More

    ತಮಿಳುನಾಡು ಗಡಿಯಿಂದ ಅಕ್ರಮ ವಲಸೆ?

    ಚಾಮರಾಜನಗರ: ಮಂಡ್ಯಕ್ಕೆ ಮುಂಬೈ ಕಂಟಕವಾಗಿರುವಂತೆ ಚಾಮರಾಜನಗರಕ್ಕೆ ತಮಿಳುನಾಡು ಮಗ್ಗಲು ಮುಳ್ಳಾಗುವ ಲಕ್ಷಣಗಳು ಕಾಣುತ್ತಿದೆ. ಒಂದು ಕಾಲದಲ್ಲಿ ನರಹಂತಕ ವೀರಪ್ಪನ್ ಅಡಗುತಾಣವಾಗಿದ್ದ ಅರಣ್ಯ ಇದೀಗ, ತಮಿಳುನಾಡಿನಿಂದ ಬರುವ ವಲಸಿಗರಿಗೆ ಕಳ್ಳಮಾರ್ಗವಾಗಿ ಪರಿಣಮಿಸಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗಿರುವ ತಮಿಳುನಾಡಿನಿಂದ ಬರುವ ಜನರನ್ನು ತಡೆಯಲು ಗಡಿಯಲ್ಲಿ ನಿರ್ವಿುಸಲಾಗಿರುವ ಚೆಕ್​ಪೋಸ್ಟ್​ಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರೂ, ಕಳ್ಳದಾರಿ ಮೂಲಕ ಅಕ್ರಮವಾಗಿ ವಲಸಿಗರು ಜಿಲ್ಲೆ ತಲುಪುತ್ತಿದ್ದಾರೆ. ಕನ್ನಡಿಗರೇ ಹೆಚ್ಚಿರುವ ತಾಳವಾಡಿ ಭಾಗದಿಂದ ಕರ್ನಾಟಕದ ಗಡಿಗೆ ನುಸುಳಿ ಬರುವ ಸಾಧ್ಯತೆಗಳಿವೆ. ಜಿಲ್ಲಾಡಳಿತವೂ ಈಗಾಗಲೇ ಅನುಮತಿ ಇಲ್ಲದೆ ಬಂದಿರುವ 58 ಜನರನ್ನು ಪತ್ತೆ ಮಾಡಿ ಕ್ವಾರಂಟೈನ್ ಮಾಡಿರುವುದು ಇದಕ್ಕೆ ಸಾಕ್ಷಿ. ಸತ್ಯಮಂಗಲ ದಟ್ಟಾರಣ್ಯ ಪ್ರದೇಶವಾಗಿದ್ದು, ವನ್ಯಪ್ರಾಣಿಗಳ ಭಯವಿದ್ದರೂ ವಲಸಿಗರು ಈ ಮಾರ್ಗ ಬಳಸುತ್ತಿರುವುದು ಅಪಾಯಕಾರಿ. ಹಸಿರು ವಲಯವಾಗಿರುವ ಚಾಮರಾಜನಗರದಲ್ಲಿ ಹೊರಜಿಲ್ಲೆಯಿಂದ ಬಂದವರು ಕರೊನಾ ಸೋಂಕು ಹರಡಿಸಬಹುದು. ಗೋಪಿನಾಥಂ, ಮಲೆಮಹದೇಶ್ವರ ವನ್ಯಜೀವಿ ಮಾರ್ಗವಾಗಿ ಅಕ್ರಮ ವಲಸಿಗರ ಪ್ರವೇಶ ನಡೆಯುತ್ತಿದೆ ಎಂಬ ವದಂತಿಗಳೂ ಹರಿದಾಡುತ್ತಿವೆ.

    ಕಾಡಿನ ಮಾರ್ಗಗಳಲ್ಲಿ ಗಸ್ತು ತಿರುಗಲು ಅರಣ್ಯ ಇಲಾಖೆಗೆ ನಿರ್ದೇಶನ ನೀಡಲಾಗಿದೆ. ಚೆಕ್​ಪೋಸ್ಟ್ ಬಿಗಿಗೊಂಡಿದ್ದರಿಂದ ಕೆಲವರು ನದಿ ದಾಟಿ ಜಿಲ್ಲೆ ಪ್ರವೇಶ ಮಾಡಿದ್ದೂ ಇದೆ. ಪೊಲೀಸ್ ಮತ್ತು ಕಂದಾಯ ಇಲಾಖೆಗೆ ಸೂಚನೆ ನೀಡಿ ತಮಿಳುನಾಡಿನಿಂದ ಅಕ್ರಮವಾಗಿ ಬರುವುದನ್ನು ತಡೆಯಲಾಗುವುದು.

    | ಡಾ.ಎಂ.ಆರ್.ರವಿ ಜಿಲ್ಲಾಧಿಕಾರಿ, ಚಾಮರಾಜನಗರ

    ನೇಪಾಳದ ಅಧಿಕೃತ ಭೂಪಟದಲ್ಲಿ ಭಾರತದ ಭೂಭಾಗ!: ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಭಾರತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts