More

    ಗೋಮಾಳ ರಕ್ಷಿಸದಿದ್ದರೆ ಎಲ್ಲ ಚುನಾವಣೆ ಬಹಿಷ್ಕಾರ

    ಸಾಗರ: ತಾಲೂಕಿನ ಮಾಸೂರು ಗ್ರಾಮದ ಸರ್ವೇ ನಂ.105ರಲ್ಲಿ ಇರುವ 7.15 ಎಕರೆ ಗೋಮಾಳ ಜಮೀನಿಗೆ ಸಂಬಂಧಪಟ್ಟಂತೆ ಖಾತೆ ಪಹಣಿ ರದ್ದುಪಡಿಸದೆ ಇದ್ದರೆ ಗ್ರಾಮಸ್ಥರು ಮುಂದಿನ ಎಲ್ಲ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡುವುದಾಗಿ ಗ್ರಾಪಂ ಮಾಜಿ ಅಧ್ಯಕ್ಷ ವೆಂಕಟೇಶ್ ಮೆಳವರಿಗೆ ಎಚ್ಚರಿಕೆ ನೀಡಿದ್ದಾರೆ.

    ಹಿಂದಿನ ಚುನಾವಣೆಯಲ್ಲಿ ನಾವು ಕಾಂಗ್ರೆಸ್ ಬೆಂಬಲಿಸಿದ್ದೆವು. ಆದಾಗ್ಯೂ ಶಾಸಕ ಗೋಪಾಲಕೃಷ್ಣ ಬೇಳೂರು ಗೋಮಾಳ ಉಳಿಸಿ ಕೊಳ್ಳುವ ಹೋರಾಟಕ್ಕೆ ಬೆಂಬಲ ನೀಡದೆ ಇರುವುದು ದುರದೃಷ್ಟಕರ ಸಂಗತಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
    1963-64ರಲ್ಲಿ ಮೆಳವರಿಗೆ ಗ್ರಾಮದ ನಾರಾಯಣಪ್ಪ ಎಂಬುವರಿಗೆ ಷರತ್ತಿನ ಮೇಲೆ ಗೇರು ಬೇಸಾಯಕ್ಕೆ ಜಮೀನು ಮಂಜೂರು ಮಾಡಲಾಗಿತ್ತು. ಆದರೆ ಗೇರು ಬೇಸಾಯ ಈವರೆಗೆ ಮಾಡಿಲ್ಲ. ಸರ್ಕಾರ ವಿಧಿಸಿದ ಷರತ್ತು ಉಲ್ಲಂಘನೆ ಮಾಡಿರುವುದರಿಂದ ಜಮೀನು ಸರ್ಕಾರಕ್ಕೆ ಸಲ್ಲಬೇಕು. ಈ ಜಮೀನಿಗೆ ಸಂಬಂಧಪಟ್ಟಂತೆ ಅಧಿಕಾರಿಗಳು ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ದೂರಿದರು.
    ಈ ಜಮೀನನ್ನು ಗ್ರಾಮಸ್ಥರು ನೂರಾರು ವರ್ಷಗಳಿಂದ ರಕ್ಷಣೆ ಮಾಡಿಕೊಂಡು ಬಂದಿದ್ದೇವೆ. ಉದ್ದೇಶಿತ ಜಾಗದಲ್ಲಿ ಕಾಡು ಜಾತಿ ಮರ, ಹುಲ್ಲುಗಾವಲು ಇದೆ. ಆದರೆ ಪೊಲೀಸರು ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿದ್ದಾರೆ. ರೇಣುಕಮ್ಮ ಎಂಬುವರಿಗೆ ಅನುಕೂಲ ಮಾಡಿಕೊಡಲು ಜೆಸಿಬಿ, ಟ್ರ್ಯಾಕ್ಟರ್ ಬಳಸಿ ಹಸಿರು ನಾಶ ಮಾಡಿ ಜಮೀನು ಸಮತಟ್ಟು ಮಾಡಿಸಲಾಗಿದೆ. ಪ್ರತಿಭಟಿಸಿದ ಗ್ರಾಮಸ್ಥರನ್ನು ಪೊಲೀಸರು ಬೆದರಿಸಿದ್ದಾರೆ. ಜತೆಗೆ ಕಾಡು ಇರಲಿಲ್ಲ ಎಂದು ಸುಳ್ಳು ವರದಿ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
    ಗೋಮಾಳ ಗ್ರಾಮಕ್ಕೆ ಉಳಿಯಬೇಕು. ಈ ಹೋರಾಟಕ್ಕೊಂದು ತಾರ್ಕಿಕ ಅಂತ್ಯ ಸಿಗುವವರೆಗೂ ಗ್ರಾಮಸ್ಥರು ಮುಂಬರುವ ಎಲ್ಲ ಚುನಾವಣೆಗಳನ್ನು ಬಹಿಷ್ಕರಿಸುವ ತೀರ್ಮಾನ ತೆಗೆದುಕೊಂಡಿದ್ದೇವೆ. ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಗ್ರಾಮದ ಜಮೀನು ಗ್ರಾಮಕ್ಕೆ ಉಳಿಸಿಕೊಡಬೇಕು ಎಂದು ಒತ್ತಾಯಿಸಿದರು.
    ನಾರಾಯಣಪ್ಪ, ಗಣಪತಿ, ವೆಂಕಟೇಶ್, ಸೋಮಶೇಖರ್, ಅಣ್ಣಪ್ಪ, ಲೋಕೇಶ್, ರಮೇಶ್, ಎಚ್.ಎ.ನಾರಾಯಣಪ್ಪ, ನಾಗರಾಜ, ವೀರಭದ್ರ, ಕೆರೆಯಪ್ಪ, ರಾಜಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts