More

    ಐರ್ಲೆಂಡ್ ವೇಗಿ ಜೋಶ್ ಲಿಟ್ಟಲ್‌ಗೆ ಐಸಿಸಿ ಛೀಮಾರಿ ಹಾಕಿದ್ಯಾಕೆ..?

    ದುಬೈ: ಐರ್ಲೆಂಡ್ ವೇಗದ ಬೌಲರ್ ಜೋಶ್ ಲಿಟ್ಟಲ್‌ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಛೀಮಾರಿ ಹಾಕಿದೆ. ಸೌಥಾಂಪ್ಟನ್‌ನಲ್ಲಿ ನಡೆದ 2ನೇ ಏಕದಿನ ಪಂದ್ಯದ ವೇಳೆ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜಾನಿ ಬೇರ್‌ಸ್ಪೋ ಅವರನ್ನು ಅವಾಚ್ಯ ಶಬ್ದಗಳಿಂದ ನಿಂಧಿಸಿದ ಆರೋಪಕ್ಕೆ ಗುರಿಯಾಗಿದ್ದಾರೆ. ಐಸಿಸಿ ಕಾನೂನು 2.5, ನೀತಿ ಸಂಹಿತೆ ಉಲ್ಲಂಸಿದ ಆರೋಪದ ಮೇರೆಗೆ ಐಸಿಸಿ ಈ ನಿರ್ಧಾರ ಕೈಗೊಂಡಿದೆ.

    ಇದನ್ನೂ ಓದಿ: ಐಪಿಎಲ್​ನಲ್ಲಿ ಆಟಗಾರರಿಗೆ ಕರೊನಾ ಸೋಂಕಿನ ಲಕ್ಷಣ ಕಂಡರೆ ಬದಲಿ ಆಟಗಾರರ ಬಳಕೆಗೆ ಅವಕಾಶ

    ದಿ ರೋಸ್ ಬೌಲ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 4 ವಿಕೆಟ್‌ಗಳಿಂದ ಐರ್ಲೆಂಡ್ ಎದುರು ಜಯ ದಾಖಲಿಸಿತ್ತು. ಐರ್ಲೆಂಡ್ ನೀಡಿದ 212 ರನ್ ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್, ಜಾನಿ ಬೇರ್‌ಸ್ಟೋ (82ರನ್, 41 ಎಸೆತ, 14 ಬೌಂಡರಿ, 2 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಬಳಿಕ ಬೇರ್‌ಸ್ಟೋ, ಲಿಟಲ್ ಎಸೆತದಲ್ಲೇ ದೊಡ್ಡ ಹೊಡೆತಕ್ಕೆ ಮುಂದಾಗಿ ಔಟಾದರು. ಈ ವೇಳೆ ಲಿಟಲ್, ಬೇರ್ ಸ್ಟೋ ಕಡೆಗೆ ಕೈ ಸನ್ನೆ ಮಾಡಿ, ಅವಾಚ್ಯ ಪದ ಬಳಸಿದ್ದರು. ಇದು ಐಸಿಸಿ ನಿಯಮ ಉಲ್ಲಂಘನೆಯಾಗಿತ್ತು. ಲಿಟಲ್‌ಗೆ ಒಂದು ಡಿಮೆರೀಟ್ ಅಂಕ ಕೂಡ ನೀಡಲಾಗಿದೆ. ಮೈದಾನದ ಅಂಪೈರ್‌ಗಳಾದ ಡೇವಿಡ್ ಮಿಲ್ನಿಸ್ ಹಾಗೂ ಅಲೆಕ್ಸ್ ಮೂರನೇ ಅಂಪೈರ್ ಮೈಕ್ ಬರ್ನ್ಸ್, ಮ್ಯಾಚ್ ರೆಫ್ರಿ ಮಾರ್ಟಿನ್ ಸಗಾರ್ಸ್‌ ವರದಿ ಆಧರಿಸಿ ಛೀಮಾರಿ ಹಾಕಲಾಗಿದೆ.

    ಯುಎಇಯಲ್ಲಿ ಐಪಿಎಲ್​ ಆಯೋಜನೆಗೆ ಕೇಂದ್ರ ಸರ್ಕಾರ ಸಮ್ಮತಿ, ದಿನಾಂಕವೂ ಖಚಿತ, ಪಂದ್ಯಗಳೂ ಬೇಗನೆ ಆರಂಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts