More

    ಆರ್ಕಿಟೆಕ್ಟ್ ಕೆಲಸ ತೊರೆದು ಬೆಂಗಳೂರಿನಲ್ಲಿ ವಡಾ ಪಾವ್ ಮಾರಾಟ!

    ಬೆಂಗಳೂರು: ಐಟಿ ನಗರಿ, ಭಾರತದ ಸ್ಟಾರ್ಟ್​ ಅಪ್​ ರಾಜಧಾನಿಯ ಎಂಬ ಹೆಗ್ಗಳಿಕೆ ಬೆಂಗಳೂರಿನದ್ದಾಗಿದೆ. ಇಂತಹ ಮಹಾನಗರದಲ್ಲಿ ಆರ್ಕಿಟೆಕ್ಟ್​ (ವಾಸ್ತುಶಿಲ್ಪಿ) ಒಬ್ಬರು ತಮ್ಮ ಕೆಲಸವನ್ನು ತೊರೆದು ವಡಾ-ಪಾವ್​ ಮಾರಾಟಗಾರರಾಗಿರುವ ನೈಜ ಕಥೆಯನ್ನು ಸೋಷಿಯಲ್​ ಮೀಡಿಯಾ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ.

    ಸೋಷಿಯಲ್​ ಮೀಡಿಯಾ ಬಳಕೆದಾರ ವಿಶ್ವಾಸ್ ಎಂಬುವರು ಎಕ್ಸ್​ನಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದು, ಇದು ಸಾಕಷ್ಟು ವೈರಲ್​ ಆಗಿದೆ.

    “ನಾನು ಸೂಪರ್‌ ಹೀರೋ ಅಲ್ಲ, ಆದರೆ ನಾನು ವಡಾ ಪಾವ್‌ನೊಂದಿಗೆ ದಿನವನ್ನು ಉಳಿಸಬಲ್ಲೆ” (“I’m not a superhero, but I can save the day with a vada pav”) ಎಂಬ ಫಲಕವನ್ನು ಹಿಡಿದಿರುವ ವ್ಯಕ್ತಿಯೊಬ್ಬರ ಜತೆಗೆ ಇರುವ ಚಿತ್ರವನ್ನು ವಿಶ್ವಾಸ್​ ಹಂಚಿಕೊಂಡಿದ್ದಾರೆ. ಕೆಲವು ಪ್ಯಾಕ್ ಮಾಡಿದ ಆಹಾರ ಪೊಟ್ಟಣಗಳನ್ನು ಟೂ ವ್ಹೀಲರ್​ನಲ್ಲಿ ಇಟ್ಟಿರುವುದು ಕೂಡ ಈ ಚಿತ್ರದಲ್ಲಿ ಕಂಡುಬರುತ್ತದೆ.

    “ಜುಡಿಯೋ, HSR ನಲ್ಲಿ ಈ ವ್ಯಕ್ತಿಯನ್ನು ಭೇಟಿಯಾದೆ. ಶಾಪಿಂಗ್ ಮತ್ತು ವಡಾ-ಪಾವ್ ಆನಂದದ ಮಿಶ್ರಣದಿಂದ ಮಾಡಿದ ದಿನ ಇದಾಗಿತ್ತು. ಮಾಜಿ ವಾಸ್ತುಶಿಲ್ಪಿಯೊಬ್ಬರು ವಡಾ ಪಾವ್‌ನ ಸಂಪೂರ್ಣ ಊಟದ ಮೋಡಿಯನ್ನು ಪುನರುಜ್ಜೀವನಗೊಳಿಸಲು ಕಾರ್ಪೊರೇಟ್ ಜಗತ್ತನ್ನು ತೊರೆದಿದ್ದಾರೆ” ಎಂದು ಅವರು ಪೋಸ್ಟ್​ನಲ್ಲಿ ಬರೆದಿದ್ದಾರೆ.

    “ಪ್ರತಿಯೊಬ್ಬರೂ ಉದ್ಯಮಿಯಾಗಬಹುದು!! ಪ್ರತಿಯೊಬ್ಬರೂ ಮಾಡಲು ಹಲವು ಆಲೋಚನೆಗಳನ್ನು ಹೊಂದಿರುತ್ತಾರೆ, ಆದರೆ ಪ್ರತಿಯೊಬ್ಬರೂ ಅದನ್ನು ಪ್ರಾರಂಭಿಸುವುದಿಲ್ಲ. ಸ್ವಲ್ಪವೂ ಪ್ರಗತಿಯನ್ನು ಸಾಧಿಸುವುದಿಲ್ಲ.” ಎಂದು ಇನ್ನೊಬ್ಬ ಇಂಟರ್​ನೆಟ್​ ಬಳಕೆದಾದರರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts