ್ಚಳವು ಜ. 20ರಿಂದ ಜಾರಿಗೆ ಬರಲಿದೆ.

    ಮೇಲ್ಛಾವಣಿಯ ಸೌರ ಕಾರ್ಯಕ್ರಮದ (ರೂಫ್​ಟಾಪ್​ ಸೋಲಾರ್​ ಪ್ರೊಗ್ರಾಂ) ಅಡಿಯಲ್ಲಿ ವಸತಿ ವಲಯಕ್ಕೆ ಕೇಂದ್ರ ಸರ್ಕಾರವು ಹಣಕಾಸು ನೆರವನ್ನು ಹೆಚ್ಚಿಸಿದೆ.

    ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಅಧಿಸೂಚನೆಯ ಪ್ರಕಾರ,

    3 ಕಿಲೋ ವ್ಯಾಟ್ ​ಸಾಮರ್ಥ್ಯದವರೆಗೆ ವಿದ್ಯುತ್​ ಉತ್ಪಾದಿಸುವುದಕ್ಕೆ ಸಬ್ಸಿಡಿಯನ್ನು ಪ್ರತಿ ಕಿಲೋ ವ್ಯಾಟ್​ಗೆ ರೂ 18,000ಕ್ಕೆ ಏರಿಸಲಾಗಿದೆ. ಹಿಂದಿನ ಸಬ್ಸಿಡಿಗೆ ಹೋಲಿಸಿದರೆ, ಇದು ಶೇಕಡಾ 23.4ರಷ್ಟು ಹೆಚ್ಚಳವಾಗುತ್ತದೆ. ಇದುವರೆಗೆ ಈ ಸಬ್ಸಿಡಿ ಮೊತ್ತು 14,588 ರೂಪಾಯಿ ಇತ್ತು.

    3 ಕಿಲೋ ವ್ಯಾಟ್​ಗಿಂತ ಹೆಚ್ಚಿನ ಮತ್ತು 10 ಕಿಲೋ ವ್ಯಾಟ್​ ಒಳಗಿನ ವಿದ್ಯುತ್​ ಉತ್ಪಾದನೆ ಸಾಮರ್ಥ್ಯಕ್ಕೆ ಈ ನೆರವನ್ನು ಪ್ರತಿ ಕಿಲೋ ವ್ಯಾಟ್​ಗೆ 7,294 ರಿಂದ 9,000 ರೂಪಾಯಿಗೆ ಹೆಚ್ಚಿಸಲಾಗಿದೆ.

    ಒಂದು ವರ್ಷದ ಹಿಂದೆ ಕೇಂದ್ರ ಸರ್ಕಾರವು ಮೇಲ್ಛಾವಣಿ ಯೋಜನೆಗಳಿಗೆ ಪರಿಷ್ಕರಣೆಯನ್ನು ಮಾಡಿತ್ತು.
    ಹೊಸ ದರಗಳು ಜನವರಿ 20 ರ ನಂತರದ ಎಲ್ಲಾ ಭವಿಷ್ಯದ ಬಿಡ್‌ಗಳಿಗೆ ಮತ್ತು ಜನವರಿ 5 ರ ನಂತರ ಸಲ್ಲಿಸಲಾಗುವ ಕ್ಲೈಮ್‌ಗಳಿಗೆ ಅನ್ವಯಿಸುತ್ತವೆ.

    ಈಗ ಸೌರ ಛಾವಣಿಯ ಮೂಲಕ ದೇಶದಲ್ಲಿ 11 ಗಿಗಾ ವ್ಯಾಟ್​ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಇದರಲ್ಲಿ ಮನೆ ಮೇಲ್ಛಾವಣಿ ಮೂಲಕ 2.7 ಗಿಗಾ ವಾಟ್​ ಉತ್ಪಾದಿಸಲಾಗುತ್ತಿದೆ. ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ಈಗ ಸಬ್ಸಿಡಿ ಮೊತ್ತವನ್ನು ಹೆಚ್ಚಿಸಿರುವುದರಿಂದ ಮನೆಗಳ ಮೇಲ್ಛಾಣಿ ಸೌರ ವಿದ್ಯುತ್ ಉತ್ಪಾದನೆ ಸಾಕಷ್ಟು ಹೆಚ್ಚಳವಾಗುತ್ತದೆ ಎಂದು ಅಂದಾಜಿಸಲಾಗಿದೆ.

    ಈ ರೀತಿ ಮನೆ ಮೇಲ್ಛಾವಣಿ ಮೂಲಕ ಉತ್ಪಾದಿಸಿದ ವಿದ್ಯುತ್​ ಅನ್ನು ಆ ಮನೆಯವರು ಬಳಸಿಕೊಂಡ ನಂತರ ವಿದ್ಯುತ್ ವಿತರಣಾ ಕಂಪನಿಗಳು ಮೇಲ್ಛಾವಣಿಯ ಖರೀದಿ ಮಾಡುವುದು ಕಡ್ಡಾಯವಾಗಿದೆ. ಈಗ ಹೆಚ್ಚಾಗಿರುವ ಸಬ್ಸಿಡಿ ನೆರವಿನ ಮೂಲಕ ಮನೆ ಮೇಲ್ಛಾವಣಿ ಸೌರ ವಿದ್ಯುತ್​ ಉತ್ಪಾಸಿದಿಸಿ ಮನೆ ಬಳಸಿಕೊಂಡ ನಂತರ ಉಳಿದುದನ್ನು ವಿದ್ಯುತ್​ ವಿತರಣಾ ಕಂಪನಿಗಳಿಗೆ ಮಾರುವ ಮೂಲಕ ಲಾಭ ಮಾಡಿಕೊಳ್ಳಲು ಉತ್ತಮ ಅವಕಾಶ ಸೃಷ್ಟಿಯಾಗಿದೆ.

    ಒರಾಕಲ್​ ಕಂಪನಿಯ ಮಿರಾಕಲ್​: ಷೇರು ಹೂಡಿಕೆದಾರರಿಗೆ 3 ದಿನಗಳಲ್ಲಿಯೇ 40% ಲಾಭ

    ಮೂರೇ ತಿಂಗಳಲ್ಲಿ ಮಲ್ಟಿಬ್ಯಾಗರ್ ಸ್ಟಾಕ್​ಗಳಾದ ಸ್ಮಾಲ್​ ಕ್ಯಾಪ್​ಗಳು: ಇವುಗಳಲ್ಲಿ ನೀವು ಹೂಡಿಕೆ ಮಾಡಿದರೆ ಲಾಭ ಸಿಗುವುದೇ?

    3 ದಿನಗಳ ಕರಡಿ ಕುಣಿತಕ್ಕೆ ಬ್ರೇಕ್​, ಮತ್ತೆ ಗುಳಿಯ ಗುಟುರು: ಷೇರು ಮಾರುಕಟ್ಟೆ ಚೇತರಿಕೆ ಏಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts