ಮಹಿಳೆಯರ ಏಕದಿನ ವಿಶ್ವಕಪ್‌ನಲ್ಲಿ ಭಾರತಕ್ಕೆ ಇಂದು ಆಂಗ್ಲರ ಸವಾಲು

blank

ಮೌಂಟ್ ಮೌಂಗನುಯಿ: ವೆಸ್ಟ್ ಇಂಡೀಸ್ ವಿರುದ್ಧದ ಭರ್ಜರಿ ಗೆಲುವಿನೊಂದಿಗೆ ಆತ್ಮವಿಶ್ವಾಸ ವೃದ್ಧಿಸಿಕೊಂಡಿರುವ ಮಿಥಾಲಿ ರಾಜ್ ಸಾರಥ್ಯದ ಭಾರತ ತಂಡ ಮಹಿಳೆಯರ ಏಕದಿನ ವಿಶ್ವಕಪ್‌ನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧದ ಸವಾಲಿಗೆ ಸಜ್ಜಾಗಿದೆ. ಬುಧವಾರ ನಡೆಯಲಿರುವ ತನ್ನ 4ನೇ ಲೀಗ್ ಪಂದ್ಯದಲ್ಲಿ ಗೆಲ್ಲುವ ಮೂಲಕ ಸೆಮಿಫೈನಲ್‌ಗೇರುವ ಅವಕಾಶವನ್ನು ವೃದ್ಧಿಸಿಕೊಳ್ಳುವತ್ತ ಭಾರತ ತಂಡ ಗಮನಹರಿಸಿದೆ. ಜತೆಗೆ 2017ರ ವಿಶ್ವಕಪ್ ಫೈನಲ್‌ನಲ್ಲಿ ಆಂಗ್ಲರೆದುರು ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳುವ ಅವಕಾಶವೂ ಎದುರಾಗಿದೆ.

ಭಾರತ ತಂಡ ಟೂರ್ನಿಯಲ್ಲಿ ಇದುವರೆಗೆ ಆಡಿದ 3 ಪಂದ್ಯಗಳಲ್ಲಿ ಆತಿಥೇಯ ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡಿದ್ದರೆ, ಇಂಗ್ಲೆಂಡ್ ತಂಡ ಹ್ಯಾಟ್ರಿಕ್ ಸೋಲು ಅನುಭವಿಸಿದೆ. ಗೆಲುವಿನ ಖಾತೆ ತೆರೆಯಲು ಪರದಾಡುತ್ತಿರುವ ಇಂಗ್ಲೆಂಡ್, ಭಾರತ ವಿರುದ್ಧವೂ ಸೋತರೆ ಪ್ರಶಸ್ತಿ ಉಳಿಸಿಕೊಳ್ಳುವ ಮತ್ತು ಸೆಮೀಸ್ ಆಸೆಯನ್ನು ಬಹುತೇಕ ಕೈಚೆಲ್ಲಬೇಕಾಗುತ್ತದೆ. ಮುಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಕಠಿಣ ಸವಾಲು ಎದುರಿಸಬೇಕಿರುವ ಕಾರಣ ಭಾರತ, ಆಂಗ್ಲರೆದುರು ಗೆಲುವಿನ ಲಯ ಕಾಯ್ದುಕೊಳ್ಳುವ ಅಗತ್ಯವಿದೆ.

ಎಡಗೈ ಆರಂಭಿಕ ಆಟಗಾರ್ತಿ ಸ್ಮತಿ ಮಂದನಾ ಮತ್ತು ಉಪನಾಯಕಿ ಹರ್ಮಾನ್‌ಪ್ರೀತ್ ಕೌರ್ ಭರ್ಜರಿ ಫಾರ್ಮ್‌ನಲ್ಲಿರುವುದು ಭಾರತಕ್ಕೆ ವಿಶೇಷ ಬಲ ತುಂಬಿದೆ. ಜತೆಗೆ ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ (7 ವಿಕೆಟ್) ಬೌಲಿಂಗ್‌ನಲ್ಲಿ ಗಮನಸೆಳೆಯುತ್ತಿದ್ದಾರೆ. ನಾಯಕಿ ಮಿಥಾಲಿ ರಾಜ್ ಮತ್ತು ಆಲ್ರೌಂಡರ್ ದೀಪ್ತಿ ಶರ್ಮ ಅವರಿಂದ ಭಾರತಕ್ಕೆ ಹೆಚ್ಚಿನ ಕೊಡುಗೆಗಳು ಸಿಗಬೇಕಾಗಿದೆ. 18 ವರ್ಷದ ವಿಕೆಟ್ ಕೀಪರ್ ರಿಚಾ ಘೋಷ್ ಉತ್ತಮ ನಿರ್ವಹಣೆಯಿಂದ ಗಮನಸೆಳೆಯುತ್ತಿದ್ದಾರೆ. ಆಲ್ರೌಂಡರ್‌ಗಳಾದ ಸ್ನೇಹಾ ರಾಣಾ ಮತ್ತು ಪೂಜಾ ವಸಾಕರ್ ಕೂಡ ತಂಡಕ್ಕೆ ಆಸರೆಯಾಗುತ್ತಿದ್ದಾರೆ.

ಒತ್ತಡದಲ್ಲಿ ಇಂಗ್ಲೆಂಡ್ ತಂಡ
ಟೂರ್ನಿಯ ಮೊದಲ 3 ಪಂದ್ಯಗಳಲ್ಲಿ ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ವಿರುದ್ಧ ಸೋತಿರುವ ಹೀದರ್ ನೈಟ್ ಸಾರಥ್ಯದ ಇಂಗ್ಲೆಂಡ್ ತಂಡ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿದಿದೆ. ಸೆಮಿಫೈನಲ್ ಆಸೆ ಜೀವಂತವಿಡಲು ಭಾರತ ವಿರುದ್ಧ ಗೆಲ್ಲಲೇಬೇಕಾದ ಸವಾಲು ಆಂಗ್ಲರ ಮುಂದಿದೆ. ಆರಂಭಿಕ ಆಟಗಾರ್ತಿ ಟಾಮಿ ಬೆಯುಮೌಂಟ್, ಸ್ಪಿನ್ನರ್ ಸೋಫಿ ಎಕ್ಲೆಸ್ಟೋನ್ ಮತ್ತು ಆಲ್ರೌಂಡರ್ ನಾಟ್ ಸ್ಕೀವರ್ ಹೊರತಾಗಿ ತಂಡದ ಇತರ ಆಟಗಾರ್ತಿಯರಿಂದ ನಿರೀಕ್ಷಿತ ನಿರ್ವಹಣೆ ಬಂದಿಲ್ಲ. ಜತೆಗೆ ಫೀಲ್ಡಿಂಗ್ ವಿಭಾಗದ ವೈಫಲ್ಯವೂ ಇಂಗ್ಲೆಂಡ್ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ.

ಆರಂಭ: ಬೆಳಗ್ಗೆ 6.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಮುಖಾಮುಖಿ: 72
ಭಾರತ: 31
ಇಂಗ್ಲೆಂಡ್: 39
ರದ್ದು: 2

ವಿಶ್ವಕಪ್‌ನಲ್ಲಿ: 11
ಭಾರತ: 4
ಇಂಗ್ಲೆಂಡ್: 7

VIDEO: 6 ತಿಂಗಳ ಪುತ್ರಿಗೆ ಅರ್ಧಶತಕವನ್ನು ಅರ್ಪಿಸಿ ಸಂಭ್ರಮಿಸಿದ ಪಾಕ್ ನಾಯಕಿ ಬಿಸ್ಮಾ!

Share This Article

ಸನ್‌ಸ್ಕ್ರೀನ್, ಸೀರಮ್‌ಗಳನ್ನು ಬಳಸುತ್ತೀರಾ? ಹಾಗಿದ್ರೆ ಕ್ಯಾನ್ಸರ್​​ ಬರಬಹುದು ಎಚ್ಚರ! Glow Skin

Glow Skin | ನಮ್ಮ ಸ್ಕಿನ್​ ಗ್ಲೋ ಆಗಿ ಕಾಣಬೇಕೆಂದು ಮಹಿಳೆಯರು ಮಾಡುವ ಪ್ರಯತ್ನ ಒಂದೆರಡಲ್ಲ.…

ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಕಾಲಿನಿಂದ ತುಳಿಯಬೇಡಿ!  ನೀವು ಖಂಡಿತವಾಗಿಯೂ ಆರ್ಥಿಕ ತೊಂದರೆಗೆ ಸಿಲುಕುವಿರಿ.. Vasthu Tips

Vasthu Tips: ಹಿರಿಯರು ಹೇಳಿದ್ದನ್ನು  ಅನೇಕ ಜನರು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ನಾವು ಕೆಲವು ವಸ್ತುಗಳನ್ನು ದೇವರು…

ಈ ಬೇಸಿಗೆಯಲ್ಲಿ ನಿಮ್ಮ ಅಡುಗೆಮನೆಯಲ್ಲಿ ಇವು ಇರಲೇಬೇಕು! kitchen

kitchen: ಬೇಸಿಗೆಯಲ್ಲಿ, ಬಿಸಿಲು ತುಂಬಾ ಇರುತ್ತದೆ,  ಬಿಸಿಯಾದ, ಕೊಳಕಾದ ಅಡುಗೆಮನೆಯು ಕೀಟಗಳು ಮತ್ತು ಸೂಕ್ಷ್ಮಜೀವಿಗಳನ್ನು ಆಹ್ವಾನಿಸಬಹುದು…