More

    ದಿಢೀರನೇ ಡ್ರೋನ್​ ಪ್ರತಾಪ್​ ಇನ್​ಸ್ಟಾಗ್ರಾಂ ಖಾತೆಯಲ್ಲಿ ವೈರಲ್​ ಪೋಸ್ಟ್​ ಮಾಯ: ಏನಿದರ ಮರ್ಮ!

    ಬೆಂಗಳೂರು: ಮರುಬಳಕೆ ವಸ್ತುಗಳಿಂದ 600 ಡ್ರೋನ್​ಗಳನ್ನು ತಯಾರಿಸಿದ್ದೇನೆ. ನನಗೆ ಸಾಕಷ್ಟು ಪ್ರಶಸ್ತಿಗಳು ಹಾಗೂ ವಿದೇಶಿ ಕಂಪನಿಗಳಿಂದ ಆಫರ್​ ಬಂದಿವೆ ಎಂದು ಕಟ್ಟುಕತೆ ಕಟ್ಟಿದ್ದ ನಕಲಿ ವಿಜ್ಞಾನಿ ಡ್ರೋನ್​ ಪ್ರತಾಪ್​ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಲೇ ಇದೆ. ಇದರ ನಡುವೆ ಪ್ರತಾಪ್​ ಇನ್​ಸ್ಟಾಗ್ರಾಂನಲ್ಲಿ ದಿಢೀರನೇ ಒಂದು ವೈರಲ್​ ಪೋಸ್ಟ್​ ಮಾಯವಾಗಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

    ಇದನ್ನೂ ಓದಿ: ಕನ್ನಡಿಗರಲ್ಲಿ ಕ್ಷಮೆ ಯಾಚಿಸಿದ ಡ್ರೋನ್ ಪ್ರತಾಪ್

    ಫೇಸ್​ಬುಕ್​ ಹಾಗೂ ಟ್ವಿಟರ್​ ಹೊರತುಪಡಿಸಿ ಇನ್​ಸ್ಟಾಗ್ರಾಂನಲ್ಲಿ ಸಕ್ರೀಯರಾಗಿರುವ ಪ್ರತಾಪ್​ ತಮ್ಮ ವಿರುದ್ಧದ ಟ್ರೋಲ್​ ಒಂದಕ್ಕೆ ಇನ್​ಸ್ಟಾಗ್ರಾಂನಲ್ಲಿ ಎಚ್ಚರಿಕೆ ನೀಡಿದ್ದರು. ಡ್ರೋನ್​ ಪ್ರತಾಪ್​ ಆತ್ಮಹತ್ಯೆ ಶರಣಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ (RIP) ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಮಾಡಲಾಗಿತ್ತು.

    ದಿಢೀರನೇ ಡ್ರೋನ್​ ಪ್ರತಾಪ್​ ಇನ್​ಸ್ಟಾಗ್ರಾಂ ಖಾತೆಯಲ್ಲಿ ವೈರಲ್​ ಪೋಸ್ಟ್​ ಮಾಯ: ಏನಿದರ ಮರ್ಮ!ಟ್ರೋಲ್​ ಆಗಿದ್ದ ಫೋಟೋವನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್​ ಮಾಡಿ, ನನ್ನ ಕುಟುಂಬ ಚಿಂತೆಗೀಡಾಗಿದೆ. ಕೆಲವು ಜನರು ತಮ್ಮ ಮಿತಿಗಳನ್ನು ಮೀರುತ್ತಿದ್ದಾರೆ. ನಾನು ಈ ಬಗ್ಗೆ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ನಾನು ಜೀವಂತವಾಗಿದ್ದೇನೆ ದಯವಿಟ್ಟು ಸುಳ್ಳು ಸುದ್ದಿಗಳನ್ನು ಹರಡಬೇಡಿ ಎಂದು ಮನವಿಯೊಂದಿಗೆ ಪ್ರತಾಪ್​ ಎಚ್ಚರಿಕೆ ಸಂದೇಶ ರವಾನಿಸಿದ್ದರು.

    ಇದನ್ನೂ ಓದಿ: ಮೀತಿ ಮೀರುತ್ತಿದ್ದೀರಿ ಜೋಕೆ ಎಂದು ಡ್ರೋನ್ ಪ್ರತಾಪ್​ ಎಚ್ಚರಿಕೆ ನೀಡಿದ್ಯಾರಿಗೆ?

    ಇದಲ್ಲದೆ, ನಿನ್ನೆ ಖಾಸಗಿ ನ್ಯೂಸ್​ ವಾಹಿನಿಯಲ್ಲಿ ತನ್ನ ವಿರುದ್ಧ ಆರೋಪಗಳಿಗೆ ಉತ್ತರ ನೀಡಲು ಆಗಮಿಸಿದ್ದ ಪ್ರತಾಪ್​, ಈ ಸಮಯದಲ್ಲೂ ಇದೇ ಪೋಸ್ಟ್​ ವಿಚಾರವನ್ನು ಪ್ರಸ್ತಾಪ ಮಾಡಿದ್ದರು. ನನ್ನ ತಾಯಿ ಇದರಿಂದ ಸಾಕಷ್ಟು ಅಪ್​ಸೆಟ್​ ಆಗಿದ್ದರು. ನಾನು ನಿಜವಾಗಿಯೇ ಸತ್ತು ಹೋಗಿದ್ದೇನೆ ಅಂದುಕೊಂಡಿದ್ದರು, ನಾನೇ ಖುದ್ದಾಗಿ ಫೋನ್​ ಮಾಡಿ ತಿಳಿಸಿದೆ. ಹೀಗೆ ಬಿಟ್ಟರೆ ನಾಳೆ ನನ್ನ ತಿಥಿಯನ್ನು ಮಾಡಿ ಟ್ರೋಲ್​ ಮಾಡುತ್ತಾರೆ. ಇದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇನೆಂದು ಎಚ್ಚರಿಸಿದ್ದರು.

    ಲೈವ್​ ಶೋ ಮುಗಿದ ಬೆನ್ನಲ್ಲೇ ಪ್ರತಾಪ್​ ಇನ್​ಸ್ಟಾಗ್ರಾಂ ಖಾತೆಯಿಂದ “RIP ಪ್ರತಾಪ್​” ಎಂದು ಹರಿದಾಡಿದ್ದ ಪೋಸ್ಟ್​ ಮಾಯಾವಾಗಿದೆ. ಆಕ್ರೋಶ ಹೊರ ಹಾಕಿದ ಎರಡೇ ದಿನದಲ್ಲಿ ಪೋಸ್ಟ್​ ತೆಗೆದಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಅಲ್ಲದೆ, “RIP ಪ್ರತಾಪ್​” ಎನ್ನುವ ಪೋಸ್ಟ್​ ಅನ್ನು ಪ್ರತಾಪ್​ ಅವರೇ ತಮ್ಮ ಲಾಭಕ್ಕಾಗಿ ಸೃಷ್ಟಿ ಮಾಡಿದ್ದರು. ಜನರ ಕರುಣೆ ಗಿಟ್ಟಿಸಲು ತಾವೇ ಮಾಡಿದ ಪೋಸ್ಟ್​ ಎಂಬುದಾಗಿ ಸಾಕಷ್ಟು ಕಾಮೆಂಟ್​ಗಳ ಜತೆ ಆಕ್ರೋಶ ಬಂದ ಹಿನ್ನೆಲೆಯಲ್ಲಿ ಪೋಸ್ಟ್​ ಡಿಲೀಟ್​ ಮಾಡಿರಬಹುದು ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ಡ್ರೋನ್​ ಪ್ರತಾಪ್​ ಬಡತನದ ಬೇಗೆ ಕಟ್ಟುಕಥೆ: ಅವನ ಕುಟುಂಬ ಹಿನ್ನೆಲೆ ಏನು ಗೊತ್ತಾ?

    ಅಂದಹಾಗೆ ಡ್ರೋನ್​ ಪ್ರತಾಪ್​ ಅವರ ಅಸಲಿಯತ್ತು ಬಯಲಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರತಾಪ್​ ಅವರು ಅನೇಕ ವೇದಿಕೆಗಳಲ್ಲಿ ಮಾತನಾಡಿರುವ ವಿಡಿಯೋವನ್ನು ಟ್ರೋಲ್​ ಮಾಡಲಾಗುತ್ತಿದೆ. ಅವರ ಫೋಟೋಗಳ ಮೇಲೆ ಕಮೆಂಟ್ ಮಾಡಿ ಹರಿಬಿಡಲಾಗುತ್ತಿದೆ. ನಿನ್ನೆ ಲೈವ್​ ಕಾರ್ಯಕ್ರಮದಲ್ಲೂ ಗಾಳಿಯಲ್ಲಿ ಗುಂಡು ಹಾರಿಸುವ ರೀತಿ ಪ್ರತಾಪ್​ ಉತ್ತರ ನೀಡಿದ್ದರು.

    ಜರ್ಮನಿ, ಜಪಾನ್‌ನಿಂದಲೇ ಬಂದಿದೆ ನೋಡಿ ಡ್ರೋನ್‌ ಪ್ರತಾಪ್‌ ಮಾಹಿತಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts