More

    ನೇಹಾ ಕೊಲೆಗಾರರಿಗೆ ಉಗ್ರ ಶಿಕ್ಷೆಯಾಗಲಿ; ಉಜ್ಜಯಿನಿ ಜಗದ್ಗುರುಗಳ ಹೇಳಿಕೆ

    ಅಕ್ಕಲಕೋಟ: ಇತ್ತೀಚೆಗೆ ಹುಬ್ಬಳ್ಳಿಯ ಕಾಲೇಜು ಆವರಣದಲ್ಲಿ ಕೊಲೆಯಾದ ನೇಹಾ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಕೊಲೆಗಾರರಿಗೆ ಉಗ್ರ ಶಿಕ್ಷೆಯಾಗಬೇಕು ಎಂದು ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದ್ದಾರೆ. ಅಕ್ಕಲಕೋಟ ತಾಲೂಕಿನ ಅಂಕಲಗಿ ಹಿರೇಮಠದಲ್ಲಿ ನಡೆದ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

    ಸಮಾಜದಲ್ಲಿ ಜೀವಹಾನಿಯಾಗುವಂತಹ ಅಪಾಯದ ಘಟನೆಗಳು ಮರುಕಳಿಸಬಾರದು. ಈ ಬಗ್ಗೆ ಸರ್ಕಾರ ಮತ್ತು ಯಾವುದೇ ಪಕ್ಷಗಳು ನೇಹ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು. ಇದೊಂದು ಪ್ರತ್ಯೇಕ ಪ್ರಕರಣವನ್ನಾಗಿ ಪರಿಗಣಿಸದೆ ಇಂತಹ ಪ್ರಕರಣಗಳ ಹಿಂದಿನ ದುರುದ್ದೇಶವನ್ನು ಪತ್ತೆ ಹಚ್ಚಿ, ಅಪರಾಧಿ ತ್ವರಿತವಾಗಿ ಉಗ್ರ ಶಿಕ್ಷೆಯನ್ನು ನೀಡಬೇಕು.

    ಕೊಲೆ ಗೈದಿರುವ ಯುವಕನ ಮಾನಸಿಕ ಸ್ಥಿತಿ ಆತಂಕವನ್ನು ಮೂಡಿಸುವಂತಿದೆ. ಲವ್ ಜಿಹಾದ್ ಹೆಸರಿನಲ್ಲಿ ಸಮಾಜದ್ರೋಹಿ ಚಟುವಟಿಕೆ ನಡೆಯುತ್ತಿರುವುದರ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕಾಗಿದೆ. ಮನೆಯಲ್ಲಿರುವ ಗುರುಹಿರಿಯರು ಕೇವಲ ತಮ್ಮ ಮಕ್ಕಳನ್ನು ಪ್ರೀತಿಯಿಂದ ಬೆಳೆಸುವುದಷ್ಟೇ ಅಲ್ಲದೆ, ಸಂಸ್ಕಾರ ನೀಡಬೇಕು. ಕಾಲೇಜಿಗೆ ಹೋಗುವ ಮಕ್ಕಳ ಮೇಲೆ ಪೋಷಕರು ಗಮನ ಇಟ್ಟಿರಬೇಕು. ನೇಹಾ ಕೊಲೆ ಪ್ರಕರಣದ ತನಿಖೆ ಚುರುಕುಗೊಳಿಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಆ ಮೂಲಕ ನೇಹಾ ಆತ್ಮಕ್ಕೆ ಶಾಂತಿ ದೊರೆಯಲಿ. ಮತ್ತು ನಿರಂಜನ ಹಿರೇಮಠ ಅವರ ಕುಟುಂಬಕ್ಕೆ ನೋವುನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಜಗದ್ಗುರುಗಳು ಸಾಂತ್ವಾನ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts