More

    ಕ್ವಾರಂಟೈನ್​ ನಿಯಮ ಗೊತ್ತಿದ್ದರೆ ಮಾತ್ರ ರೈಲು ಟಿಕೆಟ್​

    ನವದೆಹಲಿ: ಲಾಕ್​ಡೌನ್​ ಅವಧಿಯಲ್ಲಿ ಭಾರತೀಯ ರೈಲ್ವೆ ರಾಜಧಾನಿ ಮಾದರಿಯ ವಿಶೇಷ ರೈಲುಗಳು ಮತ್ತು ಶ್ರಮಿಕ್​ ಸ್ಪೆಶಲ್​ ರೈಲುಗಳ ಸಂಚಾರ ಮಾತ್ರ ಏರ್ಪಡಿಸುತ್ತಿದೆ. ರಾಜಧಾನಿ ಮಾದರಿಯ ವಿಶೇಷ ರೈಲುಗಳಲ್ಲಿ ಇ-ಟಿಕೆಟ್​ ಮೂಲಕವೇ ಪ್ರಯಾಣಿಸುವುದು ಕಡ್ಡಾಯವಾಗಿದೆ.

    ಇ-ಟಿಕೆಟ್​ ಬುಕ್ಕಿಂಗ್​ನಲ್ಲಿ ಐಆರ್​ಸಿಟಿಸಿ ಈಗ ಹೊಸ ಸೌಲಭ್ಯ ಸೃಷ್ಟಿಸಿದೆ. ಅಂದರೆ, ಪ್ರಯಾಣಿಕರು ತಾವು ತಲುಪಲಿರುವ ಗಮ್ಯದಲ್ಲಿನ ಕ್ವಾರಂಟೈನ್​ ನಿಯಮದ ಅರಿವು ಹೊಂದಿರುವುದು ಕಡ್ಡಾಯವಾಗಿದೆ. ಈ ಸಂಗತಿ ಗೊತ್ತು ಎಂದು ನಮೂದಿಸಿದಲ್ಲಿ ಮಾತ್ರವೇ ಟಿಕೆಟ್​ ಬುಕ್ಕಿಂಗ್​ಗೆ ಅವಕಾಶ ದೊರೆಯಲಿದೆ.

    ಇದನ್ನೂ ಓದಿ:  ಜೂನ್‌ ಮೊದಲ ವಾರದಲ್ಲಿ ಉನ್ನತ ಶಿಕ್ಷಣ ಪರೀಕ್ಷೆ ಕುರಿತ ನಿರ್ಧಾರ ಪ್ರಕಟ: ಡಾ. ಅಶ್ವತ್ಥನಾರಾಯಣ

    ಕೆಲದಿನಗಳ ಹಿಂದೆ ದೆಹಲಿಯಿಂದ ಬೆಂಗಳೂರು ತಲುಪಿದ್ದ ರೈಲಿನ 20ಕ್ಕೂ ಹೆಚ್ಚು ಪ್ರಯಾಣಿಕರು ಕರ್ನಾಟಕದಲ್ಲಿನ ಕ್ವಾರಂಟೈನ್​ ನಿಯಮದ ಪ್ರಕಾರ ಹಣಕೊಟ್ಟು ಸಾಂಸ್ಥಿಕ ಕ್ವಾರಂಟೈನ್​ನಲ್ಲಿ ಇರಲು ನಿರಾಕರಿಸಿ ಪ್ರತಿಭಟನೆ ನಡೆಸಿದ್ದರು. ಬಳಿಕ ಅವರೆಲ್ಲರನ್ನೂ ಮತ್ತೊಂದು ರೈಲಿನಲ್ಲಿ ಹೆಚ್ಚುವರಿ ಬೋಗಿ ಅಳವಡಿಸಿ ನವದೆಹಲಿಗೆ ವಾಪಸು ಕಳುಹಿಸಲಾಗಿತ್ತು.

    ಇದರ ಪರಿಣಾಮವೇ ಕ್ವಾರಂಟೈನ್​ ನಿಯಮ ಗೊತ್ತಿರುವ ಬಗ್ಗೆ ಪ್ರಯಾಣಿಕರು ಮಾಹಿತಿ ಒದಗಿಸುವ ಸೌಲಭ್ಯವನ್ನು ಐಆರ್​ಸಿಟಿಸಿ ತನ್ನ ಆ್ಯಪ್​ನಲ್ಲಿ ಸೃಷ್ಟಿಸಿದೆ. ಟಿಕೆಟ್​ ಮುಂಗಡ ಕಾಯ್ದಿರಿಸುವಾಗ ಕ್ವಾರಂಟೈನ್​ ನಿಯಮ ಗೊತ್ತೆಂದು ಪ್ರಯಾಣಿಕರು ನಮೂದಿಸಲೇ ಬೇಕಾಗುತ್ತದೆ. ಅಲ್ಲದೆ, ತಾವು ತಲುಪಬೇಕಿರುವ ಗಮ್ಯವನ್ನು ತಲುಪಿದ ಬಳಿಕ ಕ್ವಾರಂಟೈನ್​ ನಿಯಮ ಪಾಲಿಸಲು ನಿರಾಕರಿಸಿದರೆ ಸೂಕ್ತ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.

    ಸುಖಮಯ ವೈವಾಹಿಕ ಜೀವನಕ್ಕೆ ನಟ ರಿತೇಶ್​ ದೇಶ್​ಮುಖ್​ ಕೊಟ್ಟಿರುವ ಸಲಹೆ ಇದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts