More

    ಶಂಕಿತರನ್ನು ತ್ವರಿತವಾಗಿ ಕರೊನಾ ಪರೀಕ್ಷೆಗೊಳಪಡಿಸಿ, ಸೋಂಕಿತರ ಸಂಖ್ಯೆ ಜತೆ ಆತಂಕವೂ ಹೆಚ್ಚಳ

    ನವದೆಹಲಿ: ದೇಶದಲ್ಲೀಗ ಕರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಹೆಚ್ಚಳ ಕಂಡುಬರುತ್ತಿದೆ. ಅದರಂತೆ, ಪರೀಕ್ಷೆಗೊಳಪಡಬೇಕಾದ ಶಂಕಿತರ ಸಂಖ್ಯೆಯನ್ನು ಏರಿಸಲಾಗುತ್ತಿದೆ. ಪ್ರಸ್ತುತ ದೇಶದಲ್ಲಿ ಪ್ರತಿದಿನ ಒಂದು ಲಕ್ಷ ಜನರ ತಪಾಸಣೆ ನಡೆಸಲಾಗುತ್ತಿದೆ.

    ನಿತ್ಯವೂ ಹೆಚ್ಚು ಹೆಚ್ಚು ಜನರನ್ನು ಪರೀಕ್ಷೆಗೆ ಒಳಪಡಿಸಿ, ಸೋಂಕು ಇದೆಯೋ ಇಲ್ಲವೋ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. ಇದಕ್ಕಾಗಿ ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು ಏರಿಸಲಾಗುತ್ತಿದೆ. ಇದೀಗ ಕರೊನಾ ಸೋಂಕು ಖಚಿತಪಡಿಸಲು ಕ್ಷಯ ರೋಗ ಪತ್ತೆ ಯಂತ್ರಗಳನ್ನು ಬಳಸಬಹುದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಎಂಆರ್​) ತಿಳಿಸಿದೆ.

    ಇದನ್ನೂ ಓದಿ; ಕರೊನಾ ವಿರುದ್ಧ ಹೋರಾಟಕ್ಕಾಗಿ 362 ಕೋಟಿ ರೂ. ಸಂಗ್ರಹಿಸಿದ ಶತಾಯುಷಿಗೆ ನೈಟ್​ಹುಡ್​ ಗೌರವ 

    ಈ ಮೊದಲು ಕ್ಷಯ ರೋಗ ಪತ್ತೆ ಯಂತ್ರ ಬಳಸಿ ಆರಂಭಿಕ ಹಂತದ ಪರೀಕ್ಷೆಯನ್ನಷ್ಟೇ ನಡೆಸಬಹುದಿತ್ತು. ಸೋಂಕು ಖಚಿತಪಡಿಸಲು ಪ್ರತ್ಯೇಕವಾಗಿ ಮತ್ತೊಂದು ಪರೀಕ್ಷೆ ನಡೆಸಲಾಗುತ್ತಿತ್ತು. ಈ ಯಂತ್ರದ ಮೂಲಕವೇ ನಡೆಸಿದ ಪರೀಕ್ಷೆಯಲ್ಲಿ ಸೋಂಕು ಖಚಿತವಾಗಿದ್ದನ್ನು ಪ್ರಕಟಿಸಬಹುದು ಎಂದು ಐಸಿಎಂಆರ್​ ಹೊಸದಾಗಿ ಮಾರ್ಗಸೂಚಿಗಳನ್ನು ಹೊರಡಿಸಿದೆ.

    ಇನ್ನೊಂದು ಮಹತ್ವದ ಬೆಳವಣಿಗೆಯಲ್ಲಿ, ಕೋವಿಡ್​ ಕಾಯಿಲೆಯ ಗುಣಲಕ್ಷಣಗಳನ್ನು ಹೊಂದಿಲ್ಲದಿದ್ದರೂ, ಸೋಂಕಿತರೊಂದಿಗೆ ನೇರ ಸಂಪರ್ಕ ಹೊಂದಿರುವ ಹಾಗೂ ಸೋಂಕಿನ ಹೆಚ್ಚು ಸಂಭಾವ್ಯವಿರುವ ವ್ಯಕ್ತಿಗಳನ್ನು 5-10 ದಿನಗಳೊಳಗಾಗಿ ಕರೊನಾ ಪರೀಕ್ಷೆಗೆ ಒಳಪಡಿಸುವಂತೆ ಐಸಿಎಂಆರ್​ ಸೂಚಿಸಿದೆ. ಈ ಮೊದಲು ಕ್ವಾರಂಟೈನ್​ ಒಳಪಡಿಸಿ ನಂತರ ರೋಗ ಲಕ್ಷಣಗಳು ಕಂಡುಬಂದರೆ ಪರೀಕ್ಷೆ ನಡೆಸಲಾಗುತ್ತಿತ್ತು.

    ಇದನ್ನೂ ಓದಿ; ರಸ್ತೆಯಲ್ಲಿ ಸಿಕ್ಕ 75 ಲಕ್ಷ ರೂ. ಪೊಲೀಸರಿಗೊಪ್ಪಿಸಿ ಪ್ರಾಮಾಣಿಕತೆ ಮೆರೆದ ದಂಪತಿ..! 

    ಈವರೆಗೆ ದೇಶದಲ್ಲಿ 25 ಲಕ್ಷಕ್ಕೂ ಅಧಿಕ ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಜತೆಗೆ, ಭಾನುವಾರ ಒಂದೇ ದಿನ ಒಂದು ಲಕ್ಷಕ್ಕೂ ಅಧಿಕ ಜನರ ಗಂಟಲು ದ್ರವದ ಮಾದರಿಯ ಪರೀಕ್ಷೆ ನಡೆಸಲಾಗಿದೆ ಎಂದು ಐಸಿಎಂಆರ್​ ಮಾಹಿತಿ ನೀಡಿದೆ. ಸದ್ಯ ಭಾರತದಲ್ಲಿ ಕರೊನಾ ಪೀಡಿತರ ಸಂಖ್ಯೆ 1,06,750ಕ್ಕೆ ತಲುಪಿದೆ. 3,300ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ.

    ಈ ವರ್ಷ ನರ್ಸರಿ ಸ್ಕೂಲ್​ ತೆರೆಯಲ್ವಾ…? ಆಡ್ಮಿಷನ್​ ಮಾಡಿಸ್ಬೇಕೋ ಬೇಡ್ವೋ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts