More

    ಗಡಿಯಲ್ಲಿ ಚೀನಾದ ಉಪಟಳ; ಧಾವಿಸಿದ ಭಾರತೀಯ ವಾಯುಪಡೆ ವಿಮಾನ

    ನವದೆಹಲಿ: ಒಂದೆಡೆ ಭಾರತ ಕೋವಿಡ್​ ವಿರುದ್ಧ ಹೋರಾಡುತ್ತಿದ್ದರೆ ಇನ್ನೊಂದೆಡೆ ಪಾಕಿಸ್ತಾನ ಭಾರತದಲ್ಲಿ ಉಗ್ರರ ದಾಳಿ ಸಂಘಟಿಸಲು ಹುನ್ನಾರ ನಡೆಸಿದೆ. ಮತ್ತೊಂದೆಡೆ ಚೀನಾ ಯೋಧರು ವಾಸ್ತವ ಗಡಿರೇಖೆ ಬಳಿ ಉಪಟಳ ಆರಂಭಿಸಿದ್ದಾರೆ.

    ಕಳೆದ ಕೆಲವು ದಿನಗಳ ಹಿಂದೆ ಭಾರತ ಮತ್ತು ಚೀನಾ ಯೋಧರ ನಡುವೆ ಹೊಯ್​ಕೈ ನಡೆದಿತ್ತು. ಇದೀಗ ಚೀನಾ ವಾಯುಪಡೆಯ ಹೆಲಿಕಾಪ್ಟರ್​ಗಳು ವಾಸ್ತವ ಗಡಿರೇಖೆಯ ಬಳಿ ಹಾರಾಟ ನಡೆಸಿದ್ದರಿಂದ, ತನ್ನ ವೈಮಾನಿಕ ಗಡಿ ಕಾಯ್ದುಕೊಳ್ಳಲು ಭಾರತೀಯ ವಾಯುಪಡೆ ಯುದ್ಧವಿಮಾನಗಳು ವಾಸ್ತವ ಗಡಿ ರೇಖೆಯ ಬಳಿ ಹಾರಾಟ ನಡೆಸಿವೆ.

    ಇದನ್ನೂ ಓದಿ: ಚೀನಾದಲ್ಲಿನ ಶೇ.20 ಉತ್ಪಾದನಾ ಸಾಮರ್ಥ್ಯ ಭಾರತಕ್ಕೆ ಸ್ಥಳಾಂತರಿಸುತ್ತಾ ಆ್ಯಪಲ್​?

    ಲಡಾಖ್​ ವಲಯದಲ್ಲಿ ಕಳೆದ ವಾರ ಚೀನಾ ವಾಯುಸೇನಾ ಪಡೆ ಭಾರತೀಯ ಗಡಿ ಪ್ರದೇಶದ ಸಮೀಪಕ್ಕೆ ತನ್ನ ಹೆಲಿಕಾಪ್ಟರ್​ಗಳನ್ನು ರವಾನಿಸಿತ್ತು. ಈ ವಿಷಯ ತಿಳಿಯುತ್ತಲೇ ಭಾರತೀಯ ವಾಯುಪಡೆ ಯುದ್ಧವಿಮಾನಗಳು ಆ ಭಾಗದಲ್ಲಿ ಹಾರಾಟ ಕೈಗೊಂಡು ಚೀನಿಯರ ದುಸ್ಸಾಹಸಕ್ಕೆ ಪ್ರತ್ಯುತ್ತರ ನೀಡಲು ಯತ್ನಿಸಿದ್ದಾಗಿ ಸರ್ಕಾರದ ಉನ್ನತ ಮೂಲಗಳು ಮಾಹಿತಿ ನೀಡಿವೆ.

    ಭಾರತೀಯ ವೈಮಾನಿಕ ಗಡಿಯನ್ನು ಉಲ್ಲಂಘಿಸುವ ಚೀನಾದ ದುಸ್ಸಾಹಸಕ್ಕೆ ಹಲವು ವರ್ಷಗಳ ಬಳಿಕ ಭಾರತ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವುದಾಗಿ ಹೇಳಲಾಗಿದೆ.

    ಉತ್ತರ ಸಿಕ್ಕಿಂನ ವಾಸ್ತವ ಗಡಿ ರೇಖೆಯ ಬಳಿಯ ನಾಕು ಲಾ ಪಾಸ್​ ಬಳಿ ಚೀನಾ ಯೋಧರು ಭಾರತದ ಗಡಿಯೊಳಗೆ ಪ್ರವೇಶಿಸಲು ಯತ್ನಿಸಿದ್ದರು. ಭಾರತೀಯ ಯೋಧರು ಇದಕ್ಕೆ ಪ್ರತಿರೋಧ ತೋರಿದಾಗ ಯೋಧರ ನಡುವೆ ಹೋಯ್​ಕೈ ಏರ್ಪಟ್ಟಿತ್ತು. ಕಲ್ಲು ತೂರಾಟದ ಪ್ರಸಂಗಗಳು ನಡೆದಿದ್ದರಿಂದ ಎರಡೂ ಕಡೆಯ ಯೋಧರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಎರಡು ಪಡೆಯ ಅಧಿಕಾರಿಗಳು ಮಾತುಕತೆ ನಡೆಸಿದ ಬಳಿಕ ಪರಿಸ್ಥಿತಿ ತಿಳಿಗೊಂಡಿತ್ತು.

    ಕೊಂಚ ಜಾಗರೂಕತೆಯಿಂದಲೇ ‘ರಾಬರ್ಟ್​’ ಬೆಡಗಿಯ ಸಿಂಗಿಂಗ್​ ಟ್ಯಾಲೆಂಟ್ ನೋಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts