More

    ಸಿಯಾಚಿನ್​ಗೆ ಪ್ರಥಮ ಮಹಿಳಾ ವೈದ್ಯಾಧಿಕಾರಿ ಕ್ಯಾ. ಗೀತಿಕಾ ಕೌಲ್​ ನಿಯೋಜನೆ

    ನವದೆಹಲಿ: ಭಾರತೀಯ ಸೇನೆಯ ಹಿಮಚಿರತೆ ದಳದ ಕ್ಯಾ. ಗೀತಿಕಾ ಕೌಲ್​ ಅವರು ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್​ನಲ್ಲಿ ನಿಯೋಜನೆಗೊಂಡ ಮೊದಲ ಮಹಿಳಾ ವೈದ್ಯಕಿಯ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಗೀತಿಕಾ ಸೇನೆಯ ಫೈರ್​ ಆ್ಯಂಡ್​ ಫ್ಯೂರಿ ಕೋರ್​ ಮತ್ತು ಸ್ನೋ ಲೆಪರ್ಡ್​ ಬ್ರಿಗೇಡ್​ ಸದಸ್ಯೆ. ಸಿಯಾಚಿನ್​ ಬ್ಯಾಟಲ್​ ಸ್ಕೂಲ್​ನಿಂದ ತರಬೇತಿ ಪಡೆದಿದ್ದಾರೆ. ದೈಹಿಕ&ಮಾನಸಿಕ ಸ್ಥೆರ್ಯ, ಸವಾಲು ಎದುರಿಸುವುದು, ಎತ್ತರದ ಪ್ರದೇಶಗಳಿಗೆ ಏರುವುದು, ಬದುಕುಳಿಯುವ ಕೌಶಲಗಳು, ಹವಾಮಾನ ವೈಪರೀತ್ಯದಲ್ಲಿ ಕಾರ್ಯನಿರ್ವಹಿಸಲು ಅಗತ್ಯವಾದ ಪ್ರಮುಖ ವಿಶೇಷ ವೈದ್ಯಕಿಯ ವಿಧಾನ ಸೇರಿದಂತೆ ಹಲವು ಅಂಶಗಳನ್ನು ಈ ತರಬೇತಿ ಒಳಗೊಂಡಿದೆ.

    ಸಿಯಾಚಿನ್​ ಪರಿಸ್ಥಿತಿ ಏನು?

    ಹಿಮಾಲಯದ ಉತ್ತರದಲ್ಲಿರುವ ಸಿಯಾಚಿನ್​ ವಿಶ್ವದ ಅತಿ ಎತ್ತರದ ಯುದ್ಧಭೂಮಿ. ಇದು ಪ್ರತಿಕೂಲ ಹವಾಮಾನವಿರುವ ಭೂಪ್ರದೇಶ. ಈ ಅಪಾಯಕಾರಿ ಸ್ಥಳದಲ್ಲಿ ಕಾರ್ಯ ನಿರ್ವಹಿಸುವುದು ಸವಾಲಿನ ಕೆಲಸ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts