More

    ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯ ವಶ

    ರಾಯಚೂರು: ನಗರದಿಂದ ಅಕ್ರಮವಾಗಿ ವಾಹನದಲ್ಲಿ ಆಂಧ್ರಪ್ರದೇಶಕ್ಕೆ ಸಾಗಿಸುತ್ತಿದ್ದ 1.93 ಲಕ್ಷ ರೂ. ವೌಲ್ಯದ ಮದ್ಯವನ್ನು ಪೊಲೀಸರು ಮಂಗಳವಾರ ಸಂಜೆ ವಶಪಡಿಸಿಕೊಂಡಿದ್ದಾರೆ.
    ಲೋಕಸಭೆ ಚುನಾವಣೆ ನಿಮಿತ್ತ ಆಂಧ್ರಪ್ರದೇಶದ ಕರ್ನೂಲ್‌ಗೆ ಹೋಗುವ ಜಿಲ್ಲೆಯ ಗಡಿಯಲ್ಲಿರುವ ಚೆಕ್‌ಪೋಸ್ಟ್‌ನಲ್ಲಿ ಅನುಮಾನಾಸ್ಪದವಾಗಿ ಕಂಡ ವಾಹನವನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಅಕ್ರಮವಾಗಿ ಮದ್ಯ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.
    ವಾಹನದಲ್ಲಿ 388 ಲೀಟರ್ ವಿಸ್ಕಿ, 70 ಲೀಟರ್ ಬಿಯರ್ ಬಾಟಲಿಗಳು ದೊರೆತಿದ್ದು, ಮದ್ಯ ಸಾಗಣೆಗೆ ಪರವಾನಗಿ ಪಡೆಯದಿರುವ ಕಾರಣ ವಶಪಡಿಸಿಕೊಂಡು ಯರಗೇರಾ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ದಾಳಿಯಲ್ಲಿ ಯರಮರಸ್ ಪಿಎಸ್‌ಐ ಸಿ.ಪ್ರಕಾಶ, ಸಿಬ್ಬಂದಿಗಳಾದ ಲಕ್ಷ್ಮಣ, ಹನುಮಗೌಡ, ಚಾಂದಪಾಷಾ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts