More

    ಅಕ್ರಮ ಕೀಟನಾಶಕ ಮಾರಾಟ

    ಹುಬ್ಬಳ್ಳಿ: ಕಾಯ್ದೆ ಉಲ್ಲಂಘಿಸಿ ಕೀಟನಾಶಕ ದಾಸ್ತಾನು ಮಾಡಿದ ನಗರದ ಎರಡು ಅಗ್ರೋ ಏಜೆನ್ಸಿ ಮಳಿಗೆಗಳ ವಿರುದ್ಧ ಕೃಷಿ ಇಲಾಖೆ ಕ್ರಮ ಕೈಗೊಂಡಿದೆ. ನಗರದ ಸೂರ್ಯ ಅಗ್ರೋ ಏಜೆನ್ಸೀಸ್ ಹಾಗೂ ವಿಜಯಲಕ್ಷ್ಮಿ ಸೀಡ್ಸ್ ಕಾಪೋರೇಶನ್ ಕೀಟನಾಶಕ ಮಳಿಗೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.

    ಈ ಎರಡು ಮಳಿಗೆದಾರರು ನೋಂದಾಯಿತವಲ್ಲದ ಮತ್ತು ಪರವಾನಗಿ ಅನುಮತಿಸದೇ ಇರುವ ನೈರೋಬೆಂಜೇನ್ ಅಂಶ ಇರುವ ಸ್ಮಾರ್ಟ್ ಹಾಗೂ ಜಿಯಾಗ್ರೋ ಕೀಟನಾಶಕಗಳನ್ನು ಮಾರಾಟ ಮಾಡುತ್ತಿರುವುದು ಜಾರಿ ದಳ ದಾಳಿ ಮಾಡಿದ ಸಂದರ್ಭದಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.

    ಇದು ಕೀಟನಾಶಕ ಕಾಯ್ದೆಯ 1968 ಸೆಕ್ಷೆನ್ 29(1) (ಸಿ) ಮತ್ತು 29 (1) (ಬಿ)ರಂತೆ ದಂಡನೀಯ ಅಪರಾಧವಾಗಿದ್ದು, ನಗರದ ಪ್ರಧಾನ ಸಿವಿಲ್ ನ್ಯಾಯಾಲಯ ಹಾಗೂ ಜೆಎಂಎಫ್​ಸಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲು ಕ್ರಮ ವಹಿಸಲಾಗಿದೆ. ಬೆಳಗಾವಿ ಜಾರಿ ದಳದ ಜಂಟಿ ಕೃಷಿ ನಿರ್ದೇಶಕ ಜಿಲಾನಿ ಮೊಕಾಶಿ, ಧಾರವಾಡ ಜಂಟಿ ಕೃಷಿ ನಿರ್ದೇಶಕ ರಾಜಶೇಖರ ಬಿಜಾಪುರ, ಉಪಕೃಷಿ ನಿರ್ದೇಶಕ ಎಂ.ಬಿ. ಅಂತರವಳ್ಳಿ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಬೆಳಗಾವಿ ಜಾರಿ ದಳದ ಸಹಾಯಕ ಕೃಷಿ ನಿರ್ದೇಶಕ ಮಹಾಂತೇಶ ಕಿಣಗಿ, ಹುಬ್ಬಳ್ಳಿ ಸಹಾಯಕ ಕೃಷಿ ನಿರ್ದೇಶಕ ರಾಜಶೇಖರ ಅಣಗೌಡರ, ಧಾರವಾಡದ ರಾಘವೇಂದ್ರ ಬಮ್ಮಿಗಟ್ಟಿ, ವಿ.ವಿ. ವಿಠ್ಠಲರಾವ್, ವಿ.ಬಿ. ಪುರಾಣಿಕ ದಾಳಿಯಲ್ಲಿದ್ದರು. 

    ಎಚ್ಚರಿಕೆ: ಕೀಟನಾಶಕ ಮಾರಾಟಗಾರರು ನೋಂದಾಯಿತವಲ್ಲದ ಹಾಗೂ ಪರವಾನಗಿಯಲ್ಲಿ ಅನುಮತಿಸದೇ ಇರುವ ಕೀಟನಾಶಕಗಳನ್ನು ಮಾರಾಟ ಮಾಡಬಾರದು. ಒಂದು ವೇಳೆ ಮಾರಾಟ ಮಾಡಿದರೆ ಸೂಕ್ತ ಕಾನೂನು ಕ್ರಮ ನಿಶ್ಚಿತ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts