More

    ದಿನಕ್ಕೆ 200 ರೂಪಾಯಿ ಸಿಪ್​ನಲ್ಲಿ ಹೂಡಿಕೆ ಮಾಡಿದರೆ ಕೋಟ್ಯಧಿಪತಿಯಾಗಬಹು: ಹೀಗಿದೆ ನೋಡಿ ಲೆಕ್ಕಾಚಾರ

    ಮುಂಬೈ: ವ್ಯವಸ್ಥಿತ ಹೂಡಿಕೆ ಯೋಜನೆಗಳ (SIP- ಸಿಪ್​) ಮೂಲಕ ಮ್ಯೂಚುವಲ್ ಫಂಡ್ ಹೂಡಿಕೆಯು ಕಳೆದ ಕೆಲವು ವರ್ಷಗಳಲ್ಲಿ ಜನಪ್ರಿಯತೆಯನ್ನು ಗಳಿಸಿದೆ. ಏಕೆಂದರೆ ಇದು ಮಾರುಕಟ್ಟೆಯ ಏರಿಳಿತ ಅಪಾಯವನ್ನು ಕಡಿಮೆ ಮಾಡುತ್ತದೆ, ಮಾರುಕಟ್ಟೆಯು ಚೇತರಿಸಿಕೊಂಡ ನಂತರ ನಷ್ಟವನ್ನು ಸಮತೋಲನಗೊಳಿಸುತ್ತದೆ. ಎರಡನೆಯದಾಗಿ, ಮ್ಯೂಚುವಲ್ ಫಂಡ್‌ಗಳು ತಮ್ಮ ಹಣವನ್ನು ವಿವಿಧ ರೀತಿಯ ಷೇರುಗಳಲ್ಲಿ ಹೂಡಿಕೆ ಮಾಡುತ್ತವೆ. ಹೀಗಾಗಿ, ಕೆಲವು ಷೇರುಗಳು ಬೆಲೆ ಕುಸಿದರೂ ಒಟ್ಟಾರೆ ಅಪಾಯವನ್ನು ತಗ್ಗಿಸುತ್ತವೆ.

    ಸಿಪ್ ಎಂದರೆ ತಿಂಗಳಿಗೆ ಇಲ್ಲವೇ ಮೂರು ತಿಂಗಳಿಗೋ ಅಥವಾ ವರ್ಷಕ್ಕೊಮ್ಮೆ ನಿರ್ದಿಷ್ಟ ಮೊತ್ತದ ಹಣವನ್ನು ತೊಡಗಿಸುವುದಾಗಿದೆ. ಸಿಪ್​ ಹೂಡಿಕೆಯು ಅನೇಕ ಪ್ರಯೋಜನಗಳನ್ನು ಹೊಂದಿದೆ. ಇದು ಹೂಡಿಕೆದಾರರಲ್ಲಿ ಹೂಡಿಕೆ ಶಿಸ್ತನ್ನು ಅಭಿವೃದ್ಧಿಪಡಿಸುತ್ತದೆ. ಇದರಲ್ಲಿ ಪ್ರತಿ ಚಕ್ರದ ಅವಧಿಯಲ್ಲಿ ಹಣವನ್ನು ಉಳಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳುತ್ತಾರೆ.

    100 ರೂಪಾಯಿಗಳಷ್ಟು ಕಡಿಮೆ ಮೊತ್ತದ ಹಣವನ್ನೂ ಸಿಪ್​ ಮೂಲಕ ಮ್ಯೂಚುವಲ್​ ಫಂಡ್​ಗಳಲ್ಲಿ ಹೂಡಿಕೆ ಮಾಡಬಹುದು. ಇತರೆ ರೀತಿಯ ಷೇರು ಹೂಡಿಕೆಗಳಿಗೆ ಹೋಲಿಸಿದರೆ, ಇದು ಮಾರುಕಟ್ಟೆಯ ಏರಿಳಿತಕ್ಕೆ ಕಡಿಮೆ ದುರ್ಬಲವಾಗಿರುತ್ತದೆ; ಸಂಯೋಜನೆಯನ್ನು ಒದಗಿಸುತ್ತದೆ; ಮತ್ತು ಯಾವುದೇ ಸಮಯದಲ್ಲಿ ನಿಲ್ಲಿಸಬಹುದು.

    ನಿಮ್ಮ ಹೂಡಿಕೆಯನ್ನು ನೀವು ಹಲವು ವರ್ಷಗಳವರೆಗೆ ಹಿಡಿದಿಟ್ಟುಕೊಂಡರೆ, ಸಂಯೋಜನೆಯು ನಿಮ್ಮ ಹೂಡಿಕೆಯು ಹಲವು ಪಟ್ಟು ಬೆಳೆಯಲು ಸಹಾಯ ಮಾಡುತ್ತದೆ. ಕಳೆದ ಕೆಲವು ವರ್ಷಗಳಲ್ಲಿ, ಸಿಪ್​ಗಳು ಶೇಕಡಾ 12 ರಷ್ಟು ಸರಾಸರಿ ಆದಾಯವನ್ನು ನೀಡಿವೆ.

    ಈ ರೀತಿ ಸಿಪ್​ನನಲ್ಲಿ ದಿನಕ್ಕೆ ರೂ 200 ಹೂಡಿಕೆ ಮಾಡಿದರೆ ಅದು 15, 20 ಮತ್ತು 25 ವರ್ಷಗಳಲ್ಲಿ ನಿಮಗೆ ಎಷ್ಟು ಲಾಭ ನೀಡಬಹುದು ಎಂಬುದನ್ನು ಲೆಕ್ಕಾಚಾರ ಹಾಕೋಣ. ವಾರ್ಷಿಕವಾಗಿ ಶೇಕಡಾ 12ರಷ್ಟು ಲಾಭ ದೊರೆಯುತ್ತದೆ ಎಂಬ ಅಂದಾಜಿನಲ್ಲಿ ಈ ಲೆಕ್ಕಾಚಾರ ಹಾಕಬಹುದು.

    15 ವರ್ಷಗಳವರೆಗೆ ದಿನಕ್ಕೆ 200 ರೂಪಾಯಿ ಹೂಡಿಕೆ ಮಾಡಿ:

    ನೀವು 25 ವರ್ಷ ವಯಸ್ಸಿನವರಾಗಿದ್ದರೆ, ನೀವು ಪ್ರತಿದಿನ 200 ರೂಪಾಯಿಗಳನ್ನು ಉಳಿಸಲು ಪ್ರಾರಂಭಿಸಬಹುದು. ಇದನ್ನು ಸಿಪ್​ ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ನೀವು 15 ವರ್ಷಗಳ ದೀರ್ಘಾವಧಿಯ ಹೂಡಿಕೆ ತಂತ್ರವನ್ನು ಅನುಸರಿಸಬಹುದು.

    ನೀವು ಪ್ರತಿ ವರ್ಷ 12 ಪ್ರತಿಶತ ಸರಾಸರಿ ಆದಾಯವನ್ನು ಪಡೆದರೆ, ಸಿಪ್​ ಕ್ಯಾಲ್ಕುಲೇಟರ್ ಪ್ರಕಾರ, 15 ವರ್ಷಗಳಲ್ಲಿ ನಿಮ್ಮ ಒಟ್ಟು ಹೂಡಿಕೆಯು 10,80,000 (ರೂ. 10.8 ಲಕ್ಷ) ಆಗಿರುತ್ತದೆ. 15 ವರ್ಷಗಳ ನಂತರ ನೀವು ರೂ 19,47,456 (ರೂ 19.50 ಲಕ್ಷ) ಲಾಭವನ್ನು ಹೊಂದಬಹುದು, ನಿಮ್ಮ ಈ ಲಾಭ ಹಾಗೂ ನಿಮ್ಮ ಹೂಡಿಕೆ ಸೇರಿಸಿ ನಿಮಗೆ ಒಟ್ಟು ದೊರೆಯುವ ಮೊತ್ತವು ರೂ 30,27,456 (30.3 ಲಕ್ಷಗಳು) ಆಗುತ್ತದೆ.

    ನೀವು 25 ವರ್ಷ ವಯಸ್ಸಿನವರಾಗಿದ್ದು, 20 ವರ್ಷಗಳವರೆಗೆ ಸಿಪ್​ ಮೂಲಕ ಮ್ಯೂಚುವಲ್ ಫಂಡ್‌ನಲ್ಲಿ ದಿನಕ್ಕೆ 200 ರೂ. ತೊಡಗಿಸಿದರೆ, 20 ವರ್ಷಗಳಲ್ಲಿ ನಿಮ್ಮ ಒಟ್ಟು ಹೂಡಿಕೆ ರೂ 14,40,000 (ರೂ 14.4 ಲಕ್ಷ) ಆಗಿರುತ್ತದೆ. 20 ವರ್ಷಗಳ ನಂತರ, ನಿಮಗೆ ಲಾಭ ರೂ 45,54,888 (ರೂ 45.5 ಲಕ್ಷ) ದೊರೆಯುತ್ತದೆ. ನೀವು ಲಾಭ ಹಾಗೂ ಅಸಲು ಸೇರಿಸಿಕೊಂಡು 59,94,888 (59.9 ಲಕ್ಷ) ರಷ್ಟು ಮೊತ್ತವನ್ನು ಪಡೆದುಕೊಳ್ಳಬಹುದು.

    25 ವರ್ಷಗಳವರೆಗೆ ದಿನಕ್ಕೆ 200 ರೂಪಾಯಿ ಹೂಡಿಕೆ ಮಾಡಿ:

    ನೀವು ಇನ್ನೂ 25 ವರ್ಷಗಳವರೆಗೆ 25 ವರ್ಷಕ್ಕೆ ರೂ 200 ಅನ್ನು ಪ್ರತಿದಿನ ಹೂಡಿಕೆ ಮಾಡಲು ಪ್ರಾರಂಭಿಸಿದರೆ, ನಿಮ್ಮ ಮೆಚುರಿಟಿ ಮೊತ್ತವು ನಿಮ್ಮನ್ನು ಸುಲಭವಾಗಿ ಕೋಟ್ಯಧಿಪತಿಯನ್ನಾಗಿ ಮಾಡಬಹುದು.

    25 ವರ್ಷಗಳಲ್ಲಿ, ನಿಮ್ಮ ಒಟ್ಟು ಸಿಪ್​ ಹೂಡಿಕೆ ರೂ. 18,00,000 (ರೂ. 18 ಲಕ್ಷ) ಆಗಿರುತ್ತದೆ. 12 ಪ್ರತಿಶತದಷ್ಟು ಆದಾಯದ ದರದಲ್ಲಿ, ನಿಮ್ಮ ಬಂಡವಾಳದ ಲಾಭವು ರೂ 95,85,811 (ರೂ 95.9 ಲಕ್ಷ) ಎಂದು ಅಂದಾಜಿಸಬಹುದು, ಲಾಭ ಹಾಗೂ ಹೂಡಿಕೆ ಮೊತ್ತ ಸೇರಿಸಿ ನಿಮ್ಮ ಮೆಚ್ಯೂರಿಟಿ ಮೊತ್ತವು ರೂ 1,13,85,811 (1.1 ಕೋಟಿ) ಆಗಬಹುದು.

    ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ನೀವು 25 ವರ್ಷಗಳವರೆಗೆ ಪ್ರತಿದಿನ 200 ರೂಪಾಯಿಗಳನ್ನು ಹೂಡಿಕೆ ಮಾಡುವ ಮೂಲಕ ಕೋಟ್ಯಾಧಿಪತಿಯಾಗಬಹುದಾಗಿದೆ.

    ದೀರ್ಘಕಾಲದ ಹೂಡಿಕೆದಾರರಿಗೆ ಚಿಂತೆ ಬೇಡ… ಷೇರುಗಳನ್ನು ಕಡಿಮೆ ಬೆಲೆಯಲ್ಲಿ ಖರೀದಿಸುವ ಅವಕಾಶ ಬಂದೇ ಬರುತ್ತದೆ….

    ಪ್ರಧಾನಿ ಮೋದಿ ನೇತೃತ್ವ, ಭಾರತದ ಆರ್ಥಿಕತೆ, ವಿದೇಶಾಂಗ ನೀತಿ ಶ್ಲಾಘಿಸಿದ ಚೀನಾ ಸರ್ಕಾರಿ ಪತ್ರಿಕೆ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts