More

    ಸ್ವೀಟ್‌ಸ್ಟಾಲ್‌ನಲ್ಲಿ 16 ಗಂಟೆ ಕರೊನಾ ಶಂಕಿತನ ಶವ!

    ಕೋಲ್ಕತಾ: ಕರೊನಾ ವೈರಸ್‌ನ ಈ ದಿನಗಳಲ್ಲಿ ಯಾರೇ ಮೃತಪಟ್ಟರೂ, ಅವರಿಗೆ ಕರೊನಾ ಸೋಂಕು ಇತ್ತೇ ಎಂಬ ಬಗ್ಗೆ ಪರೀಕ್ಷೆ ಮಾಡಲಾಗುತ್ತದೆ. ಸೋಂಕಿನ ಪ್ರಮಾಣಪತ್ರ ನೀಡುವವರೆಗೂ ಶವಸಂಸ್ಕಾರ ಮಾಡುವಂತಿಲ್ಲ.

    ಇದಕ್ಕಾಗಿಯೇ ಕೇಂದ್ರ ಸರ್ಕಾರ ಇದೀಗ ಶಂಕಿತ ಸೋಂಕಿತ ವ್ಯಕ್ತಿ ಮೃತಪಟ್ಟರೆ, ಕರೊನಾದ ಪ್ರಮಾಣಪತ್ರ ಬರುವವರೆಗೆ ಕಾಯುವ ಅಗತ್ಯವಿಲ್ಲ ಎಂದು ನಿನ್ನೆಯಷ್ಟೇ ಹೇಳಿದೆ.

    ಆದರೆ ಈ ನಡುವೆಯೇ, ಪ್ರಮಾಣಪತ್ರವನ್ನು ನೀಡುವಲ್ಲಿ ಆಸ್ಪತ್ರೆ ವಿಳಂಬ ಮಾಡಿದ ಕಾರಣಕ್ಕೆ ಕೋಲ್ಕತಾದಲ್ಲಿ ಮೃತ ವ್ಯಕ್ತಿಯ ಶವವನ್ನು 16 ಗಂಟೆಗಳ ಕಾಲ ಸ್ವೀಟ್‌ಸ್ಟಾಲ್‌ನಲ್ಲಿ ಇಟ್ಟಿರುವ ಘಟನೆ ನಡೆದಿದೆ.

    ‌ಇದನ್ನೂ ಓದಿ: ಕರೊನಾ ಶಂಕಿತ ಮೃತಪಟ್ಟರೆ ವರದಿಗೆ ಕಾಯಬೇಕಿಲ್ಲ: ಕೇಂದ್ರ ಹೇಳಿರುವುದೇನು?

    ಮಾಣಿಕ್ತಾಲಾದ ಗೌರಿಬಾರಿ ಪ್ರದೇಶದಲ್ಲಿ. 57 ವರ್ಷದ ವ್ಯಕ್ತಿಯ ಮೃತ ಶರೀರವನ್ನು ಸ್ವೀಟ್‌ಮೀಟ್ ಮಾರಾಟಗಾರರ ತನ್ನ ಅಂಗಡಿಯೊಳಗೆ ಇಟ್ಟುಕೊಂಡಿದ್ದ. ಮೃತರ ಸಿಒವಿಐಡಿ ಪರೀಕ್ಷಾ ವರದಿ ಕಾಯುತ್ತಿರುವುದರಿಂದ ಅವರಿಗೆ ಮರಣ ಪ್ರಮಾಣಪತ್ರ ನೀಡಿರಲಿಲ್ಲ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

    ಅಸಹಾಯಕ ಕುಟುಂಬವು ಶವಸಂಸ್ಕಾರ ಮಾಡಲಾಗದೇ ಶವವನ್ನು ಬೇರೆ ಕಡೆಗಳಲ್ಲಿಯೂ ಇಟ್ಟುಕೊಳ್ಳಲಾಗದೇ ಶವವನ್ನು ಸ್ವೀಟ್‌ಸ್ಟಾಲ್‌ನಲ್ಲಿ ಇಟ್ಟುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು.

    ವರದಿಗಳ ಪ್ರಕಾರ, ಮೃತರು ಹೂಗ್ಲಿ ಜಿಲ್ಲೆಯ ನಿವಾಸಿ, ಅವರು ಕೋಲ್ಕತಾದ ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯ ವೈದ್ಯರ ಬಳಿಗೆ ಕರೆದೊಯ್ಯಲಾಯಿತು, ಅವರಿಗೆ ಕರೊನಾ ಸೋಂಕಿನ ರೋಗಲಕ್ಷಣ ಕಾಣಿಸಿದ್ದ ಹಿನ್ನೆಲೆಯಲ್ಲಿ ಕರೊನಾ ಪರೀಕ್ಷೆ ಮಾಡಲಾಗಿತ್ತು.

    ಆದರೆ ಈ ಪರೀಕ್ಷೆಯ ವರದಿ ಬರುವ ಮೊದಲೇ ಅವರು ಮೃತಪಟ್ಟರು. ಆದರೆ ಅವರ ಶವವನ್ನು ಹಸ್ತಾಂರಿಸಿದರೇ ವಿನಾ ಪ್ರಮಾಣ ಪತ್ರವನ್ನು ಆಸ್ಪತ್ರೆ ಕೊಟ್ಟಿರಲಿಲ್ಲ. ಆದ್ದರಿಂದ ಶವಸಂಸ್ಕಾರಕ್ಕೂ ಅನುಮತಿ ಸಿಕ್ಕಿರಲಿಲ್ಲ. (ಏಜೆನ್ಸೀಸ್‌)

    ಬಾಲಕನನ್ನು ಕೊಂದ ಉಗ್ರನನ್ನು ಹೊಡೆದುರುಳಿಸಿದ ಯೋಧರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts