More

    ಸಾಧಿಸುವ ಛಲ ಇರಲಿ

    ಬೆಳಗಾವಿ: ವಿಜ್ಞಾನ ಮತ್ತು ತಂತ್ರಜ್ಞಾನದ ಯುಗದಲ್ಲಿ ಎಲ್ಲ ಮಾಹಿತಿ ಸುಲಭವಾಗಿ ದೊರಕುತ್ತದೆ. ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಗುರಿ ಸಾಧಿಸುವ ಛಲ ಹೊಂದಬೇಕು ಎಂದು ಎಂಎನ್‌ಸಿ ಮಾರ್ಕೆಟಿಂಗ್ ಮುಖ್ಯಸ್ಥ ನಖೀಬ್ ಬಂದೂಕವಾಲಾ ಹೇಳಿದರು.

    ನಗರದ ನಾಯ್ಕರ ಶಿಕ್ಷಣ ಸಂಸ್ಥೆಯ ರವೀಂದ್ರನಾಥ ಟ್ಯಾಗೋರ್ ಪದವಿಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ 2023-24ನೇ ಸಾಲಿನ ವಾರ್ಷಿಕ ದಿನಾಚರಣೆ ಮತ್ತು ಪಾರಿತೋಷಕ ವಿತರಣೆ ಸಮಾರಂಭದಲ್ಲಿ ಮಾತನಾಡಿದರು. ಗುರಿ, ಪ್ರಾಮಾಣಿಕತೆ, ಉತ್ತಮ ಆಲೋಚನೆ ಮತ್ತು ಸಮಯ ಪಾಲನೆ ಮೈಗೂಡಿಸಿಕೊಂಡು ಸಂಸ್ಕಾರವಂತರಾಗಿ ಬದುಕಬೇಕು ಎಂದು ಸಲಹೆ ನೀಡಿದರು.

    ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಸಿ.ಎನ್.ನಾಯ್ಕರ ಮಾತನಾಡಿ, ವಿದ್ಯಾರ್ಥಿಗಳು ಓದಿನತ್ತ ಗಮನಹರಿಸಬೇಕು. ಸಮಾಜ ಘಾತುಕ ಕೃತ್ಯಗಳಿಂದ ಜೀವನ ನರಕ ಮಾಡಿಕೊಳ್ಳಬಾರದು. ತಂದೆ-ತಾಯಿಯ ಕಷ್ಟ ನೆನಪಿನಲ್ಲಿಟ್ಟುಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಬೇಕು. ಶಿಕ್ಷಣ ಜ್ಞಾನ ನೀಡುವ ಜತೆಗೆ ವಿವೇಕ, ವಿನಯವನ್ನೂ ನೀಡುತ್ತದೆ. ಮಕ್ಕಳು ಶಿಸ್ತು ರೂಢಿಸಿಕೊಳ್ಳಬೇಕು ಎಂದರು.

    ಸಂಸ್ಥೆಯ ಅಧ್ಯಕ್ಷೆ ಶ್ವೇತಾ ನಾಯ್ಕರ ಮಾತನಾಡಿ, ಸಕಾರಾತ್ಮಕವಾಗಿ ಯೋಚಿಸಬೇಕು ಎಂದರು. ಈರಣ್ಣ ನಾಗರಾಳೆ ಸ್ವಾಗತಿಸಿದರು. ದೀಪಾ ಪರಿಚಯಿಸಿದರು. ಪ್ರಿಯಾಂಕ ಪಾಟೀಲ ವರದಿ ವಾಚಿಸಿದರು. ಮಾನಸ್ವಿ, ಲಕ್ಷ್ಮೀ ನಿರೂಪಿಸಿದರು. ವಿದ್ಯಾಧರ ವಂದಿಸಿದರು. 2023-24ನೇ ಸಾಲಿನ ಅತ್ಯುತ್ತಮ ವಿದ್ಯಾರ್ಥಿ ಜಂಗಮ ಸಾಯಿಕೃಷ್ಣಾ, ಅತ್ಯುತ್ತಮ ವಿದ್ಯಾರ್ಥಿನಿ ಇಮಾನಿ ಜಾಧವ ಅವರ ಹೆಸರು ಘೋಷಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts