More

    ಲವರ್​ ಭೇಟಿಯಾಗಲು ಪಾಕ್​ಗೆ ತೆರಳಿದ ಮಹಾರಾಷ್ಟ್ರದ ಯುವಕನಿಗೆ ಗಡಿಯಲ್ಲಿ ಕಾದಿತ್ತು ಶಾಕ್​!

    ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವತಿಯನ್ನು ಭೇಟಿ ಮಾಡಲು ಪಾಕಿಸ್ತಾನಕ್ಕೆ ಪ್ರವೇಶಿಸಲು ಯತ್ನಿಸಿದ ಮಹಾರಾಷ್ಟ್ರದ ಮೂಲದ 20 ವರ್ಷದ ಇಂಜಿನಿಯರ್​ ವಿದ್ಯಾರ್ಥಿಯನ್ನು ಗುಜರಾತಿನ ರಾನ್-ಆಫ್-ಕಚ್ ಗಡಿಯಲ್ಲಿ ಗಡಿ ಭದ್ರತಾ ಪಡೆಯ ಯೋಧರು (ಬಿಎಸ್​ಎಫ್​) ಬಂಧಿಸಿರುವುದಾಗಿ ಅಧಿಕಾರಿಗಳು ಶುಕ್ರವಾರ ಮಾಹಿತಿ ನೀಡಿದ್ದಾರೆ.

    ಬಂಧಿತನನ್ನು ಝಿಶನ್​ ಮೊಹಮ್ಮದ್​ ಸಿದ್ದಿಖಿ ಎಂದು ಗುರುತಿಸಲಾಗಿದ್ದು, ಈತ ಮಹಾರಾಷ್ಟ್ರದ ಒಸ್ಮಾನಾಬಾದ್​ ನಗರದ ಖ್ವಾಜಾಂಗರ್​ ಏರಿಯಾದ ನಿವಾಸಿ. ಗುರುವಾರ ರಾತ್ರಿ ಆತನನ್ನು ಬಂಧಿಸಿದ ಬಿಎಸ್​ಎಫ್​ ಯೋಧರು ಸ್ಥಳೀಯ ಪೊಲೀಸ್​ ಠಾಣೆಯ ವಶಕ್ಕೆ ಒಪ್ಪಿಸಿರುವುದಾಗಿ ಪೂರ್ವ ಕಚ್​ನ ಪೊಲೀಸ್​ ವರಿಷ್ಠಾಧಿಕಾರಿ ಪರಿಕ್ಷಿತಾ ರಾಥೋಡ್ ತಿಳಿಸಿದ್ದಾರೆ.

    ಇದನ್ನೂ ಓದಿರಿ: ಟ್ರೋಲ್​ ಆಗುವ ಬಗ್ಗೆ ಮೊದಲೇ ಗೊತ್ತಿತ್ತಂತೆ: ಹೋಟೆಲ್​ ಮಾಲೀಕ-ಪ್ರತಾಪ್​ ನಡುವೆ ನಡೆದಿತ್ತು ರೋಚಕ ಮಾತುಕತೆ!

    ಗುರುವಾರ ಸಂಜೆ ರಾನ್-ಆಫ್-ಕಚ್ ವ್ಯಾಪ್ತಿಯ ಧೋಲವಿರಾ ಗ್ರಾಮದ ಬಳಿ ಮಹಾರಾಷ್ಟ್ರ ನೋಂದಣಿಯ ಬೈಕ್​ ಪತ್ತೆಯಾದ ಬೆನ್ನಲ್ಲೇ ಪೊಲೀಸರು ಎಚ್ಚರಿಕೆ ನೀಡಿದ್ದರು. ಅದೇ ದಿನದಂದು ರಾತ್ರಿ ಪಾಕಿಸ್ತಾನಕ್ಕೆ ಪ್ರವೇಶಿಸಲು ಗಡಿಯತ್ತ ನಡೆದು ಬರುತ್ತಿದ್ದ ಝಿಶನ್​ನನ್ನು ಬಿಎಸ್​ಎಫ್​ ಯೋದರು ಬಂಧಿಸಿರುವುದಾಗಿ ರಾಥೋಡ್​ ಹೇಳಿದ್ದಾರೆ.

    ಮಹಾರಾಷ್ಟ್ರದ ಪೊಲೀಸ್​ ಅಧಿಕಾರಿಗಳ ಪ್ರಕಾರ ಸಿದ್ದಿಖಿ ಜುಲೈ 11ರಂದು ಒಸ್ಮಾನಾಬಾದ್​ನಲ್ಲಿರುವ ತಮ್ಮ ಮನೆಯನ್ನು ಬಿಟ್ಟಿದ್ದ. ಲಾಕ್​ಡೌನ್​ ಹಿನ್ನೆಲೆಯಲ್ಲಿ ಯಾವುದೇ ಸಾರ್ವಜನಿಕ ಸಂಚಾರ ವ್ಯವಸ್ಥೆ ಇಲ್ಲದೇ ಇರುವುದರಿಂದ ಬೈಕ್​ ಮೂಲಕ ಝಿಶನ್​ ಹೊರಟ್ಟಿದ್ದ. ಕುಚ್​ಗೆ ತೆರಳಿದ ಆತ ಬೈಕ್​ ಮರಳಿನಲ್ಲಿ ಸಿಲುಕಿಕೊಂಡಿದ್ದರಿಂದ ಅಲ್ಲಿಯೇ ಬಿಟ್ಟು ಪಾಕಿಸ್ತಾನದ ಕಡೆಗೆ ನಡೆದುಕೊಂಡು ಸಾಗಿದ್ದಾನೆ.

    ಕಳೆದ ಕೆಲ ದಿನಗಳಿಂದ ಝಿಶನ್​ ಕಾಣದಿದ್ದಾಗ ಪಾಲಕರು ಒಸ್ಮಾನಾಬಾದ್​ ನಗರ ಪೊಲೀಸ್​ ಠಾಣೆಗೆ ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದರು. ಝಿಶನ್​ ಹುಡುಕಲು ಆರಂಭಿಸಿದ ಪೊಲೀಸರು ಮೊದಲು ಆತನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಜಾಲಾಡಿದ್ದಾರೆ. ಕಳೆದ ಕೆಲವು ತಿಂಗಳಿಂದ ಝಿಶನ್ ಪಾಕ್​ ಯುವತಿಯೊಂದಿಗೆ ಸಂಪರ್ಕದಲ್ಲಿರುವುದು ತಿಳಿದಿದೆ. ಯುವತಿಯನ್ನು ಭೇಟಿ ಮಾಡಲು ಪಾಕಿಸ್ತಾನಕ್ಕೆ ತೆರಳಿದ್ದಾನೆ ಎಂಬುದು ಸಹ ಗೊತ್ತಾಗಿದೆ. ಬಳಿಕ ಮೊಬೈಲ್​ ದಾಖಲೆಗಳ ಮೂಲಕ ಆತನ ಜಾಡು ಪತ್ತೆಹಚ್ಚಲು ಪ್ರಯತ್ನಿಸಿದಾಗ ಕಚ್ ಬಳಿ ಇರುವುದು ತಿಳಿದು, ಆತನ ಮಾಹಿತಿಯನ್ನು ಗುಜರಾತ್​ ಪೊಲೀಸರಿಗೆ ನೀಡಿದ್ದಾಗಿ ಒಸ್ಮಾನಾಬಾದ್​ನ ಪೊಲೀಸ್​ ವರಿಷ್ಠಾಧಿಕಾರಿ ರಾಜ್​ತಿಲಕ್​ ರೋಷನ್​ ಮಾಹಿತಿ ನೀಡಿದರು.

    ಇದನ್ನೂ ಓದಿ: ಮೀತಿ ಮೀರುತ್ತಿದ್ದೀರಿ ಜೋಕೆ ಎಂದು ಡ್ರೋನ್ ಪ್ರತಾಪ್​ ಎಚ್ಚರಿಕೆ ನೀಡಿದ್ಯಾರಿಗೆ?

    ಬಳಿಕ ಗುಜರಾತ್​ ಪೊಲೀಸರು ಝಿಶನ್​ ಮಾಹಿತಿಯನ್ನು ಬಿಎಸ್​ಎಫ್​ಗೂ ಸಹ ಶೇರ್​ ಮಾಡಲಾಗಿತ್ತು. ಹೀಗಾಗಿಯೇ ಝಿಶನ್ ಅನ್ನು ಗುರುವಾರ ರಾತ್ರಿ ಬಿಎಸ್​ಎಫ್​ ಹಿಡಿದುಹಾಕಿದೆ. ಇನ್ನೇನು ಪಾಕ್​ ಗಡಿಗೆ ಕಾಲಿಡಬೇಕು ಎನ್ನುವಷ್ಟರಲ್ಲಿ ಝಿಶನ್​ ಬಂಧಿಯಾಗಿದ್ದಾನೆ. ಅಂದಹಾಗೆ ಝಿಶನ್​ ಗೂಗಲ್​ ಮ್ಯಾಪ್​ ಸಹಾಯದಿಂದ ಗಡಿ ದಾಟಲು ತೆರಳಿದ್ದ ಎಂದು ತಿಳಿದುಬಂದಿದೆ. ಯುವತಿ ಮತ್ತು ಝಿಶನ್​ ನಡುವಿನ ಮೊಬೈಲ್​ ಸಂದೇಶಗಳು ನಮ್ಮ ಬಳಿ ಇವೆ ಎಂದು ಒಸ್ಮಾನಾಬಾದ್ ಪೊಲೀಸರು ತಿಳಿಸಿದ್ದು, ಒಂದು ತಂಡ ಆತನನ್ನು ಕರೆತರಲು ಇದೀಗ ಕಚ್​ಗೆ ತೆರಳಿದೆ.​

    ಬಿಎಸ್​ಎಫ್​ ಝಿಶನ್​ ಹಿಡಿದ ಬೆನ್ನಲ್ಲೇ ಆತ ಮಾತನಾಡಿದ್ದು, ಕರಾಚಿ ಮೂಲದ ಯುವತಿಯೊಂದಿಗೆ ಪ್ರೇಮಾಂಕುರವಾಗಿದೆ. ನಾನು ಪಾಕಿಸ್ತಾನಕ್ಕೆ ಹೋಗಲು ಬಯಸಿದ್ದೇನೆಂದು ಹೇಳಿದ್ದಾನೆ. ಸಂಚಾರ ಮಾರ್ಗಕ್ಕಾಗಿ ಗೂಗಲ್​ ಮ್ಯಾಪ್ ಬಳಸಿದ್ದಾನೆ. ಆತನನ್ನು ಬಂಧಿಸಿದಾಗ ನಿತ್ರಾಣ ಸ್ಥಿತಿಯಲ್ಲಿದ್ದ. ಅಲ್ಲದೆ, ರನ್​ ಅಲ್ಲಿ ಸುಮಾರು ಎರಡು ಗಂಟೆಗಳ ಕಾಲ ಪ್ರಜ್ಞೆಯಿಲ್ಲದೇ ಬಿದ್ದಿದೆ ಎಂತಲೂ ಝಿಶನ್​ ಹೇಳಿಕೊಂಡಿದ್ದಾನೆ. (ಏಜೆನ್ಸೀಸ್​)

    ಯುವತಿಯ ಮಾತು ಕೇಳಿ ಬೆತ್ತಲಾದ- ಮುಂದೆ ಸುಸ್ತೋ ಸುಸ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts