More

    ಸಿದ್ಧರಾಮೇಶ್ವರ ಸಂದೇಶ ಜೀವನದಲ್ಲಿ ಅಳವಡಿಸಿಕೊಳ್ಳಿ

    ಶಹಾಬಾದ್: ಶ್ರೀ ಸಿದ್ಧರಾಮೇಶ್ವರರು ಕಾಯಕಜೀವಿಗಳಾಗಿದ್ದು, ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ಸಂದೇಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಂಸದ ಡಾ.ಉಮೇಶ ಜಾಧವ್ ಕರೆ ನೀಡಿದರು.

    ಬಸವೇಶ್ವರ ವೃತ್ತದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾಯಕಯೋಗಿ ಸಿದ್ಧರಾಮೇಶ್ವರ ಜಯಂತಿ ಉದ್ಘಾಟಿಸಿ ಮಾತನಾಡಿ, ಎಲ್ಲರೂ ಸಮಾನರು, ಎಲ್ಲ ತಾರತಮ್ಯಗಳನ್ನು ಬಿಟ್ಟು ಒಟ್ಟಾಗಿ ಬದುಕು ನಡೆಸಬೇಕು ಎಂದು ಸಿದ್ಧರಾಮೇಶ್ವರರು ಸಂದೇಶ ನೀಡಿದ್ದರು. ಭೋವಿ ಸಮಾಜದಲ್ಲಿ ಜನಿಸಿದ ಮಹಾನುಭಾವ, ಹಲವು ಶತಮಾನಗಳ ಹಿಂದೆಯೇ ಮಹಿಳೆ ಸಮಾನತೆ ಪ್ರತಿಪಾದಿಸಿದ್ದರು. ವಚನಗಳ ಮೂಲಕ ಅಸಮಾನತೆ, ವರ್ಣ, ಜಾತಿ, ಲಿಂಗ ತಾರತಮ್ಯವನ್ನು ತೊಡೆದು ಹಾಕುವ ಕೆಲಸ ಮಾಡಿದ್ದರು. ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ಮೂರನೇ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

    ಉದ್ಯಮಿ ನರೇಂದ್ರ ವರ್ಮಾ, ನಗರ ಠಾಣೆ ಪಿಐ ನಟರಾಜ ಲಾಡೆ, ಭೋವಿ ಸಮಾಜದ ನಗರ ಅಧ್ಯಕ್ಷ ರಾಜು ಮಿಸ್ತ್ರಿ, ಪ್ರಮುಖರಾದ ಕನಕಪ್ಪ ದಂಡಗುಲಕರ್, ಭಗವಾನ ದಂಡಗುಲಕರ, ಬಲಭೀಮ ಕುಸಾಳೆ, ರಮೇಶ ಪವಾರ್, ಶಂಕರ ಕುಸಾಳೆ, ಗಿರಿರಾಜ ಮೇಲಗಿರಿ, ಮನೋಜ ಮಿಸ್ತ್ರಿ, ಸಂಜಯ ವಿಟಕರ್, ಜಯಹಿಂದ್ ಚೌಧರಿ, ಶ್ರೀನಿವಾಸ ದೇವಕರ್, ವಿನೋದ ಗೋಟೆಕರ, ವಿಶ್ವರಾಜ ಕುರುಡೆಕರ, ಶೀತಲ್ ಭೋವಿ, ಗಿರಿ ಕೇತ್ರೆ, ಶ್ರೀನಿವಾಸ ನೆದಲಗಿ, ಯಲ್ಲಪ್ಪ ದಂಡಗುಲಕರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts