More

    ನಿಮಗೆ ಹಲ್ಲು ನೋವಿದೆಯಾ? ಇಲ್ಲಿವೆ 5 ಸಿಂಪಲ್​​​ ಮನೆ ಮದ್ದು!

    ಬೆಂಗಳೂರು: ದೇಹದ ಯಾವುದೆ ಭಾಗಕ್ಕೆ ಸಮಸ್ಯೆಯಾದರೂ ಅದರ ಯಾತನೆ ಅನುಭವಿಸುವವರಿಗೇ ಗೊತ್ತು. ಅಂತಹ ಸಮಸ್ಯೆಗಳಲ್ಲಿ ಒಂದು ಸಮಸ್ಯೆ ಹಲ್ಲು ನೋವು. ಹಲ್ಲು ನೋವು ಇದ್ದಾಗ ಊಟ ತಿಂಡಿ ಮಾಡುವುದು ಬಹಳ ಕಷ್ಟ. ಅದಕ್ಕಿಂತ ಹೆಚ್ಚಾಗಿ ನೋವು ಅಂತ ಬೇರೆಯವರಿಗೆ ಸನ್ನೆ ಮಾಡಿ ತೋರಿಸಬೇಕಾಗುತ್ತದೆ. ಏಕೆಂದರೆ ಹಲ್ಲು ನೋವು ಇದ್ದಾಗ ಮಾತಾಡುವುದು ಕೂಡ ಬಹಳ ಕಷ್ಟ. ಹುಳುಕು ಹಲ್ಲು, ಒಸಡು ಕಾಯಿಲೆ, ಬಿರುಕು ಬಿಟ್ಟ ಹಲ್ಲು, ಮತ್ತು ಸೈನಸ್ ಸೋಂಕುಗಳಿಂದ ಹಲ್ಲು ನೋವು ಕಾಣಿಸಿಕೊಳ್ಳಬಹುದು. ಒಂದು ಅಥವಾ ಹೆಚ್ಚಿನ ಹಲ್ಲುಗಳಲ್ಲಿ ತೀವ್ರವಾದ ನೋವು ಅಥವಾ ಥ್ರೋಬಿಂಗ್ ಉಂಟುಮಾಡಬಹುದು. ಹಲ್ಲು ನೋವನ್ನು ಸಹಿಸುವುದು ಬಹಳ ಕಷ್ಟ ಮತ್ತು ಕಿರಿಕಿರಿಯನ್ನು ಉಂಟು ಮಾಡುತ್ತದೆ. ಆದರೆ ಹಲ್ಲು ನೋವಿಗೆ ಹಲವಾರು ಮನೆ ಮದ್ದುಗಳಿವೆ. ಅದರಲ್ಲಿ ಸುಲಭ ಮತ್ತು ಪರಿಣಾಮಕಾರಿಯಾದ ಮನೆ ಮದ್ದುಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.

    ಉಪ್ಪುನೀರಿನ್ನು ಮುಕ್ಕಳಿಸುವುದು
    ಬೆಚ್ಚಗಿನ ಉಪ್ಪುನೀರಿನೊಂದಿಗೆ ಬಾಯಿ ಮುಕ್ಕಳಿಸುವುದರಿಂದ ಉರಿಯೂತ ನಿವಾರಣೆ ಆಗುತ್ತದೆ. ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಒಂದು ಟೀ ಸ್ಪೂನ್​​ ಉಪ್ಪನ್ನು ಬೆರೆಸಿ ಅದನ್ನು ಬಾಯಿ ಮುಕ್ಕಳಿಸಿ ಉಗುಳಬೇಕು. ಇದನ್ನು ದಿನಕ್ಕೆ ಕೆಲವು ಬಾರಿ ಮಾಡುವುದರಿಂದ ಹಲ್ಲು ನೋವು ಕಡಿಮೆಯಾಗುತ್ತದೆ.

    ಲವಂಗ ಎಣ್ಣೆ
    ಲವಂಗದ ಎಣ್ಣೆ ಹಲ್ಲು ನೋವಿಗೆ ಪರಿಣಾಮಕಾರಿ ಮನೆಮದ್ದು. ಇದು ಅನಸ್ತೇಸ್ಟಿಕ್​ ಮತ್ತು ಆ್ಯಂಟಿಸೆಪ್ಟಿಕ್​​ ಗುಣಗಳನ್ನು ಹೊಂದಿದೆ. ಕೆಲವು ಹನಿ ಲವಂಗದ ಎಣ್ಣೆಯನ್ನು ಹತ್ತಿ ಉಂಡೆಯಲ್ಲಿ ತಗೆದುಕೊಂಡು ನೋವು ಇರುವ ಹಲ್ಲಿನ ಮೇಲೆ 20 ರಿಂದ 30 ನಿಮಿಷಗಳ ಕಾಲ ಇರಿಸಬೇಕು. ಇದನ್ನು ನೋವಿನ ಪ್ರಮಾಣಕ್ಕೆ ಅನುಗುಣವಾಗಿ ದಿನಕ್ಕೆ ಹಲವಾರು ಬಾರಿ ಮಾಡುವುದರಿಂದ ಹಲ್ಲು ನೋವು ಕಡಿಮೆಯಾಗುತ್ತದೆ.

    ಬೆಳ್ಳುಳ್ಳಿ
    ಬೆಳ್ಳುಳ್ಳಿ ನೈಸರ್ಗಿಕ ಆ್ಯಂಟಿಬ್ಯಾಕ್ಟೀರಿಯಲ್ ಮತ್ತು ಆ್ಯಂಟಿಇನ್ಫ್ಲಮೇಟರಿ ಗುಣಲಕ್ಷಣಗಳನ್ನು ಹೊಂದಿದೆ. ಹಲ್ಲು ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯನ್ನು ಜಜ್ಜಿ ಸ್ವಲ್ಪ ಉಪ್ಪಿನೊಂದಿಗೆ ಬೆರೆಸಿ ಪೀಡಿತ ಹಲ್ಲಿಗೆ ಇಟ್ಟುಕೊಳ್ಳಬೇಕು. ಅಗತ್ಯವಿರುವಂತೆ ದಿನಕ್ಕೆ ಹಲವಾರು ಬಾರಿ ಇದನ್ನು ಮಾಡಬೇಕು.

    ಪುದೀನಾ ಟೀ ಬ್ಯಾಗ್‌
    ಪುದೀನಾ ತಂಪುಗೊಳಿಸುವ ಸಂವೇದನೆಯನ್ನು ಹೊಂದಿದೆ. ಹಲ್ಲಿನ ನೋವನ್ನು ಮತ್ತು ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬಳಸಿದ ಟೀ ಬ್ಯಾಗ್ ಅನ್ನು ಬಾಧಿತ ಹಲ್ಲಿನ ಮೇಲೆ 15 ರಿಂದ 20 ನಿಮಿಷಗಳ ಕಾಲ ಇರಿಸಬೇಕು. ದಿನಕ್ಕೆ ಹಲವಾರು ಬಾರಿ ಇದನ್ನು ಮಾಡುವುದರಿಂದ ನೋವು ಉಪಶಮನವಾಗುತ್ತದೆ.

    ಹೈಡ್ರೋಜನ್ ಪೆರಾಕ್ಸೈಡ್
    ಹೈಡ್ರೋಜನ್ ಪೆರಾಕ್ಸೈಡ್ ಕೂಡ ತಂಪುಗೊಳಿಸುವ ಸಂವೇದನೆಯನ್ನು ಹೊಂದಿದೆ. ಅದು ಬಾಯಿಯಲ್ಲಿರುವ ಬ್ಯಾಕ್ಟೀರಿಯಾವನ್ನು ಕೊಲ್ಲಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೈಡ್ರೋಜನ್ ಪೆರಾಕ್ಸೈಡ್ ಮತ್ತು ನೀರನ್ನು ಸಮಾನ ಭಾಗಗಳಲ್ಲಿ ಮಿಶ್ರಣ ಮಾಡಿ 30 ಸೆಕೆಂಡುಗಳ ಕಾಲ ಬಾಯಿಯನ್ನು ಮುಕ್ಕಳಿಸಬೇಕು. ನೋವು ಕಡಿಮೆ ಆಗುವವರೆಗೂ ಇದನ್ನು ಮಾಡುತ್ತಿರಬೇಕು.

    ಈ ಪರಿಹಾರಗಳು ಕೇವಲ ತಾತ್ಕಾಲಿಕ ಪರಿಹಾರವನ್ನು ಒದಗಿಸುತ್ತದೆ. ಹಲ್ಲು ನೋವು ಮುಂದುವರಿದರೆ ಅಥವಾ ಹೆಚ್ಚು ತೀವ್ರವಾದರೆ ದಂತವೈದ್ಯರನ್ನು ಭೇಟಿ ಮಾಡುವುದು ಮುಖ್ಯ. (ಏಜೆನ್ಸೀಸ್​​)

    ಹುಟ್ಟಿದ ಕೂಸಿಗೆ ಮಾಜಿ ಸಿಎಂ ಹೆಸರಿಟ್ಟ ದಂಪತಿ! ಮಗುವಿನ ಹೆಸರೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts