More

    ಅಫ್ರಿದಿ ಬೇಗ ಗುಣಮುಖರಾಗಲಿ ಎಂದ ಗಂಭೀರ್

    ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹಾಗೂ ಪಾಕಿಸ್ತಾನ ಮಾಜಿ ನಾಯಕ ಶಾಹಿದ್ ಆಫ್ರಿದಿ ಸಾಮಾಜಿಕ ಜಾಲತಾಣಗಳಲ್ಲಿ ಬದ್ಧ ವೈರಿಗಳು ಎಂಬುದು ಜಗಜ್ಜಾಹೀರು. ಅಫ್ರಿದಿ ಭಾರತದ ವಿರುದ್ಧ ಯಾವುದೇ ಹೇಳಿಕೆ ನೀಡಿದರೂ ತಕ್ಷಣವೇ ತಿರುಗೇಟು ನೀಡುತ್ತಾರೆ ಬಿಜೆಪಿ ಸಂಸದರೂ ಆಗಿರುವ ಗಂಭೀರ್. ಇದೀಗ ಕರೊನಾ ಪಾಸಿಟಿವ್‌ಗೆ ತುತ್ತಾಗಿರುವ ಶಾಹಿದ್ ಅಫ್ರಿದಿ ಬೇಗ ಗುಣಮುಖರಾಗಲಿ ಎಂದು ಗಂಭೀರ್ ಹಾರೈಸಿದ್ದಾರೆ.

    ಇದನ್ನೂ ಓದಿ: ದಾದಾ ಗುಣಗಾನ ಮಾಡಿದ ಪಾಕ್ ಮಾಜಿ ವೇಗಿ ಅಖ್ತರ್

    ಅಫ್ರಿದಿ ಬೇಗ ಗುಣಮುಖರಾಗಲಿ ಎಂದ ಗಂಭೀರ್ನನ್ನ ಹಾಗೂ ಅಫ್ರಿದಿ ನಡುವೆ ಕೇವಲ ರಾಜಕೀಯ ವೈಷಮ್ಯವಷ್ಟೇ ಇರುವುದು. ವೈಯಕ್ತಿಕವಾಗಿ ಯಾವುದೇ ದ್ವೇಷವಿಲ್ಲ. ಅವರು ಬೇಗ ಗುಣಮುಖರಾಗಲಿ ಎಂದು ಗಂಭೀರ್ ಹೇಳಿದ್ದಾರೆ. ಅದಕ್ಕಿಂತಲೂ ಮಿಗಿಲಾಗಿ ನನ್ನ ದೇಶ ಕೂಡ ಕರೊನಾ ವೈರಸ್‌ನಿಂದ ಪಾರಾಗಲಿ. ಪಾಕಿಸ್ತಾನ ನಮಗೆ ಸಹಾಯ ಮಾಡುವುದು ಬೇಡ, ಅವರನ್ನು ಅವರು ಮೊದಲು ನೋಡಿಕೊಳ್ಳಲಿ ಎಂದಿದ್ದಾರೆ.

    ಇದನ್ನೂ ಓದಿ: ಕರೊನಾ ವೈರಸ್‌ಗೂ ಬಗ್ಗದ ಜನ, ಸ್ಟೇಡಿಯಂನಲ್ಲಿ ರಗ್ಬಿ ಪಂದ್ಯ ನೋಡಿದ್ರು 22 ಸಾವಿರ ಮಂದಿ

    ಮಾಜಿ ನಾಯಕ ಶಾಹಿದ್ ಅಫ್ರಿದಿಗೆ ಕರೊನಾ ವೈರಸ್ ಪಾಸಿಟಿವ್ ಶನಿವಾರ ದೃಢಪಟ್ಟಿದೆ. ಇದರಿಂದ ಮಹಾಮಾರಿ ವೈರಸ್ ಸೋಂಕಿತ ಮೊದಲ ಸ್ಟಾರ್ ಆಟಗಾರ ಎನಿಸಿಕೊಂಡಿದ್ದಾರೆ. ‘ಗುರುವಾರ ನನಗೆ ಆರೋಗ್ಯ ಸರಿ ಇರಲಿಲ್ಲ. ದೇಹದಲ್ಲಿ ನೋವು ಕಾಣಿಸಿಕೊಂಡಿತ್ತು. ಬಳಿಕ ಪರೀಕ್ಷೆಗೊಳಗಾದಾಗ ದುರಾದೃಷ್ಟವಶಾತ್ ನನಗೆ ಸೋಂಕು ದೃಢಪಟ್ಟಿದೆ. ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸುತ್ತಿದ್ದೇನೆ ಎಂದು 40 ವರ್ಷದ ಅಫ್ರಿದಿ ಟ್ವೀಟ್ ಮಾಡಿದ್ದಾರೆ. 1996 ರಿಂದ 2018ರವರೆಗೂ ಪಾಕ್ ತಂಡದ ಭಾಗವಾಗಿದ್ದ ಆಫ್ರಿದಿ, 27 ಟೆಸ್ಟ್ (1716 ರನ್, 48 ವಿಕೆಟ್), 398 ಏಕದಿನ (8064 ರನ್, 395 ವಿಕೆಟ್) ಹಾಗೂ 99 ಟಿ20 (1416 ರನ್, 98 ವಿಕೆಟ್) ಪಂದ್ಯಗಳನ್ನಾಡಿದ್ದಾರೆ.

    ಬೆಂಗಳೂರಿನಲ್ಲಿ ಬೀದಿ ನಾಯಿ ಕಡಿತಕ್ಕೊಳಗಾಗಿದ್ದ ಕಿವೀಸ್‌ನ ಮಾಜಿ ಕ್ರಿಕೆಟಿಗ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts