More

    ಕರೊನಾದಿಂದಾಗಿ ಒಂದೇ ದಿನ 19 ಮಂದಿ ಸಾವು; ಐಸಿಯುನಲ್ಲಿ 327ಕ್ಕೆ ಏರಿತು ಸೋಂಕಿತರ ಸಂಖ್ಯೆ

    ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆ ಕಂಡಿದ್ದು, ಶನಿವಾರ 4,373 ಹೊಸ ಪ್ರಕರಣಗಳು ದೃಢಪಟ್ಟಿವೆ. ಇದೇ ವೇಳೆ ತೀವ್ರ ನಿಗಾ ಘಟಕ (ಐಸಿಯು)ದಲ್ಲಿ ದಾಖಲಾದವರ ಸಂಖ್ಯೆ 327ಕ್ಕೆ ಏರಿಕೆಯಾಗಿದೆ. ಮಾರ್ಚ್ ತಿಂಗಳ ಆರಂಭದಲ್ಲಿ ದಿನವೊಂದಕ್ಕೆ 500ರ ಆಸುಪಾಸಿನಲ್ಲಿದ್ದ ಪ್ರಕರಣಗಳ ಸಂಖ್ಯೆ ಎರಡು ವಾರಗಳ ನಂತರ ಏರುಗತಿ ಪಡೆದುಕೊಂಡಿತ್ತು. ಇದೀಗ ಏಪ್ರಿಲ್ ತಿಂಗಳ ಆರಂಭದಲ್ಲೇ ನಿತ್ಯ 3ರಿಂದ 4 ಸಾವಿರ ಪ್ರಕರಣಗಳು ವರದಿಯಾಗುತ್ತಿದ್ದು, ದಿನದ ಸೋಂಕು ಪ್ರಮಾಣದ ದರ ಶೇ. 3.53ಕ್ಕೆ ಏರಿದೆ. ಈವರೆಗೆ ಸೋಂಕಿತರ ಸಂಖ್ಯೆ 10.10 ಲಕ್ಷ ದಾಟಿದೆ.

    ಒಂದೇ ದಿನದಲ್ಲಿ ಬೆಂಗಳೂರಿನಲ್ಲಿ 3,002 ಸೋಂಕು ಪ್ರಕರಣಗಳು ವರದಿಯಾಗಿದ್ದು, ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ (ಬೀದರ್ 172, ಮೈಸೂರು 171, ತುಮಕೂರು 167, ಕಲಬುರಗಿ 151) ಹೊಸ ಪ್ರಕರಣಗಳ ಸಂಖ್ಯೆ ಮೂರಂಕಿ ತಲುಪಿದೆ. ಉಳಿದ 21 ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಎರಡಂಕಿಗೆ ಏರಿದೆ. ಸೋಂಕು ಹೆಚ್ಚಳದಿಂದಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ 36,614ಕ್ಕೆ ಏರಿಕೆಯಾಗಿದೆ. 1,959 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಒಟ್ಟು ಗುಣಮುಖರ ಸಂಖ್ಯೆ 9.61 ಲಕ್ಷ ಮೀರಿದೆ.

    ಇದನ್ನೂ ಓದಿ: ಮದ್ವೆಗೆ ಕೆಲವೇ ನಿಮಿಷಗಳಿರುವಾಗ ಪ್ರಿಯಕರನ ಜತೆ ವಧು ಪರಾರಿ; ಆಕೆಯ ತಂಗಿಯನ್ನೇ ಮದ್ವೆಯಾದ ವರ; ಕೊನೆಗೆ ಮೊದಲರಾತ್ರಿಗೂ ಬಂತು ಕುತ್ತು! 

    19 ಮಂದಿ ಬಲಿ: ಕೋವಿಡ್ ಸೋಂಕಿತರಲ್ಲಿ ಬೆಂಗಳೂರು ಮತ್ತು ಮಂಗಳೂರಿನಲ್ಲಿ ತಲಾ ಆರು ಮಂದಿ, ಹಾಸನದಲ್ಲಿ ಮೂವರು, ಮಂಡ್ಯದಲ್ಲಿ ಇಬ್ಬರು, ತುಮಕೂರು ಮತ್ತು ಕಲಬುರಗಿಯಲ್ಲಿ ತಲಾ ಒಬ್ಬರು ಸೇರಿ ಕಳೆದ 24 ಗಂಟೆಯಲ್ಲಿ 19 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಸೋಂಕಿತರ ಸಾವಿನ ಸಂಖ್ಯೆ 12,610 ತಲುಪಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

    ತಿಂಗಳ ಹಿಂದೆ ಮದುವೆಯಾಗಿದ್ದವಳು ಅಪಘಾತಕ್ಕೆ ಬಲಿ! ಗಂಡನ ಸ್ಥಿತಿ ಗಂಭೀರ

    ವಿದ್ಯಾರ್ಥಿಗಳಿಗೆ ಪರೀಕ್ಷೆ ಬೇಕಾ-ಬೇಡವಾ? ನಿರ್ಧರಿಸಲು ಸೋಮವಾರ ನಡೆಯಲಿದೆ ಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts