More

    ಔಷಧ ತಗೊಂಡು ಮಲಗಿದ್ದವಳ ಲೈಂಗಿಕ ಶೋಷಣೆ: ವಾಯುಸೇನೆ ಅಧಿಕಾರಿ ಬಂಧನ

    ಕೊಯಮತ್ತೂರು: ಔಷಧಿ ತೆಗೆದುಕೊಂಡು ಮಲಗಿದ್ದ ಮಹಿಳಾ ಸಹೋದ್ಯೋಗಿಯ ಲೈಂಗಿಕ ಶೋಷಣೆ ಮಾಡಿದ ಆರೋಪದ ಮೇಲೆ 26 ವರ್ಷದ ಭಾರತೀಯ ವಾಯುಪಡೆ(ಐಎಎಫ್​)ಯ ಫ್ಲೈಟ್​ ಲೆಫ್ಟಿನೆಂಟ್​​ನನ್ನು ಪೊಲೀಸರು ಬಂಧಿಸಿದ್ದಾರೆ. ಕೊಯಮತ್ತೂರಿನ ರೆಡ್​ಫೀಲ್ಡ್ಸ್​ನಲ್ಲಿರುವ ಏರ್​ ಫೋರ್ಸ್​ ಅಡ್​ಮಿನಿಸ್ಟ್ರೇಟೀವ್ ಕಾಲೇಜಿನಲ್ಲಿ ತರಬೇತಿ ಪಡೆಯುತ್ತಿರುವ ಯುವತಿಯ ದೂರಿನ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.

    ಎರಡು ವಾರಗಳ ಹಿಂದೆ, 27 ವರ್ಷದ ಸಂತ್ರಸ್ತೆಯು ಕ್ರೀಡಾಭ್ಯಾಸದ ವೇಳೆ ಏಟು ಬಿದ್ದಿದ್ದರಿಂದ ಕಾಲೇಜಿನ ಕೊಠಡಿಯಲ್ಲಿ ಔಷಧಿ ಸೇವಿಸಿ ಮಲಗಿದ್ದಳು. ನಂತರ ಎದ್ದಾಗ ಲೈಂಗಿಕ ಶೋಷಣೆಯಾಗಿರುವುದು ತಿಳಿದುಬಂತು. ತಕ್ಷಣ ತಾನು ನೀಡಿದ ದೂರಿನ ಮೇಲೆ ಐಎಎಫ್​ ತೆಗೆದುಕೊಂಡ ಕ್ರಮದ ಬಗ್ಗೆ ತೃಪ್ತಿಯಿಲ್ಲದ್ದರಿಂದ ಪೊಲೀಸರಿಗೆ ದೂರು ನೀಡಬೇಕಾಗಿದೆ ಎಂದು ದೂರಿನಲ್ಲಿ ಹೇಳಿದ್ದಾಳೆ ಎನ್ನಲಾಗಿದೆ.

    ಇದನ್ನೂ ಓದಿ: ಬಿಕಾಂ ಪ್ರಶ್ನೆ ಪತ್ರಿಕೆ ಸೋರಿಕೆ : ಪರೀಕ್ಷೆ ಮುಂದೂಡಿದ ವಿಎಸ್‌ಕೆ ವಿವಿ

    ಕೊಯಮತ್ತೂರಿನ ಗಾಂಧಿಪುರಂ ಪೊಲೀಸ್​ ಠಾಣೆಯ ಮಹಿಳಾ ತಂಡವು ಆರಂಭಿಕ ತನಿಖೆ ನಡೆಸಿದ ನಂತರ ಛತ್ತೀಸಗಡ ಮೂಲದ ಐಎಎಫ್​ ಅಧಿಕಾರಿಯ ಮೇಲೆ ಪ್ರಕರಣ ದಾಖಲಿಸಿತು. ಆರೋಪಿಯು ಜಿಲ್ಲಾ ನ್ಯಾಯಾಧೀಶರ ಮುಂದೆ ಶರಣಾದ ನಂತರ ಆತನನ್ನು ಬಂಧಿಸಿದ್ದು, ಸದ್ಯ ಉದುಮಲಪೇಟ್​ ಜೈಲಿನಲ್ಲಿ ಇರಿಸಲಾಗಿದೆ ಎಂದು ವರದಿ ತಿಳಿಸಿದೆ.

    ಐಎಎಫ್​ ಅಧಿಕಾರಿಯಾದ್ದರಿಂದ ಸೇನಾ ನ್ಯಾಯಾಲಯಕ್ಕೆ ಮಾತ್ರ ವಿಚಾರಣೆ ನಡೆಸುವ ಅಧಿಕಾರವಿರುತ್ತದೆ. ಆದ್ದರಿಂದ ಪೊಲೀಸರು ಈ ದೂರಿನ ಮೇಲೆ ಕ್ರಮ ತೆಗೆದುಕೊಳ್ಳಲು ಅಧಿಕಾರವ್ಯಾಪ್ತಿ ಇರುವುದಿಲ್ಲ ಎಂದು ಆರೋಪಿಯ ವಕೀಲರು ವಾದಿಸುತ್ತಿದ್ದಾರೆ. ಈ ಬಗ್ಗೆ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ. (ಏಜೆನ್ಸೀಸ್)

    ಐತಿಹಾಸಿಕ ಅವಕಾಶ: ಮೊದಲ ಬಾರಿಗೆ ಯುವತಿಯರಿಂದ ಎನ್​ಡಿಎ ಪರೀಕ್ಷೆಗೆ ಅರ್ಜಿ ಆಹ್ವಾನ

    ಲಸಿಕೆ ತಯಾರಿಕೆ ಸಾಮರ್ಥ್ಯ ಹೆಚ್ಚಿಸಿಕೊಂಡ ಭಾರತಕ್ಕೆ ಬಿಲ್​ ಗೇಟ್ಸ್​ ಪ್ರಶಂಸೆ

    ಕರೊನಾ ವಿರುದ್ಧದ ಹೋರಾಟದಲ್ಲಿ ಟೀಂ ಇಂಡಿಯ ದಾಖಲೆಗಳನ್ನು ಸೃಷ್ಟಿಸುತ್ತಿದೆ: ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts