More

    ಕವಿಗಳಲ್ಲಿ ಸಮಭಾವ ದೃಷ್ಟಿಕೋನ ಇರಲಿ

    ಮಾನ್ವಿ: ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ಬೆಳೆಯಬೇಕು ಎಂದರೆ ಪ್ರತಿಯೊಬ್ಬರೂ ಕನ್ನಡ ಸಾಹಿತ್ಯ ಪುಸ್ತಕಗಳನ್ನು ಖರೀದಿಸಿ ಓದಬೇಕು. ಇದರಿಂದ ಸಾಹಿತಿಗಳನ್ನೂ ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಗಜಲ್ ಕವಿ ಅಲ್ಲಾಗಿರಿರಾಜ್ ಹೇಳಿದರು.

    ಇದನ್ನೂ ಓದಿ: ವೇಮನಗೆ ಅಪಥ್ಯವಾಗಿದ್ದ ರಾಮಾಯಣ-ಮಹಾಭಾರತ

    ಪಟ್ಟಣದ ನೇತಾಜಿ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ಹುಸೇನಿ ವಲ್ಲೂರು ರಚಿಸಿದ ‘ಹುಸೇನಿ ದ್ವಿಪದಿಗಳು’ ಕೃತಿ ಬಿಡುಗಡೆಗೊಳಿಸಿ ಭಾನುವಾರ ಮಾತನಾಡಿದರು.

    ಕನ್ನಡದಲ್ಲಿ ಗಜಲ್‌ಗಳನ್ನು ದ್ವಿಪದಿಗಳಲ್ಲಿ ಬರೆಯುವುದನ್ನು ತೊರಿಸಿಕೊಟ್ಟವರು ರಾಯಚೂರಿನ ಹಿರಿಯ ಸಾಹಿತಿ ಶಾಂತರಸರು. ಗಜಲ್ ಇಂದಿಗೂ ಪ್ರಸ್ತುತವಾಗಿದೆ ಎಲ್ಲರನ್ನೂ ಸಮಭಾವದಿಂದ ನೋಡುವ ದೃಷ್ಟಿಕೋನವನ್ನು ಕವಿಗಳು ಬೆಳೆಸಿಕೊಳ್ಳಬೇಕು ಎಂದರು.

    ನೇತಾಜಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಕೆ.ವಿಜಯಲಕ್ಷ್ಮೀ, ಸಾಹಿತಿಗಳಾದ ರಮೇಶಬಾಬು ಯಾಳಗಿ, ಸಿ.ಎಸ್.ಆನಂದ, ಕವಿಗಳಾದ ಅಂಬಮ್ಮ, ಉಮರ್ ದೇವರಮನಿ, ವೇಣು, ಶಿವಶಂಕರ, ಉಷಾಜ್ಯೋತಿ,

    ಮಹಾದೇವ ಪಾಟೀಲ್, ಅಭಿಷೇಕ್ ಬಳೆ, ಕೆ.ಬಿ. ನವಾಜ್, ಶಂಕುಸುತ ಮಹಾದೇವ, ಮಲ್ಲೇಶ ಭೈರವ, ಗ್ರಾಪಂ ಸದಸ್ಯೆ ನಾಗಮ್ಮ, ಡಾ.ಮೆಹಬೂಬ್ ಮದ್ಲಾಪೂರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts