More

    ರೆಡ್‌ಜೋನ್ ಆಗಲಿದೆಯೇ ಚಾಮರಾಜನಗರ ?

    ಕಾಡುದಾರಿ ಮೂಲಕ ಬರುವ ಅಕ್ರಮ ವಲಸಿಗರಿಂದ ಜಿಲ್ಲೆಗೆ ಕಂಟಕ

    ಕಿರಣ್ ಮಾದರಹಳ್ಳಿ ಚಾಮರಾಜನಗರ
    ಗ್ರೀನ್‌ರೆನ್‌ನಲ್ಲಿ ಕಂಗೊಳಿಸುತ್ತಿರುವ ಚಾಮರಾಜನಗರವನ್ನು ಸದ್ಯದಲ್ಲೇ ‘ಅಕ್ರಮ ವಲಸೆ’ ಕೆಂಪು ವಲಯವಾಗಿ ಪರಿವರ್ತಿಸುವ ಲಕ್ಷಣಗಳು ಗೋಚರಿಸುತ್ತಿವೆ.
    ದೇಶದ ಕರೊನಾ ಹಾಟ್‌ಸ್ಪಾಟ್ ಆಗಿರುವ ತಮಿಳುನಾಡಿನಿಂದ ಪ್ರತಿದಿನ 100ಕ್ಕೂ ಹೆಚ್ಚು ಅಕ್ರಮ ವಲಿಸಿಗರು ಮೆಟ್ಟೂರಿನಿಂದ ಬರಗೂರು ಅರಣ್ಯ ಪ್ರದೇಶ-ತೊರೆಕಾಯಿಮಡುಹಳ್ಳ ತಲುಪಿ (ಕಾಡುದಾರಿ) ಮಲೆ ಮಹದೇಶ್ವರ ಬೆಟ್ಟ, ಗೋಪಿನಾಥಂ ಮುಖ್ಯರಸ್ತೆ ಮಾರ್ಗವಾಗಿ ಜಿಲ್ಲೆಯ ಮೂಲೆ ಮೂಲೆ ತಲುಪುತ್ತಿರುವ ಆತಂಕಕಾರಿ ಸಂಗತಿ ‘ವಿಜಯವಾಣಿ’ ನಡೆಸಿರುವ ರಿಯಾಲಿಟಿ ಚೆಕ್‌ನಿಂದ ಬಯಲಾಗಿದೆ.
    ತಮಿಳುನಾಡಿನಲ್ಲಿ ದಿನದಿಂದ ದಿನಕ್ಕೆ ಕರೊನಾ ಆರ್ಭಟ ಜೋರಾಗುತ್ತಿದೆ. ರಾಜ್ಯ ಸರ್ಕಾರ ಈ ರಾಜ್ಯಕ್ಕೆ ಕೆಎಸ್ಸಾರ್ಟಿಸಿ ಬಸ್ ಸಂಚಾರ ನಿರ್ಬಂಧವನ್ನು ಮುಂದುವರೆಸಿ ಸಾರ್ವಜನಿಕರ ಆಗಮನ-ನಿರ್ಗಮನಕ್ಕೆ ಬ್ರೇಕ್ ಹಾಕಿ ಸುರಕ್ಷತೆಗೆ ಒತ್ತು ನೀಡಿದೆ. ಹೀಗಾಗಿ ಕರೊನಾ ಕಾಟದಿಂದ ಬೆದರಿರುವವರು ಕಾಡಿನ ದಾರಿಯಲ್ಲಿ ಅಕ್ರಮವಾಗಿ ಜಿಲ್ಲೆಗೆ ಬರುತ್ತಿದ್ದಾರೆ.
    ವಧು-ವರರ ಕೊಡು ಕೊಳ್ಳುವಿಕೆಯ ಸಂಬಂಧ ಹೊಂದಿರುವುದು, ವ್ಯಾಪಾರಕ್ಕಾಗಿ ಹೋಗಿ ನೆಲೆಸಿರುವುದು ಸೇರಿದಂತೆ ಹನೂರು ತಾಲೂಕಿನೊಂದಿಗೆ ತಮಿಳುನಾಡು ಗಟ್ಟಿ ನಂಟು ಬೆಸೆದುಕೊಂಡಿದೆ. ಇದೀಗ ಅಲ್ಲಿ ಕರೊನಾ ಉಲ್ಭಣಗೊಂಡಿರುವುದರಿಂದ ತಮಿಳುನಾಡಿನಲ್ಲಿದ್ದವರು ತಮ್ಮ ಸ್ವಗ್ರಾಮ, ಸಂಬಂಧಿಕರ ಮನೆಗಳಿಗೆ ಅನುಮತಿ ಇಲ್ಲದೆ ನುಸುಳುತ್ತಿದ್ದಾರೆ.
    ಇದಕ್ಕಾಗಿ ತಮಿಳುನಾಡಿನ ಬರಗೂರು ಅರಣ್ಯ ಪ್ರದೇಶ ಕಾಡು ದಾರಿಯಲ್ಲಿ ಮಕ್ಕಳು, ಮನೆ ಸಾಮಗ್ರಿಗಳನ್ನು ಹೊತ್ತು ಹಲವರು ನಡೆದು ಬರುತ್ತಿದ್ದರೆ ಮತ್ತೆ ಕೆಲವರು ಬೈಕ್‌ಗಳಲ್ಲಿ ಜನರನ್ನು ತಮಿಳುನಾಡಿನಿಂದ ಮಲೆ ಮಹದೇಶ್ವರ ಮತ್ತು ಕಾವೇರಿ ವನ್ಯಜೀವಿ ಧಾಮದ ಮಾರ್ಗವಾಗಿ ಮಲೆ ಮಹದೇಶ್ವರ, ಗೋಪಿನಾಥಂ ಮುಖ್ಯರಸ್ತೆಗೆ ಕರೆತಂದು ಬಿಟ್ಟು ಹೋಗುತ್ತಿದ್ದಾರೆ. ಇಲ್ಲಿರುವ ಸಂಬಂಧಿಕರಿಗೆ ಕರೆ ಮಾಡಿ ಮುಖ್ಯರಸ್ತೆಗೆ ಬರಲು ಹೇಳುವ ಅಕ್ರಮ ವಲಸಿಗರು ಅನಾಯಾಸವಾಗಿ ಹಳ್ಳಿ ತಲುಪುತ್ತಿದ್ದಾರೆ.
    ಅರಣ್ಯ ಪ್ರದೇಶದ ಮಾರ್ಗದಲ್ಲಿ ನಡೆಯುತ್ತಿರುವ ಅಕ್ರಮ ವಲಸೆಯನ್ನು ತಪ್ಪಿಸಲಾದ ಜಿಲ್ಲಾಡಳಿತಕ್ಕೆ ಕಾಡಂಚಿನ ಗ್ರಾಮಗಳಲ್ಲಿ ದೂರ ದೂರದಲ್ಲಿರುವ ಮನೆಗಳಿಗೆ ವಲಸಿಗರು ಬಂದು ಸೇರಿಕೊಂಡರೂ ತಿಳಿಯವುದು ಕಷ್ಟ. ಗ್ರಾಮ ಕಾರ್ಯ ಪಡೆ ಇವರನ್ನು ಪತ್ತೆ ಹಚ್ಚಿದರೂ ಕೂಡ ಅವರಿಗೆ ಈಗಾಗಲೇ ಸೋಂಕು ತಗುಲಿದ್ದರೆ ಜಿಲ್ಲೆಯ ಸ್ಥಿತಿ ಏನಾಗಲಿದೆ. ಹೊರರಾಜ್ಯ ಸಂಚಾರ ಸೌಲಭ್ಯ ಬಳಸಿಕೊಂಡು ವಲಸಿಗರು ರಾಜ್ಯದ ಯಾವ ಜಿಲ್ಲೆಗಳಿಗೆ ಬೇಕಾದರೂ ಕಾಲಿಡಬಹುದು.
    ಇಲ್ಲಿಂದಲೂ ಅಲ್ಲಿಗೆ ಹೋತ್ತಿದ್ದಾರೆ !
    ತಮಿಳುನಾಡನಿಂದ ಜಿಲ್ಲೆಗೆ ಅಕ್ರಮ ವಲಸೆ ನಡೆಯುತ್ತಿದ್ದರೆ ಮತ್ತೊಂದೆಗೆ ಕೋಳಿ, ಮೀನು ಮಾರಾಟ ಮಾಡಲು ಇಲ್ಲಿಂದಲೂ ಅಲ್ಲಿಗೆ ಅನೇಕರು ನಿತ್ಯಓಡಾಟ ನಡೆಸಿರುವುದು ಪತ್ತೆಯಾಗಿದೆ. ಮೇ 17ರಂದು ತಮಿಳುನಾಡಿನಿಂದ ಲಾರಿ ಮೂಲಕ ಅಕ್ರಮವಾಗಿ ಹಾಸನಕ್ಕೆ ಬಂದವನಿಗೆ ಕರೊನಾ ಸೋಂಕು ದೃಢಪಟ್ಟಿದ್ದ (ರೋಗಿ ಸಂಖ್ಯೆ-36) ಘಟನೆ ಕಣ್ಣ ಮುಂದಿರುವಾಗ ಕೋವಿಡ್-19ಗೆ 88 ಬಲಿ, 13,191 ಜನರಿಗೆ ಸೋಂಕು (ಮೇ 20ರವರೆಗೆ) ತಗುಲಿ ದೇಶದಲ್ಲಿ ಕರೊನಾ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ತಮಿಳುನಾಡಿಗೆ ಇಲ್ಲಿನ ಗ್ರಾಮಸ್ಥರು ಕಾಡಿನ ದಾರಿಯಲ್ಲಿ ಸಂಚರಿಸಿ ತಮಿಳುನಾಡು ಪ್ರವೇಶ ಮಾಡಿ ವ್ಯಾಪಾರ ಮುಗಿದ ನಂತರ ಮತ್ತೆ ಜಿಲ್ಲೆಗೆ ಮರಳುತ್ತಿರುವುದು ಮುಂದಿನ ದಿನಗಳಲ್ಲಿ ಕೋವಿಡ್-19 ಮುಕ್ತ ಜಿಲ್ಲೆಯ ಪರಿಸ್ಥಿತಿಯನ್ನು ಬದಲಾಯಿಸಲುಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts