More

    ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್​ ಎಕ್ಸ್​ ಬೆಲೆ ಶೇಕಡಾ 71.5ರಷ್ಟು ಕುಸಿತ; ಎಲಾನ್​ ಮಸ್ಕ್​ ಮಾಲಿಕತ್ವದ ಸಂಸ್ಥೆಯ ನಷ್ಟಕ್ಕೆ ಕಾರಣಗಳೇನು?

    ನವದೆಹಲಿ: ಜಗತ್ತಿನ ಅತ್ಯಂತ ಶ್ರೀಮಂತ ಎಲಾನ್ ಮಸ್ಕ್. ಈ ಹಿಂದೆ ಟ್ವಿಟರ್​ ಎಂದು ಕರೆಯಲಾಗುತ್ತಿದ್ದ ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮನ್ನು ಅವರು ಖರೀದಿಸಿದ್ದರು. ನಂತರ ಇದರ ಹೆಸರನ್ನು ಎಕ್ಸ್ ಎಂದು ಬದಲಾಯಿಸಿದ್ದಾರೆ. ಈಗ ಪ್ಲಾಟ್​ಫಾರ್ಮ್​ನ ಅಂದಾಜು ಮೌಲ್ಯ 12.5 ಶತಕೋಟಿ ಡಾಲರ್​ ಆಗಿದೆ.

    2023ರ ಡಿಸೆಂಬರ್ 30ರಂದು ಫಿಡೆಲಿಟಿ ಸೆಕ್ಯುರಿಟೀಸ್ ಫೈಲಿಂಗ್ ಸಂಸ್ಥೆಯು ಎಕ್ಸ್​ನ ಮೌಲ್ಯಮಾಪನ ಮಾಡಿದೆ.

    2022ರ ಅಕ್ಟೋಬರ್​ನಲ್ಲಿ ಮಸ್ಕ್​ ಅವರು ಟ್ವಿಟರ್​ ಸ್ವಾಧೀನ ಪಡಿಸಿಕೊಂಡ ನಂತರ ಅದರ ಮೌಲ್ಯದಲ್ಲಿ ಶೇಕಡಾ 71.5ರಷ್ಟು ಕುಸಿತವಾಗಿದೆ ಎಂದು ಫಿಡೆಲಿಟಿ ಸೆಕ್ಯುರಿಟೀಸ್ ಫೈಲಿಂಗ್ ಹೇಳಿದೆ.

    ಇದರರ್ಥ ಈ ಪ್ಲಾಟ್‌ಫಾರ್ಮ್ ಅನ್ನು 44 ಶತಕೋಟಿ ಡಾಲರ್​ಗೆ ಮಸ್ಕ್​ ಖರೀದಿಸಿದ್ದು, ಈಗ ಅದರ ಮೌಲ್ಯ 12.5 ಶತಕೋಟಿ ಡಾಲರ್​ಗೆ ಕುಸಿದಿದೆ.

    ಸ್ವಾಧೀನ ಬೆಲೆ. ಬಳಕೆದಾರರ ಇಳಿಕೆ, ಜಾಹೀರಾತಿನ ತೊಂದರೆಗಳು ಮತ್ತು ವಿಷಯವಸ್ತು ಬದಲಾವಣೆ ಕಾಳಜಿಗಳಂತಹ ಅಂಶಗಳು ಈ ಕುಸಿತಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.

    ಎಲೋನ್ ಮಸ್ಕ್ ಅವರು ಅಕ್ಟೋಬರ್ 2022 ರಲ್ಲಿ ಟ್ವಿಟರ್​ ಅನ್ನು ಸ್ವಾಧೀನಪಡಿಸಿಕೊಂಡು, ಜುಲೈ 2023 ರಲ್ಲಿ ಎಕ್ಸ್ ಎಂದು ಮರುನಾಮಕರಣ ಮಾಡಿದರು. ಫಿಡೆಲಿಟಿ ಪ್ರಕಾರ, ಮಸ್ಕ್‌ನ ಮಾಲೀಕತ್ವದ ನಂತರ ಆರಂಭಿಕ ವರ್ಷದಲ್ಲಿ, ಎಕ್ಸ್​ನ ಮಾಸಿಕ ಬಳಕೆದಾರ ಸಂಖ್ಯೆಯಲ್ಲಿ ಶೇಕಡಾ 15ರಷ್ಟು ಕುಸಿತವಾಗಿದೆ. ಮಸ್ಕ್‌ ಅವರು ಈ ಸಂಸ್ಥೆಯನ್ನು ಸ್ವಾಧೀನ ಮಾಡಿಕೊಂಡ ನಂತರ ಅರ್ಧದಷ್ಟು ಸಿಬ್ಬಂದಿ ಕಡಿತ ಮಾಡಿದ್ದರು.

    ನವೆಂಬರ್ ಮಧ್ಯದಲ್ಲಿ ಸಾಕಷ್ಟು ಜಾಹೀರಾತುದಾರರು ಎಕ್ಸ್​ನಿಂದ ನಿರ್ಗಮಿಸಿದ್ದಾರೆ. ಶೇಕಡಾ 10.7% ರಷ್ಟು ನಷ್ಟಗಳು ಈ ತಿಂಗಳಲ್ಲಿ ಪ್ರತ್ಯೇಕವಾಗಿ ಉಂಟಾಗಿವೆ ಎಂದು ಹೇಳಲಾಗಿದೆ. ನವೆಂಬರ್‌ನಲ್ಲಿ, ಡಿಸ್ನಿ, ಆಪಲ್ ಮತ್ತು ಕೋಕಾ-ಕೋಲಾ ಸೇರಿದಂತೆ ಪ್ರಮುಖ ಜಾಹೀರಾತುದಾರರು ಯಹೂದಿ ವಿರೋಧಿ ಪೋಸ್ಟ್‌ಗೆ ಅನುಮೋದನೆ ನೀಡಿದ ನಂತರ ಜಾಹೀರಾತು ನೀಡುವುದರಿಂದ ಹಿಂದೆ ಸರಿದಿದ್ದಾರೆ.

    ಎಲೋನ್ ಮಸ್ಕ್ ಅವರನ್ನು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಫೋರ್ಬ್ಸ್ ಪರಿಗಣಿಸಿದೆ, 251 ಶತಕೋಟಿ ಡಾಲರ್​ ನಿವ್ವಳ ಮೌಲ್ಯದ ಆಸ್ತಿಯನ್ನು ಮಸ್ಕ್​ ಹೊಂದಿದ್ದಾರೆ ಎಂದು ಅಂದಾಜಿಸಲಾಗಿದೆ.

    2 ದಿನಗಳ ಕುಸಿತದ ನಂತರ ಏರಿಕೆ ಕಂಡ ಷೇರು ಮಾರುಕಟ್ಟೆ: ಯಾವ ಸೂಚ್ಯಂಕಗಳಲ್ಲಿ ಎಷ್ಟೆಷ್ಟು ಹೆಚ್ಚಳ?

    2 ದಿನಗಳ ಕುಸಿತದ ನಂತರ ಏರಿಕೆ ಕಂಡ ಷೇರು ಮಾರುಕಟ್ಟೆ: ಯಾವ ಸೂಚ್ಯಂಕಗಳಲ್ಲಿ ಎಷ್ಟೆಷ್ಟು ಹೆಚ್ಚಳ?

    ಸ್ಮಾರ್ಟ್‌ಫೋನ್ ಚಟ ನಿವಾರಣೆಗೆ ವಿಶಿಷ್ಟ ಉಪಾಯ: ಕುಟುಂಬ ಸದಸ್ಯರ ನಡುವಿನ ಒಪ್ಪಂದಪತ್ರ ಷರತ್ತು ಉಲ್ಲಂಘಿಸಿದರೆ ದಂಡ ಏನು ಗೊತ್ತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts