More

    ಆಗಸ್ಟ್ 15 ರೊಳಗೆ ದೇಸಿ ಲಸಿಕೆ ಬಿಡುಗಡೆ ಗುರಿ ಹೊಂದಿದೆ ಐಸಿಎಂಆರ್

    ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ದೇಸೀ ಕೋವಿಡ್-19 ಲಸಿಕೆ (BBV152 COVID ಲಸಿಕೆ) ಯ ಕ್ಲಿನಿಕಲ್ ಪ್ರಯೋಗಗಳನ್ನು ತ್ವರಿತಗತಿಯಲ್ಲಿ ನಡೆಸಲು ಐಸಿಎಂಆರ್ ಭಾರತ್ ಬಯೋಟೆಕ್ ಇಂಟರ್​​​​​​ನ್ಯಾಷನಲ್ ಲಿಮಿಟೆಡ್ (ಬಿಬಿಐಎಲ್) ನೊಂದಿಗೆ ಸಹಭಾಗಿತ್ವ ಹೊಂದಿದೆ.
    ಇದು ಭಾರತ ಅಭಿವೃದ್ಧಿಪಡಿಸಿದ ಮೊದಲ ಲಸಿಕೆ ಮತ್ತು ಇದು ಸರ್ಕಾರ ಉನ್ನತ ಮಟ್ಟದಲ್ಲಿ ಮೇಲ್ವಿಚಾರಣೆ ನಡೆಸುತ್ತಿರುವ ಪ್ರಮುಖ ಆದ್ಯತೆಯ ಯೋಜನೆಗಳಲ್ಲಿ ಒಂದಾಗಿದೆ ಎಂದು ಐಸಿಎಂಆರ್ ಹೇಳಿಕೆಯಲ್ಲಿ ತಿಳಿಸಿದೆ.
    ಲಸಿಕೆಯನ್ನು ಪುಣೆಯ ಐಸಿಎಂಆರ್-ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ‘ಪ್ರತ್ಯೇಕಿಸಿದ ಸಾರ್ಸ್ ಕೋವ್ -ಜಡ್’ ನಿಂದ ಪಡೆಯಲಾಗಿದೆ. ಐಸಿಎಂಆರ್ ಮತ್ತು ಬಿಬಿಐಎಲ್ ಈ ಲಸಿಕೆಯ ಪೂರ್ವಭಾವಿ ಮತ್ತು ಕ್ಲಿನಿಕಲ್ ಅಭಿವೃದ್ಧಿಗೆ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿವೆ.

    ಇದನ್ನೂ ಓದಿ: ದೇಶಿಯವಾಗಿ ಸಿದ್ಧವಾಗಿರುವ ಮತ್ತೊಂದು ಕೋವಿಡ್​ ಚುಚ್ಚುಮದ್ದು ಕ್ಲಿನಿಕಲ್​ ಟ್ರಯಲ್​ಗೆ ಅನುಮತಿ


    ಎಲ್ಲಾ ಕ್ಲಿನಿಕಲ್ ಪ್ರಯೋಗಗಳು ಪೂರ್ಣಗೊಂಡ ನಂತರ 2020 ರ ಆಗಸ್ಟ್ 15 ರೊಳಗೆ ಸಾರ್ವಜನಿಕ ಆರೋಗ್ಯ ಬಳಕೆಗಾಗಿ ಲಸಿಕೆಯನ್ನು ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ. ಬಿಬಿಐಎಲ್ ಗುರಿಯನ್ನು ಪೂರೈಸಲು ತ್ವರಿತವಾಗಿ ಕಾರ್ಯನಿರ್ವಹಿಸುತ್ತಿದೆ. ಆದಾಗ್ಯೂ, ಅಂತಿಮ ಫಲಿತಾಂಶವು ಈ ಯೋಜನೆಯಲ್ಲಿ ಸಹಭಾಗಿಯಾಗಿರುವ ಎಲ್ಲ ಕ್ಲಿನಿಕಲ್ ಪ್ರಯೋಗ ಕೇಂದ್ರಗಳ ಸಹಕಾರವನ್ನು ಅವಲಂಬಿಸಿರುತ್ತದೆ. ಬಿಬಿವಿ 152 ಕೋವಿಡ್ ಲಸಿಕೆಯ ಕ್ಲಿನಿಕಲ್ ಟ್ರಯಲ್ ಸೈಟ್‌ ಆಗಿ ನಿಮ್ಮನ್ನು ಆಯ್ಕೆ ಮಾಡಲಾಗಿದೆ. ಕೋವಿಡ್ -19ಕ್ಕೆ ಲಸಿಕೆಯನ್ನು ತುರ್ತು ಪ್ರಾರಂಭಿಸುವ ಉದ್ದೇಶದಿಂದ
    ಕ್ಲಿನಿಕಲ್ ಪ್ರಯೋಗಗಳಿಗೆ ಸಂಬಂಧಿಸಿದ ಎಲ್ಲ ಅನುಮೋದನೆಗಳನ್ನು ತ್ವರಿತವಾಗಿ ಪಡೆಯಲು ನಿಮಗೆ ಮತ್ತು ಜುಲೈ 7 ರೊಳಗಾಗಿ ನಂತರ ಸಹಭಾಗಿತ್ವದ ದಾಖಲಾತಿ ಪೂರೈಸಬೇಕೆಂದು ಲಸಿಕೆ ಅಭಿವೃದ್ಧಿಯಲ್ಲಿ ಭಾಗಿಯಾಗುವ ಸಂಸ್ಥೆಗಳಿಗೆ ಬರೆದ ಪತ್ರದಲ್ಲಿ ಐಸಿಎಂಆರ್  ಕಟ್ಟುನಿಟ್ಟಾಗಿ ಸೂಚಿಸಿದೆ.

    ಇದನ್ನೂ ಓದಿ: ಸ್ವೀಟ್‌ಸ್ಟಾಲ್‌ನಲ್ಲಿ 16 ಗಂಟೆ ಕರೊನಾ ಶಂಕಿತನ ಶವ!


    ಐಸಿಎಂಆರ್ ಈ ಆದೇಶವನ್ನು ಅನುಸರಿಸಲು ಸಂಸ್ಥೆಗಳಿಗೆ ತಿಳಿಸಿದೆ, ಕಾರ್ಯನಿರ್ವಹಣೆಯನ್ನು ಬಹಳ ಗಂಭೀರವಾಗಿ ಪರಿಗಣಿಸಲಾಗುತ್ತದೆ. ಆದ್ದರಿಂದ, ಈ ಯೋಜನೆಯನ್ನು ಹೆಚ್ಚಿನ ಆದ್ಯತೆಯೊಂದಿಗೆ ಪರಿಗಣಿಸಲು ಮತ್ತು ನಿರ್ದಿಷ್ಟ ಕಾರ್ಯವನ್ನು ಯಾವುದೇ ವಿಳಂಬವಿಲ್ಲದೆ ಪೂರೈಸಲು ಅವುಗಳಿಗೆ ಸೂಚಿಸಿದೆ.
    ದೇಶದ ಮೊದಲ COVID-19 ಲಸಿಕೆಯ ಕ್ಲಿನಿಕಲ್ ಪ್ರಯೋಗಕ್ಕಾಗಿ ಐಸಿಎಂಆರ್ ಒಡಿಶಾದ ಒಂದು ಸಂಸ್ಥೆ ಸೇರಿದಂತೆ 12 ಸಂಸ್ಥೆಗಳನ್ನು ಆಯ್ಕೆ ಮಾಡಿದೆ.
    ಐಸಿಎಂಆರ್ ಮಹಾನಿರ್ದೇಶಕ ಬಲರಾಮ್ ಭಾರ್ಗವ ಅವರು ಆಗಸ್ಟ್ 15 ರೊಳಗೆ ದೇಶಿ ಕೋವಿಡ್ -19 ಲಸಿಕೆಯನ್ನು ಬಿಡುಗಡೆ ಮಾಡುವ ಗುರಿ ಹೊಂದಿರುವುದಾಗಿ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

    2021ರಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 68 ಸಾವಿರ ರೂಪಾಯಿಗೆ ಹೆಚ್ಚಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts