More

    2 ದಿನಗಳ ಕುಸಿತದ ನಂತರ ಏರಿಕೆ ಕಂಡ ಷೇರು ಮಾರುಕಟ್ಟೆ: ಯಾವ ಸೂಚ್ಯಂಕಗಳಲ್ಲಿ ಎಷ್ಟೆಷ್ಟು ಹೆಚ್ಚಳ?

    ಮುಂಬೈ: ಕಳೆದ ಎರಡು ದಿನಗಳಲ್ಲಿ ಕುಸಿದ ನಂತರ ಗುರುವಾರದಂದು ಈಕ್ವಿಟಿ ಬೆಂಚ್‌ಮಾರ್ಕ್ ಸೂಚ್ಯಂಕಗಳಾದ ಬಿಎಸ್​ಇ ಮತ್ತು ನಿಫ್ಟಿ ಸೂಚ್ಯಂಕಗಳು ಚೇತರಿಕೆ ಕಂಡು, ಅಂದಾಜು 1 ಪ್ರತಿಶತದಷ್ಟು ಏರಿಕೆಯಾದವು. ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಬಜಾಜ್ ಫೈನಾನ್ಸ್‌ ಷೇರುಗಳ ಖರೀದಿಯು ಈ ಏರಿಕೆಗೆ ವ್ಯಾಪಕ ಕೊಡುಗೆ ನೀಡಿತು.

    30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 490.97 ಅಂಕಗಳು ಅಥವಾ ಶೇಕಡಾ 0.69ರಷ್ಟು ಏರಿಕೆಯಾಗಿ 71,847.57 ಅಂಕಗಳಿಗೆ ಸ್ಥಿರವಾಯಿತು. ದಿನದ ವಹಿವಾಟಿನ ನಡುವೆ ಇದು 598.19 ಅಂಕ ಏರಿಕೆಯಾಗಿ 71,954.79 ಅಂಕಗಳಿಗೆ ತಲುಪಿತ್ತು.

    ನಿಫ್ಟಿ ಸೂಚ್ಯಂಕವು 141.25 ಅಂಕ ಅಥವಾ 0.66 ರಷ್ಟು ಏರಿಕೆ ಕಂಡು 21,658.60 ಅಂಕಗಳಿಗೆ ತಲುಪಿತು.

    ಬಜಾಜ್ ಫೈನಾನ್ಸ್ ಷೇರುಗಳು ಶೇಕಡಾ 4.44 ಮತ್ತು ಎನ್‌ಟಿಪಿಸಿ ಷೇರುಗಳು ಶೇಕಡಾ 3 ರಷ್ಟು ಏರಿಕೆ ಕಂಡವು. ಇಂಡಸ್‌ಇಂಡ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಟಾಟಾ ಮೋಟಾರ್ಸ್, ನೆಸ್ಲೆ, ಪವರ್ ಗ್ರಿಡ್, ಇನ್ಫೋಸಿಸ್, ಬಜಾಜ್ ಫಿನ್‌ಸರ್ವ್, ಎಚ್‌ಡಿಎಫ್‌ಸಿ ಬ್ಯಾಂಕ್ ಮೊದಲಾದ ಕಂಪನಿಗಳ ಷೇರುಗಳು ಕೂಡ ಲಾಭ ಗಳಿಸಿದವು.

    ಎಚ್‌ಸಿಎಲ್ ಟೆಕ್, ಮಹೀಂದ್ರಾ ಮತ್ತು ಮಹೀಂದ್ರಾ, ಮಾರುತಿ, ಹಿಂದೂಸ್ತಾನ್ ಯೂನಿಲಿವರ್ ಷೇರುಗಳು ಹಿನ್ನಡೆ ಅನುಭವಿಸಿದವು.

    ಏಷ್ಯಾದ ಮಾರುಕಟ್ಟೆಗಳ ಪೈಕಿ, ಸಿಯೋಲ್, ಟೋಕಿಯೋ, ಶಾಂಘೈ ಮತ್ತು ಹಾಂಗ್ ಕಾಂಗ್ ಹಿನ್ನಡೆ ಕಂಡವು.

    ಐರೋಪ್ಯ ಮಾರುಕಟ್ಟೆಗಳು ಲಾಭದಲ್ಲಿ ವಹಿವಾಟು ನಡೆಸಿದವು. ಅಮೆರಿಕದ ಮಾರುಕಟ್ಟೆಗಳು ಬುಧವಾರ ನಷ್ಟ ಅನುಭವಿಸಿದವು.

    ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಬುಧವಾರ 666.34 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ.

    ಬುಧವಾರ, ಬಿಎಸ್‌ಇ ಬೆಂಚ್‌ಮಾರ್ಕ್ ಸೂಚ್ಯಂಕವು 535.88 ಅಂಕ ಕುಸಿದು 71,356.60 ಅಂಕಗಳಿಗೆ ತಲುಪಿತ್ತು. ನಿಫ್ಟಿ ಸೂಚ್ಯಂಕವು 148.45 ಅಂಕ ಕುಸಿದು 21,517.35 ಅಂಕಗಳಿಗೆ ನೆಲೆಗೊಂಡಿತ್ತು.

    ವಿವಿಧ ಸೂಚ್ಯಂಕಗಳು:

    ಬಿಎಸ್​ಇ ಮಿಡ್​ ಕ್ಯಾಪ್​ ಸೂಚ್ಯಂಕ: 37,634.28 (552.70 ಅಂಕ ಏರಿಕೆ)
    ಬಿಎಸ್​ಇ ಸ್ಮಾಲ್​​ ಕ್ಯಾಪ್​ ಸೂಚ್ಯಂಕ: 43,553.03 (449.42 ಅಂಕ ಏರಿಕೆ)
    ನಿಫ್ಟಿ ಮಿಡ್​ ಕ್ಯಾಪ್​ 100 ಸೂಚ್ಯಂಕ: 47,309.70 (780.65 ಅಂಕ ಏರಿಕೆ)
    ನಿಫ್ಟಿ ಸ್ಮಾಲ್​ ಕ್ಯಾಪ್​ 100 ಸೂಚ್ಯಂಕ: 15,339.20 (150.40 ಏರಿಕೆ)
    ನಿಫ್ಟಿ ಸ್ಮಾಲ್​ ಕ್ಯಾಪ್​ 250 ಸೂಚ್ಯಂಕ: 14286.30 (145.30 ಅಂಕ ಏರಿಕೆ)

    ಅಗ್ನಿವೀರ್ ವಾಯು ನೇಮಕಾತಿಗೆ ಅಧಿಸೂಚನೆ: ಜ. 17ರಿಂದ ಅರ್ಜಿ ಸಲ್ಲಿಕೆ ಆರಂಭ

    ಆರ್ಕಿಟೆಕ್ಟ್ ಕೆಲಸ ತೊರೆದು ಬೆಂಗಳೂರಿನಲ್ಲಿ ವಡಾ ಪಾವ್ ಮಾರಾಟ!

    ಉದ್ಯೋಗಿಗಳಿಗೆ ಕಾರು ಉಡುಗೊರೆ ನೀಡಿದ ಚೆನ್ನೈ ಐಟಿ ಕಂಪನಿ: ಶೇಕಡಾ 33ರಷ್ಟು ಷೇರು ಹಂಚಲೂ ನಿರ್ಧಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts