More

    ಎರಡು ದಿನ ತಡವಾಗಿದ್ದರೆ ಸಿಮೆಂಟ್​ ಕಂಪನಿಯಿಂದಲೇ 17 ಕೋಟಿ ರೂ. ಪಡೀತಿದ್ದ ಉದ್ಯೋಗಿ….!

    ನವದೆಹಲಿ: ಅದನ್ನು ಅವಸರ ಅಂಥೇನೂ ಹೇಳೋಕಾಗಲ್ಲ. ಆದರೆ, ಕೊಂಚ ತಾಳಬಹುದಿತ್ತು. ಅದೊಂದು ಈಮೇಲ್​ ಕಳುಹಿಸುವುದು ಇನ್ನೆರಡು ದಿನ ವಿಳಂಬವಾಗಿದ್ದರೆ, ಆತ ಬರೋಬ್ಬರಿ 17.38 ಕೊಟಿ ರೂ.ಗಳ ಒಡೆಯನಾಗಿರುತ್ತಿದ್ದ. ಆದರೆ, ದುರಾದೃಷ್ಟ ಮೂರು ಬಾರಿ ಕೋರ್ಟ್​ ಮೆಟ್ಟಿಲೇರಿದರೂ ಕಂಪನಿಯಿಂದ ಪರಿಹಾರ ಮೊತ್ತ ಪಡೆಯುವುದು ಆತನಿಗೆ ಸಾಧ್ಯವಾಗಲಿಲ್ಲ.

    ಜಗತ್ತಿನ ಅತಿ ದೊಡ್ಡ ಸಿಮೆಂಟ್​ ತಯಾರಿಕಾ ಕಂಪನಿಗಳಲ್ಲಿ ಒಂದಾದ ಲಾಫರ್ಜ್​ನಲ್ಲಿ ಆ್ಯಂಟನಿ ಜನೋನ್​ ಮುಖ್ಯ ಹುದ್ದೆಯಲ್ಲಿದ್ದ. 2015ರಲ್ಲಿ ಈ ಕಂಪನಿಯನ್ನು ಹೊಲ್ಸಿಮ್​ ಜತೆಗೆ ವಿಲೀನಗೊಳಿಸಲು ನಿರ್ಧರಿಸಲಾಯಿತು. ಇದರಂತೆ, 380 ಹುದ್ದೆಗಳ ಕಡಿತ ಮಾಡಲಾಗುತ್ತದೆ. ಉದ್ಯೋಗಿಗಳಿಗೆ ಪರಿಹಾರ ಮೊತ್ತ ನೀಡಲಾಗುವುದು ಎಂದು ಲಾಫರ್ಜ್​ ಘೋಷಿಸಿತು.

    ಇದನ್ನೂ ಓದಿ; ಕರೊನಾ ಪ್ರಕರಣಗಳಿಗೆ ಅಂತ್ಯ ಹಾಡಿದ ನ್ಯೂಜಿಲೆಂಡ್; ಸಾರ್ವಜನಿಕ ಸಭೆ, ಸಮಾರಂಭಗಳಿಗೂ ಇಲ್ಲ ನಿರ್ಬಂಧ 

    ಅದರಂತೆ, ಜನೋನ್​ ಕೂಡ ತನಗೂ ಪರಿಹಾರ ಮೊತ್ತ ಸಿಗಲಿದೆ ಎಂದೇ ಭಾವಿಸಿದ್ದ. ಆದರೆ, ನಡೆದಿದ್ದೇ ಬೇರೆ.
    ಆ್ಯಂಟನಿ ಕಂಪನಿಯ ಸಿಂಗಾಪೂರ್​ ಶಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ಎರಡು ವರ್ಷಗಳ ಬಳಿಕ ಪ್ಯಾರೀಸ್​ಗೆ ಮರಳಿದ. ಕಂಪನಿ ಆತನಿಗೆ ಯೋಜನಾ ವ್ಯವಸ್ಥಾಪಕ ಹುದ್ದೆ ನೀಡಿದ್ದರೂ ಆತ ಸ್ವೀಕರಿಸಿರಲಿಲ್ಲ. ಆತ ಯಾವುದೇ ಕೆಲಸ ಮಾಡದಿದ್ದರೂ ಆತನಿಗೆ 13.60 ಲಕ್ಷ ರೂ. ವೇತನ ನೀಡಲಾಗುತ್ತಿದೆ ಎಂದು ಕಂಪನಿ ಕೋರ್ಟ್​ಗೆ ತಿಳಿಸಿತ್ತು.

    ಈ ನಡುವೆ, ಹುದ್ದೆ ಕಡಿತಕ್ಕೆ ಮುಂದಾದ ಕಂಪನಿ ಪರಿಹಾರ ಯೋಜನೆ ಘೋಷಿಸಿ ಅದನ್ನು ಪೂರ್ವಾನ್ವಯಗೊಳಿಸಿತ್ತು. ಮತ್ತದು ದೇಶೀಯ ಸಿಬ್ಬಂದಿಗೆ ಮಾತ್ರ ಎಂದು ಷರತ್ತು ವಿಧಿಸಿತ್ತು. ದುರಾದೃಷ್ಟವೆಂದರೆ, ಕಂಪನಿ ಪರಿಹಾರಕ್ಕೆ ನಿಗದಿಪಡಿಸಿದ್ದ ಕಟ್​ಆಫ್​ ದಿನಾಂಕಕ್ಕೆ ಎರಡು ದಿನ ಮೊದಲು ಆತ ಸಿಂಗಾಪೂರ್​ನಲ್ಲಿ ಕೆಲಸ ಮಾಡುವ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿ ಈಮೇಲ್​ ಕಳುಹಿಸಿದ್ದ.

    ಇದನ್ನೂ ಓದಿ; ‘ಪಾಳೇಗಾರ’ ಚೀನಾ ಪಳಗಿಸಲು ಒಂದಾದ ಎಂಟು ಪ್ರಜಾಪ್ರಭುತ್ವ ರಾಷ್ಟ್ರಗಳು 

    ಆತ ವಿದೇಶದಲ್ಲಿ ಕೆಲಸ ಮಾಡಲು ಒಪ್ಪಿದ್ದರಿಂದ ಫ್ರೆಂಚ್​ ಕಾರ್ಮಿಕ ಕಾನೂನು ಅನ್ವಯವಾಗದು. ಒಂದು ವೇಳೆ ಒಪ್ಪಿಕೊಳ್ಳುವುದು ಎರಡು ದಿನ ತಡವಾಗಿದ್ದರೆ ಆತ ಪರಿಹಾರಕ್ಕೆ ಅರ್ಹನಾಗುತ್ತಿದ್ದ ಎಂದು ಫ್ರೆಂಚ್​ ನ್ಯಾಯಾಲಯ ತೀರ್ಪು ನೀಡಿದೆ.
    ಹೀಗಾಗಿ ಆ್ಯಂಟನಿ ಕಂಪನಿಯಿಂದ 17.38 ಕೋಟಿ ರೂ. ಪರಿಹಾರ ಪಡೆಯುವ ಅವಕಾಶದಿಂದ ವಂಚಿತನಾಗಿದ್ದಾನೆ.

    ಬೆಂಜ್​, ಬಿಎಂಡಬ್ಲ್ಯು, ಆಡಿ ಕಾರು ಬಿಟ್ಟು ಎತ್ತಿನ ಗಾಡಿಯಲ್ಲಿ ಹೊರಟ ಉದ್ಯಮಿಗಳು; ಸರ್ಕಾರಕ್ಕೆ ಕೊಟ್ಟರು ಸಂದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts