More

    ಹೀಗೆಲ್ಲ ಟ್ವೀಟ್​ ಮಾಡಿದ್ರೆ ನಿಮ್​ ಅಕೌಂಟೇ ಬ್ಲಾಕ್​ ಆಗುತ್ತೆ ಹುಷಾರು!

    ನವದೆಹಲಿ: ದೇಶದಲ್ಲಿ ಕಳೆದ ಹಲವಾರು ದಿನಗಳಿಂದ ನಡೆಯುತ್ತಿರುವ ರೈತ ಪ್ರತಿಭಟನೆ ಗಣರಾಜ್ಯೋತ್ಸವ ದಿನದಂದು ವಿಕೋಪಕ್ಕೆ ತೆರಳಿದ್ದರೆ, ಮತ್ತೊಂದೆಡೆ ರೈತರ ಪ್ರತಿಭಟನೆ ಹೆಸರಲ್ಲಿ ನಡೆಯುತ್ತಿರುವ ಚಿತಾವಣೆ ವಿರುದ್ಧ ಕೇಂದ್ರ ಸರ್ಕಾರ ಗಂಭೀರ ನಿಲುವು ತಳೆದಿದೆ. ಪರಿಣಾಮ, ರೈತರ ಪ್ರತಿಭಟನೆ ಹೆಸರಲ್ಲಿ ನಡೆಯುವ ಚಿತಾವಣೆಯನ್ನು ಪ್ರಚೋದಿಸುವಂಥ ಟ್ವೀಟ್​ಗಳ ಮೇಲೆ ನಿರ್ಬಂಧ ಹೇರಲಾಗಿದೆ.

    ರೈತರ ಪ್ರತಿಭಟನೆ ನಡುವೆ ಪ್ರಚೋದಕವಾಗಿ ಟ್ವೀಟ್​ ಮಾಡಲಾಗುತ್ತಿರುವ ಟ್ವಿಟರ್​ ಹ್ಯಾಂಡಲ್​ಗಳ ಮೇಲೆ ನಿಗಾ ಇಟ್ಟಿರುವ ಸಂಸ್ಥೆ, ಅಂಥ ಖಾತೆಗಳನ್ನೇ ದೇಶದಲ್ಲಿ ಬ್ಲಾಕ್​ ಮಾಡುತ್ತಿದೆ. ಇದರ ಅಂಗವಾಗಿ ಸೋಮವಾರವೊಂದೇ ದಿನ 250ಕ್ಕೂ ಅಧಿಕ ಟ್ವೀಟ್​ ಹಾಗೂ ಟ್ವಿಟರ್​ ಹ್ಯಾಂಡಲ್​ಗಳನ್ನು ಟ್ವಿಟರ್ ಸಂಸ್ಥೆ ಬ್ಲಾಕ್ ಮಾಡಿದೆ. #ModiPlanningFarmerGenocide ಎಂಬ ಹ್ಯಾಷ್​ಟ್ಯಾಗ್​ನಡಿ ಮಾಡಿರುವ ಟ್ವೀಟ್​ ಹಾಗೂ ಟ್ವಿಟರ್​ ಹ್ಯಾಂಡಲ್​ಗಳಲ್ಲಿ ಹಲವನ್ನು ಭಾರತದಲ್ಲಿ ಬ್ಲಾಕ್​ ಮಾಡಲಾಗಿದೆ. ಈ ಹ್ಯಾಷ್​ಟ್ಯಾಗ್​ನಡಿ ಜನವರಿ 30ರಂದು ಬೆದರಿಕೆ ಹುಟ್ಟಿಸುವ ಸುಳ್ಳು ಹಾಗೂ ಪ್ರಚೋದನಕಾರಿ ಟ್ವೀಟ್​ಗಳನ್ನು ಮಾಡಿದ್ದರಿಂದ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಟ್ವಿಟರ್ ಸಂಸ್ಥೆಗೆ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಟ್ವಿಟರ್ ಸಂಸ್ಥೆ ಈ ಕ್ರಮಕೈಗೊಂಡಿದೆ ಎನ್ನಲಾಗಿದೆ.

    ಇದನ್ನೂ ಓದಿ: ಹೆರಿಗೆ ಬಳಿಕ ಮಾಸುಚೀಲವನ್ನೂ ಬೇಯಿಸಿ ತಿಂದ ತಾಯಿ!; ಎರಡನೇ ಹೆರಿಗೆ ನಂತರವೂ ಮತ್ತದೇ ಪುನರಾವರ್ತನೆ…

    ಅಲ್ಲದೆ ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ಕೇಂದ್ರ ಗೃಹ ಸಚಿವಾಲಯ ಕೂಡ ಟ್ವಿಟರ್ ಸಂಸ್ಥೆಗೆ ಈ ಕುರಿತು ಸೂಚನೆ ನೀಡಿದೆ ಎನ್ನಲಾಗಿದೆ. ನರಮೇಧದ ಚಿತಾವಣೆಯಂಥ ಮಾತುಗಳು ಸಾರ್ವಜನಿಕವಾಗಿ ಭಯ ಹುಟ್ಟಿಸುವಂಥವಾಗಿದ್ದು ಕಾನೂನು ಪ್ರಕಾರವೇ ಇಂಥ ನಿರ್ಬಂಧ ವಿಧಿಸಲಾಗಿದೆ.

    ಕೃಷಿ ಕಾಯ್ದೆ ವಿರುದ್ಧ ರೈತರು ನಡೆಸುತ್ತಿರು ಪ್ರತಿಭಟನೆಯ ಪರವಹಿಸಿರುವ ಕಿಸಾನ್​ ಏಕತಾ ಮೋರ್ಚಾ, ಕೆರಾವನ್​, ಮಾಣಿಕ್ ಗೋಯಲ್,​ Tractor2twitr ಮತ್ತು jatt_junction ಸೇರಿ ರೈತ ಸಂಘಟನೆ, ಕೆಲವು ಚಳವಳಿಗಾರರು ಮತ್ತು ಕೆಲವು ಮಾಧ್ಯಮ ಸಮೂಹಕ್ಕೆ ಸೇರಿದ ಟ್ವೀಟ್/ಟ್ವಿಟರ್​ ಹ್ಯಾಂಡಲ್​ಗಳನ್ನು ಬ್ಲಾಕ್​ ಮಾಡಲಾಗಿದೆ. ಯಾವೆಲ್ಲ ಖಾತೆಗಳನ್ನು ಬ್ಲಾಕ್​ ಮಾಡಲಾಗಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಿರದಿದ್ದರೂ, ರೈತ ಸಂಘಟನೆಗಳಿಗೆ ಸೇರಿದ ಕೆಲವು ಟ್ವೀಟ್/ಹ್ಯಾಂಡಲ್ ಬ್ಲಾಕ್​ ಆಗಿದೆ ಎನ್ನಲಾಗಿದೆ. ಮತ್ತೊಂದೆಡೆ, ಕಾನೂನುಪ್ರಕಾರ ನೋಟಿಸ್ ಬಂದಾಗ ಕೆಲವು ಖಾತೆಗಳನ್ನು ನಿಗದಿತ ದೇಶಕ್ಕೆ ಸೀಮಿತವಾಗಿ ನಿರ್ಬಂಧಿಸಲಾಗುತ್ತದೆ ಹೊರತು ಬ್ಲಾಕ್ ಮಾಡಿರುವುದಿಲ್ಲ ಎಂದು ಟ್ವಿಟರ್ ತನ್ನ ವೆಬ್​ಸೈಟ್​ನಲ್ಲಿ ವಿವರಣೆ ನೀಡಿದೆ. (ಏಜೆನ್ಸೀಸ್​)

    ಮೀನು ಸಸ್ಯಾಹಾರವೇ? ವಿಧಾನಸಭೆಯಲ್ಲಿ ಆಯ್ತು ಸ್ವಾರಸ್ಯಕರ ಚರ್ಚೆ

    ಕೈ ಕೊಟ್ಟ ಪ್ರೇಯಸಿಯ ಬರ್ತ್​ ಡೇ ಪಾರ್ಟಿಗೆ ಮಾಜಿ ಲವರ್ ಎಂಟ್ರಿ! ನೋಡನೋಡುತ್ತಿದ್ದಂತೆ ನಡೆಯಿತು ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts