More

    ಟ್ರೋಲ್​ ಆಗುವ ಬಗ್ಗೆ ಮೊದಲೇ ಗೊತ್ತಿತ್ತಂತೆ: ಹೋಟೆಲ್​ ಮಾಲೀಕ-ಪ್ರತಾಪ್​ ನಡುವೆ ನಡೆದಿತ್ತು ರೋಚಕ ಮಾತುಕತೆ!

    ದಾವಣಗೆರೆ: ನಕಲಿ ವಿಜ್ಞಾನಿ ಎಂಬುದು ಬಯಲಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್​ ಆಗುತ್ತಿರುವ ಡ್ರೋನ್​ ಪ್ರತಾಪ್​ಗೆ ಹೀಗೆಲ್ಲಾ ಆಗುತ್ತೆ ಎಂದು ಈ ಮೊದಲೇ ತಿಳಿದಿತ್ತಂತೆ. ಈ ವಿಚಾರವನ್ನು ದಾವಣಗೆರೆಯ ಹೋಟೆಲ್​ ಮಾಲೀಕರೊಬ್ಬರು ದಿಗ್ವಿಜಯ ನ್ಯೂಸ್​ಗೆ ಬಹಿರಂಗಪಡಿಸಿದ್ದಾರೆ.

    ಇದನ್ನೂ ಓದಿ: ಮೀತಿ ಮೀರುತ್ತಿದ್ದೀರಿ ಜೋಕೆ ಎಂದು ಡ್ರೋನ್ ಪ್ರತಾಪ್​ ಎಚ್ಚರಿಕೆ ನೀಡಿದ್ಯಾರಿಗೆ?

    ಜುಲೈ 1ರಿಂದ 8ರವರೆಗೆ ದಾವಣಗೆರೆ ನಗರದ ಅರುಣಾ ಸರ್ಕಲ್ ಸಮೀಪದ ಶ್ರೀಗಂಧ ರೆಸಿಡೆನ್ಸಿಯಲ್ಲಿ ಪ್ರತಾಪ್​ ತಂಗಿದ್ದರು. ಈ ವೇಳೆ ಮಾತನಾಡಿದ್ದ ಪ್ರತಾಪ್​, ಪ್ರಧಾನಿ ನರೇಂದ್ರ ಮೋದಿ ಅವರು ಫೋನ್ ಮಾಡಿ ನನಗೆ ಕೆಲಸದ ಆಫರ್ ಕೊಟ್ಟಿದ್ದರು, ನಾನು ನಿರಾಕರಿಸಿದ್ದೆ. ಇನ್ನೊಂದು ವಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ನನ್ನ ಬಗ್ಗೆ ಟೀಕೆಗಳು ಬರುತ್ತವೆ ನೋಡ್ತಿರಿ ಎಂದು ಪ್ರತಾಪ್​ ಹೇಳಿದ್ದಾಗಿ ಹೋಟೆಲ್​ ಮಾಲೀಕ ವಿನಾಯಕ್​ ಅವರು ಮಾಹಿತಿ ನೀಡಿದ್ದಾರೆ.

    ಟ್ರೋಲ್​ ಆಗುವ ಬಗ್ಗೆ ಮೊದಲೇ ಗೊತ್ತಿತ್ತಂತೆ: ಹೋಟೆಲ್​ ಮಾಲೀಕ-ಪ್ರತಾಪ್​ ನಡುವೆ ನಡೆದಿತ್ತು ರೋಚಕ ಮಾತುಕತೆ!

    ಎಂಟು ದಿನಗಳು ಹೋಟೆಲ್​ನಲ್ಲಿ ತಂಗಿದ್ದ ಪ್ರತಾಪ್​, 8ನೇ ತಾರೀಖಿನಂದು ಬೆಂಗಳೂರಿಗೆ ಹೊರಟರು ಎಂದು ಮಾಲೀಕರು ತಿಳಿಸಿದ್ದಾರೆ. ಹೋಟೆಲ್​ನಲ್ಲಿ​ ತಂಗಿದ್ದ ಸಮಯದ ನಡುವೆ ಪ್ರತಾಪ್​, ಶಿವಮೊಗ್ಗ ಹಾಗೂ ರಾಣೇಬೆನ್ನೂರ್​ಗೂ ಪ್ರಯಾಣ ಬೆಳೆಸಿದ್ದರಂತೆ. ಆದರೆ, ಯಾವ ಉದ್ದೇಶಕ್ಕೆ ತೆರಳಿದ್ದರು ಎಂಬುದನ್ನು ಬಹಿರಂಗಪಡಿಸಲಿಲ್ಲ ಎನ್ನತ್ತಾರೆ ವಿನಾಯಕ್​.

    ರಾತ್ರಿಯೆಲ್ಲ ವಿದೇಶಿಗರಿಗೆ ಆನ್​ಲೈನ್ ತರಗತಿಗಳನ್ನು ತೆಗೆದುಕೊಳ್ಳುತ್ತೇನೆ. ನಿದ್ರಿಸಲು ಸಮಯ ಇರುವುದಿಲ್ಲ. ನಾನು ಮಲಗುವುದು ಬೆಳಗ್ಗೆ 4 ಗಂಟೆಯಾಗುತ್ತದೆ ಎಂದೆಲ್ಲಾ ಹೋಟೆಲ್​ ಮಾಲೀಕರ ಜತೆ ಪ್ರತಾಪ್​ ಹೇಳಿಕೊಂಡಿದ್ದಾರೆ.​​

    ಟ್ರೋಲ್​ ಆಗುವ ಬಗ್ಗೆ ಮೊದಲೇ ಗೊತ್ತಿತ್ತಂತೆ: ಹೋಟೆಲ್​ ಮಾಲೀಕ-ಪ್ರತಾಪ್​ ನಡುವೆ ನಡೆದಿತ್ತು ರೋಚಕ ಮಾತುಕತೆ!

    ಇದನ್ನೂ ಓದಿ: ಕನ್ನಡಿಗರಲ್ಲಿ ಕ್ಷಮೆ ಯಾಚಿಸಿದ ಡ್ರೋನ್ ಪ್ರತಾಪ್

    ಮಾಲೀಕರ ಜತೆ ಕುಳಿತು ಊಟ ಮಾಡುವಾಗ ಈ ಎಲ್ಲ ವಿಚಾರಗಳು ಪ್ರಸ್ತಾಪವಾಗಿವೆ. ಅಲ್ಲದೆ, ವಿಡಿಯೋವೊಂದರಲ್ಲಿ ಹೋಟೆಲ್​ ಬಗ್ಗೆಯೂ ಮಾತನಾಡಿರುವ ಪ್ರತಾಪ್​, ಇಲ್ಲಿ ಎಲ್ಲಾ ಸೇವೆಗಳು ಚೆನ್ನಾಗಿವೆ. ಒಮ್ಮೆ ಭೇಟಿ ನೀಡಿ ಎಂತಲೂ ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್​)

    ದಿಢೀರನೇ ಡ್ರೋನ್​ ಪ್ರತಾಪ್​ ಇನ್​ಸ್ಟಾಗ್ರಾಂ ಖಾತೆಯಲ್ಲಿ ವೈರಲ್​ ಪೋಸ್ಟ್​ ಮಾಯ: ಏನಿದರ ಮರ್ಮ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts