More

    ಒರಾಕಲ್​ ಕಂಪನಿಯ ಮಿರಾಕಲ್​: ಷೇರು ಹೂಡಿಕೆದಾರರಿಗೆ 3 ದಿನಗಳಲ್ಲಿಯೇ 40% ಲಾಭ

    ಮುಂಬೈ: ಮಿಡ್‌ಕ್ಯಾಪ್ ವರ್ಗದ ಐಟಿ ಸ್ಟಾಕ್ ಆಗಿರುವ ಒರಾಕಲ್ ಫೈನಾನ್ಷಿಯಲ್ ಸರ್ವೀಸಸ್ ಸಾಫ್ಟ್‌ವೇರ್ ಲಿಮಿಟೆಡ್​ ಈಗ ಮೂರು ದಿನಗಳಲ್ಲಿ ಹೂಡಿಕೆದಾರರಿಗೆ ಅದ್ಭುತ ಲಾಭ ನೀಡಿದೆ.

    ಜನವರಿ 18 ರಂದು, ಗುರುವಾರ ಒಂದೇ ದಿನದಲ್ಲಿ 30% ನಷ್ಟು ಆದಾಯವನ್ನು ಹೂಡಿಕೆದಾರರಿಗೆ ಇದು ನೀಡಿದೆ. ಅಲ್ಲದೆ, ಜನವರಿ 19ರಂದು, ಶುಕ್ರವಾರ ಕೂಡ ಮತ್ತೆ 5.07% ಏರಿಕೆಯನ್ನು ಈ ಷೇರು ಕಂಡಿದೆ. ಈ ಮೂಲಕ ಕೇವಲ ಎರಡು ದಿನಗಳಲ್ಲಿ 35% ರಷ್ಟು ಲಾಭವನ್ನು ಹೂಡಿಕೆದಾರರಿಗೆ ನೀಡಿದೆ. ಇದರ ಹಿಂದಿನವಾದ ಬುಧವಾರವೂ ಅಂದಾಜು ಶೇಕಡಾ 5ರಷ್ಟು ಹೆಚ್ಚಳವನ್ನು ದಾಖಲಿಸಿದೆ.

    ಗುರುವಾರ ಬಿಎಸ್​ಇ ಮತ್ತು ನಿಫ್ಟಿ ಸೂಚ್ಯಂಕಗಳು ಸಾಕಷ್ಟು ಕುಸಿತ ಕಂಡರೂ ಈ ಸ್ಟಾಕ್​ ಬೆಲೆ ಗಗನಮುಖಿಯಾಗಿದ್ದು ವಿಶೇಷ.

    2023-24ನೇ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿನ ದೃಢವಾದ ಕಾರ್ಯಕ್ಷಮತೆಯೇ ಒರಾಕಲ್‌ನ ಷೇರು ಏರಿಕೆಗೆ ಕಾರಣವಾಗಿದೆ ಎಂಬುದು ವಿಶ್ಲೇಷಕರ ಅಭಿಮತವಾಗಿದೆ.

    ಬಿಎಸ್‌ಇಯಲ್ಲಿ, ಈ ಷೇರಿನ ಬೆಲೆಯು ಗುರುವಾರ 1457.90 ಅಥವಾ 28.66% ರಷ್ಟು ಏರಿಕೆಯಾಗಿ 6,545.30 ರೂ.ಗೆ ತಲುಪಿತು. ಅಲ್ಲದೆ, 52 ವಾರಗಳ ಹೊಸ ಗರಿಷ್ಠ ರೂ 6,613.75 ಕ್ಕೆ ತಲುಪಿತು. ಶುಕ್ರವಾರ ಕೂಡ 321.60 ಅಥವಾ ಶೇಕಡಾ 5.07ರಷ್ಟು ಹೆಚ್ಚಳವಾಗಿ 6877.10 ರೂಪಾಯಿಗೆ ಮುಟ್ಟಿತು. ಒರಾಕಲ್ ಷೇರುಗಳು ಸತತ ಮೂರು ದಿನಗಳಿಂದ ಏರುಗತಿಯಲ್ಲಿವೆ. ಜನವರಿ 17-19ರ ನಡುವೆ ಈ ಸ್ಟಾಕ್ 40ರಷ್ಟು ಏರಿಕೆ ಕಂಡಿದೆ.

    ಕಳೆದ 52 ವಾರಗಳಲ್ಲಿ ಈ ಷೇರಿನ ಕನಿಷ್ಠ ಬೆಲೆ ರೂ 2,987.40 ಆಗಿತ್ತು. ಈಗ ಎರಡು ಪಟ್ಟಿಗಿಂತಲೂ ಬೆಲೆ ಹೆಚ್ಚಾಗಿ ಮಲ್ಟಿ-ಬ್ಯಾಗರ್ ಸ್ಟಾಕ್​ ಆಗಿ ಹೊರಹೊಮ್ಮಿದೆ.

    ಒರಾಕಲ್ ಫೈನಾನ್ಷಿಯಲ್ ಸರ್ವೀಸಸ್ ಸಾಫ್ಟ್‌ವೇರ್ ಲಿಮಿಟೆಡ್ ಭಾರತ ಮೂಲದ ಕಂಪನಿಯಾಗಿದೆ. ಇದು
    ಹಣಕಾಸು ಸೇವೆಗಳಿಗೆ ಮಾಹಿತಿ ತಂತ್ರಜ್ಞಾನ ಪರಿಹಾರಗಳು ಮತ್ತು ಹಣಕಾಸು ಉದ್ಯಮಗಳಿಗೆ ವ್ಯಾಪಾರ ಪ್ರಕ್ರಿಯೆ ಸೇವೆಗಳನ್ನು ಒದಗಿಸುವ ಐಟಿ ಕಂಪನಿಯಾಗಿದೆ.

    ಮೂರೇ ತಿಂಗಳಲ್ಲಿ ಮಲ್ಟಿಬ್ಯಾಗರ್ ಸ್ಟಾಕ್​ಗಳಾದ ಸ್ಮಾಲ್​ ಕ್ಯಾಪ್​ಗಳು: ಇವುಗಳಲ್ಲಿ ನೀವು ಹೂಡಿಕೆ ಮಾಡಿದರೆ ಲಾಭ ಸಿಗುವುದೇ?

    3 ದಿನಗಳ ಕರಡಿ ಕುಣಿತಕ್ಕೆ ಬ್ರೇಕ್​, ಮತ್ತೆ ಗುಳಿಯ ಗುಟುರು: ಷೇರು ಮಾರುಕಟ್ಟೆ ಚೇತರಿಕೆ ಏಕೆ?

    ಮಧ್ಯಂತರ ಬಜೆಟ್ 2024: ತೆರಿಗೆದಾರರು ಬಯಸುವುದೇನು? ನಿಮಗೆ ದೊರೆಯಬಹುದಾದದ ಅನುಕೂಲಗಳೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts