More

    ‘ಕೃಷಿ ಕಾಯ್ದೆಗಳಿಂದ ರೈತರಿಗೆ ಹೆಚ್ಚಿನ ಲಾಭ ಸಿಗಲಿದೆ’ ಐಎಂಎಫ್​ ಅಭಿಮತ

    ನವದೆಹಲಿ: ದೇಶದಲ್ಲಿ ಕಿಚ್ಚು ಹಬ್ಬಿಸಿರುವ ನೂತನ ಕೃಷಿ ಕಾಯ್ದೆಗಳಿಂದ ನಿಜವಾಗಿಯೂ ರೈತರಿಗೆ ಹೆಚ್ಚಿನ ಲಾಭವಾಗಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯ ಮುಖ್ಯ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ ತಿಳಿಸಿದ್ದಾರೆ. ಕೆಲವು ಸಾಮಾಜಿಕ ಸುರಕ್ಷತೆಯ ಕ್ರಮಗಳನ್ನು ಕಾಯ್ದೆಗಳಲ್ಲಿ ಅಳವಡಿಸುವ ಅವಶ್ಯಕತೆ ಇದೆ ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿ: “ಜಸ್ಟ್​ ಮ್ಯಾರೀಡ್​” ಕಾರಿನ ಹಿಂದೆ ಬಿದ್ದ ಅಧಿಕಾರಿಗಳು: ಮಾಲೀಕನ ಪತ್ತೆಗೆ ಪರದಾಟ!

    ಭಾರತದಲ್ಲಿ ಸಾಕಷ್ಟು ಕ್ಷೇತ್ರಗಳಲ್ಲಿ ಸುಧಾರಣೆ ತರಬೇಕಿದೆ. ಅದರಲ್ಲಿ ಕೃಷಿ ಕ್ಷೇತ್ರವೂ ಒಂದು. ಈಗ ಕಾಯ್ದೆಗಳ ಮೂಲಕ ಸುಧಾರಣೆ ತಂದಿರುವುದು ಉತ್ತಮ ಅಂಶವಾಗಿದೆ. ಈ ಕಾಯ್ದೆಗಳು ಮುಖ್ಯವಾಗಿ ಮಾರುಕಟ್ಟೆಗೆ ಸಂಬಂಧ ಪಟ್ಟದ್ದಾಗಿದೆ. ಮಧ್ಯವರ್ತಿಯಿಲ್ಲದೆಯೇ, ರೈತರು ತಮ್ಮ ಬೆಳೆಯನ್ನು ನೇರವಾಗಿ ಮಾರಾಟ ಮಾಡಬಹುದಾಗಿದೆ. ಮಂಡಿ ಹೊರೆತು ಪಡಿಸಿ ಬೇರೆಡೆಯೂ ವ್ಯವಹಾರ ನಡೆಸಬಹುದಾಗಿದೆ. ಇದರಿಂದ ರೈತರಿಗೆ ಹೆಚ್ಚಿನ ಲಾಭ ಸಿಗಲಿದೆ ಎಂದು ಗೀತಾ ಗೋಪಿನಾಥ ತಿಳಿಸಿದ್ದಾರೆ.

    ಯಾವುದೇ ಸುಧಾರಣೆ ತರುವಾಗ ಅಲ್ಲಿ ಕೆಲವು ಬದಲಾವಣೆಯ ಖರ್ಚು ಆಗಿಯೇ ಆಗುತ್ತದೆ. ಆದರೆ ನಾವು ಇಲ್ಲಿ ಒಂದು ಮುಖ್ಯ ವಿಷಯವನ್ನು ಪರಿಗಣಿಸಬೇಕಿದೆ. ಬದಲವಾಣೆಯ ವೆಚ್ಚವು ಯಾವುದೇ ಕಾರಣಕ್ಕೂ ಬಡ ರೈತರ ಮೇಲೆ ಬೀಳದಂತೆ ನೋಡಿಕೊಳ್ಳಬೇಕು. ಹಾಗೆಯೇ ಅದಕ್ಕೆ ಕೆಲವು ಸಾಮಾಜಿಕ ಸುರಕ್ಷತೆಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿ: ‘ಬಡಿಗೆ ಹಿಡಿದುಬನ್ನಿ, ಧ್ವಜವನ್ನೂ ತನ್ನಿ… ನಾನು ಹೇಳುತ್ತಿರುವುದೇನು ಅರ್ಥವಾಯ್ತಲ್ಲ… ಈಗ ಇಷ್ಟು ಸಾಕು…’

    ಕೃಷಿ ಕಾಯ್ದೆಗಳ ಬಗ್ಗೆ ದೇಶಾದ್ಯಂತ ಭಾರಿ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೆಯೇ ಐಎಂಎಫ್​ ಕೃಷಿ ಕಾಯ್ದೆಗಳ ಪರವಾಗಿ ನಿಲುವು ತೋರಿಸಿದೆ. (ಏಜೆನ್ಸೀಸ್​)

    ನಾವಲ್ಲ, ಅಕ್ಕನೇ ತಂಗಿಯನ್ನ ಕೊಂದಿದ್ದು! ಆಮೇಲೆ ನನ್ನನ್ನೂ ಕೊಂದುಬಿಡಿ ಎಂದು ಬೇಡಿಕೊಂಡಳು!

    ನೀ ಬಂದ ಮೇಲೆ ಸಾಲ ಹೆಚ್ಚಾಯಿತೆಂದು ಸೊಸೆಯನ್ನು ಹೀಯಾಳಿಸಿದ ಮಾವ; ಕೆಲವೇ ದಿನಗಳಲ್ಲಿ ಹಾದಿಯ ಹೆಣವಾದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts