More

    ಬಾಲಕನ ಹೊಟ್ಟೆಯಲ್ಲಿದ್ದವು ಹನ್ನೆರಡು ಅಯಸ್ಕಾಂತಗಳು!

    ಬೆಳಗಾವಿ: ಗೋವಾ ರಾಜ್ಯದ ಈ ಹುಡುಗ ಅಂತಿಂಥವನಲ್ಲ; ಬರೋಬ್ಬರಿ ಹನ್ನೆರಡು ಅಯಸ್ಕಾಂತಗಳನ್ನು (ಮ್ಯಾಗ್ನೆಟ್) ನುಂಗಿಬಿಟ್ಟಿದ್ದ! ಆದರೆ ಸುಲಭವಾಗಿ ಜೀರ್ಣವಾಗಲು ಅವೇನು ಬಾಳೆಹಣ್ಣುಗಳೇ? ಕೆಲವೇ ದಿನಗಳಲ್ಲಿ ಆತನಿಗೆ ತೀವ್ರ ಹೊಟ್ಟೆ ನೋವು ಶುರುವಾಯಿತು.

    ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಆತನನ್ನು ಪಾಲಕರು ಇಲ್ಲಿನ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಗೆ ಕರೆ ತಂದಿದ್ದರು. ಬಾಲಕನ ಹೊಟ್ಟೆಯ ಎಕ್ಸರೇ ತೆಗೆದು ನೋಡಿದಾಗ, ಅದರಲ್ಲಿ ಯಾವುದೋ ವಸ್ತುಗಳು ಇರುವುದು ಪತ್ತೆಯಾಯಿತು.

    ಆಗ, ಚಿಕ್ಕ ಮಕ್ಕಳ ತಜ್ಞ ಡಾ. ಕುರಬೇಟ ಅವರು ಬಾಲಕನಿಗೆ ಶಸ್ತ್ರಚಿಕಿತ್ಸೆ ನೆರವೇರಿಸಿ, ಆತ ನುಂಗಿದ್ದ ಬಟನ್ ಆಕಾರದಲ್ಲಿರುವ 12 ಅಯಸ್ಕಾಂತಗಳನ್ನು ಹೊರ ತೆಗೆದಿದ್ದಾರೆ.

    ಇದನ್ನೂ ಓದಿ  ಎಳೆ ಮಕ್ಕಳನ್ನು ಮೂಟೆಯ ರೀತಿ ಟ್ರಕ್​ ಮೇಲೆ ಎಸೆದರು!

    ಕರೊನಾ ಹಿನ್ನೆಲೆಯಲ್ಲಿ ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಮಗನಿಗೆ ಚಿಕಿತ್ಸೆ ಕೊಡಿಸಲು ಪಾಲಕರು ಪರದಾಡಿದ್ದರು. ಅಂತಿಮವಾಗಿ ಗೋವಾ ಸರ್ಕಾರದ ಅನುಮತಿ ಪಡೆದು ಬೆಳಗಾವಿಗೆ ಬಂದಿದ್ದರು.
    ಕ್ಷಣಕ್ಷಣಕ್ಕೂ ಬಾಲಕನ ಆರೋಗ್ಯ ಗಂಭೀರವಾಗುತ್ತಿರುವುದನ್ನು ಅರಿತ ಡಾ.ಸಂತೋಷ ಅವರು, ಮಧ್ಯರಾತ್ರಿಯೇ ಶಸ್ತ್ರಚಿಕಿತ್ಸೆಗೆ ಅಣಿಯಾದರು. ಆದರೆ, ಲ್ಯಾಪ್ರೊಟೊಮಿ ಮೂಲಕ ಶಸ್ತ್ರಚಿಕಿತ್ಸೆ ಮಾಡಲು ಹೊರಟರೆ ಮತ್ತೊಂದು ಆಘಾತ ಎದುರಾಯಿತು.

    ಹೊಟ್ಟೆಯ ಸಣ್ಣ ಕರಳಿನಲ್ಲಿ 5 ರಂಧ್ರಗಳು ಕಂಡುಬಂದವು. ಪ್ರತಿ ಆಯಸ್ಕಾಂತ ಬೇರೆ ಜಾಗದಲ್ಲಿದ್ದರೂ, ಅವುಗಳು ಒಂದಕ್ಕೊಂದು ಅಂಟಿಕೊಂಡು ಹೊಟ್ಟೆಯ ವಿವಿಧ ಭಾಗಗಳಲ್ಲಿ ರಂಧ್ರ ಮಾಡಿದ್ದವು. ಹೀಗಾಗಿ ಅಯಸ್ಕಾಂತ ಹೊರತೆಗೆಯುವುದು ಕಠಿಣವಾಗಿತ್ತು.

    ಸುಮಾರು ಎರಡೂವರೆ ಗಂಟೆಗೂ ಅಧಿಕ ಸಮಯ ನಡೆದ ಶಸ್ತ್ರಚಿಕಿತ್ಸೆಯಲ್ಲಿ ಅವುಗಳನ್ನು ಹೊರತೆಗೆಯಲಾಯಿತು. ಅಲ್ಲದೆ, 3 ಕಡೆ ರಂಧ್ರ ಬಿದ್ದಿದ್ದ ಕರಳನ್ನು ಮರುಜೋಡಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಚಿಕಿತ್ಸೆ ಬಳಿಕ ಕೇವಲ 7 ದಿನಗಳಲ್ಲಿ ಬಾಲಕ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಮನೆಗೆ ಕಳುಹಿಸಿಕೊಡಲಾಯಿತು.

    ಇದನ್ನೂ ಓದಿ ಲಾಕ್​ಡೌನ್​ನಲ್ಲೇ ಸೂಪರ್​ಸ್ಟಾರ್​ ರಜನಿಕಾಂತ್​ ಕಡೆಯಿಂದ ಬಂತು ಸಿಹಿಸುದ್ದಿ!

    ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿದ ಡಾ. ಸಂತೋಷ ಕುರಬೇಟ ಹಾಗೂ ಅವರ ತಂಡವನ್ನು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ಎಂ.ವಿ. ಜಾಲಿ, ಜೆಎನ್‌ಎಂಸಿ ಪ್ರಾಚಾರ್ಯೆ ಡಾ. ಎನ್.ಎಸ್. ಮಹಾಂತಶೆಟ್ಟಿ ಅಭಿನಂದಿಸಿದ್ದಾರೆ.

    ಈ ಕುರಿತು ಮಾತನಾಡಿದ ಡಾ.ಸಂತೋಷ ಕುರಬೇಟ, ‘ಹಿಂದೆ ಭಾರತದಲ್ಲಿ 4-6 ಆಯಸ್ಕಾಂತದ ಬಟನ್‌ಗಳನ್ನು ನುಂಗಿದ ಕುರಿತು ವರದಿಯಾಗಿತ್ತು. ಆದರೆ, 12 ಆಯಸ್ಕಾಂತದ ಬಟನ್‌ಗಳನ್ನು ನುಂಗಿದ ಮೊದಲ ಪ್ರಕರಣ ಇದು. ಎಲ್ಲ ಬಟನ್‌ಗಳನ್ನು ಸುರಕ್ಷಿತವಾಗಿ ಹೊರತೆಗೆದು, ಹಾಳಾದ ಕರಳನ್ನು ಜೋಡಿಸಿ ಮಗುವಿನ ಪ್ರಾಣ ಉಳಿಸಲಾಗಿದೆ’ ಎಂದು ಹೇಳಿದರು.

    ರೈತನಿಂದಲೇ ಟ್ರ್ಯಾಕ್ಟರ್​ ಹರಿಸಿ ರೇಷ್ಮೆ ಬೆಳೆ ನೆಲಸಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts