More

    ಈ ವರ್ಷದ ಮುಂಗಾರು ಮಳೆ ಭವಿಷ್ಯವೇನು? ಇಲ್ಲಿದೆ ಮಾಹಿತಿ

    ನವದೆಹಲಿ: ಈ ವರ್ಷ ದೇಶದಲ್ಲಿ ಮುಂಗಾರು ಮಳೆ ಸಾಮಾನ್ಯವಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.

    ಕಳೆದ ಎರಡು ವರ್ಷಗಳಂತೆಯೇ ಈ ವರ್ಷವೂ ಕೂಡ ಶೇ 98 ರಷ್ಟು ಮುಂಗಾರು ಮಳೆ ಸಾಮಾನ್ಯವಾಗಿರಲಿದೆ ಎಂದು ಐಎಂಡಿ ಶುಕ್ರವಾರ ಹೇಳಿದೆ. ಜೂನ್​ನಿಂದ ಸೆಪ್ಟೆಂಬರ್ ಅಂತ್ಯದವರೆಗಿನ ನೈರುತ್ಯ ಮಾನ್ಸೂನ್ ಮಾರುತಗಳು ಸಾಮಾನ್ಯವಾದ ಮಳೆಯನ್ನು ಹೊತ್ತು ತರಲಿವೆ ಎಂದು ಅಂದಾಜಿಸಲಾಗಿದೆ.

    ಇದನ್ನೂ ಓದಿ: ಹಿರಿಯ ನಟ ದ್ವಾರಕೀಶ್ ಪತ್ನಿ ಅಂಬುಜಾ​ ನಿಧನ

    ಶೇ 50 ಕ್ಕಿಂತಲೂ ದೇಶದ ಕೃಷಿ ಮುಂಗಾರು ಮಳೆಯನ್ನೇ ಅವಲಂಬಿಸಿರುವುದರಿಂದ ದೇಶದ ಆರ್ಥಿಕ ಸ್ಥಿತಿಗತಿಯೂ ಮುಂಗಾರು ಮಳೆಯನ್ನೇ ಅವಲಂಬಿಸಿದೆ. ಮುಂಗಾರು ಮಳೆ ಒಟ್ಟು ಮಳೆಯಲ್ಲಿ ಶೇ 75 ರಷ್ಟು ಭಾಗವನ್ನು ಹೊಂದಿದೆ.

    ಈ ವರ್ಷ ಸಾಮಾನ್ಯ ಮುಂಗಾರು ಆಗಲಿದೆ ಎಂಬ ನಿರೀಕ್ಷೆ ರೈತಾಪಿ ವರ್ಗಕ್ಕೆ ಸಂತಸ ನೀಡಿದೆ. ಸುಮಾರು 15 ಕೋಟಿ ಜನ ನೇರವಾಗಿ ಕೃಷಿಯಲ್ಲಿ ಮುಂಗಾರು ಮಳೆಯನ್ನೇ ನಂಬಿ ಜೀವನ ಮಾಡುತ್ತಿದ್ದಾರೆ.

    ವಿವಿಧ ಪದವೀಧರರಿಗೆ ಎಣ್ಣೆಬೀಜ ಬೆಳೆಗಾರರ ಸಹಕಾರಿ ಸಂಘಕ್ಕೆ ಆಹ್ವಾನ: ₹70 ಸಾವಿರದವರೆಗೂ ವೇತನ

    ಎರಡು ಷರ್ಟ್​ ಕದ್ದಿದ್ದಕ್ಕೆ 20 ವರ್ಷ ಜೈಲುವಾಸ! ಬಿಡುಗಡೆಯಾಗುವಷ್ಟರಲ್ಲೇ ಮೃತ್ಯುಕೂಪವಾಗಿದ್ದ ಮನೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts