More

    ನನ್ನ ಪ್ಲ್ಯಾನ್ ಏನಿದೆ ಅದನ್ನು 100 ದಿನಗಳೊಳಗೆ ಹೇಳುತ್ತೇನೆ: ಡಿಸಿಎಂ ಡಿ.ಕೆ.ಶಿವಕುಮಾರ್

    ಬೆಂಗಳೂರು: ನನ್ನ ಪ್ಲ್ಯಾನ್ ಏನಿದೆ ಅದನ್ನು ಇನ್ನು ನೂರು ದಿನಗಳೊಳಗೆ ಹೇಳುತ್ತೇನೆ ಎಂಬುದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಬ್ರ್ಯಾಂಡ್ ಬೆಂಗಳೂರು ಕುರಿತ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ವಿಷಯ ತಿಳಿಸಿದರು.

    ಬೆಂಗಳೂರಿನ ಸರ್ವತೋಮುಖ ಅಭಿವೃದ್ಧಿಗಾಗಿ ಬ್ರ್ಯಾಂಡ್ ಬೆಂಗಳೂರು ಕಲ್ಪನೆಯನ್ನು ಹೊಂದಿರುವ ಡಿ.ಕೆ.ಶಿವಕುಮಾರ್ ಆ ಕುರಿತು ಈಗಾಗಲೇ ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಿದ್ದಾರೆ. ಈ ಮಧ್ಯೆ ಇಂದು ಈ ಕುರಿತಂತೆ ಸಭೆ ನಡೆಸಿರುವ ಅವರು ಆ ಬಳಿಕ ಸುದ್ದಿಗೋಷ್ಠಿ ನಡೆಸಿದರು.

    ಬ್ರಾಂಡ್ ಬೆಂಗಳೂರು ವಿಚಾರವಾಗಿ ಈ ಹಿಂದೆ ಶಾಸಕರು, ಸಂಸದರು, ಐಟಿ-ಬಿಟಿ ಪ್ರಮುಖರ ಸಭೆ ಕರೆದಿದ್ದೆ. 30 ಸಾವಿರ ಸಾರ್ವಜನಿಕರ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಇಂದು ಬೆಂಗಳೂರು ನಿವಾಸಿಗಳ ಕ್ಷೇಮಾಭಿವೃದ್ಧಿ ಮತ್ತು ನಾಗರಿಕ ಸಂಘಗಳ ಪ್ರತಿನಿಧಿಗಳ ಜತೆ ಸಭೆ ನಡೆಸಿದ್ದೇನೆ ಎಂದು ಸುದ್ದಿಗೋಷ್ಠಿ ನಡೆಸಿ ಸಭೆ ಕುರಿತಂತೆ ಮಾಹಿತಿ ನೀಡಿದರು.

    ಇದನ್ನೂ ಓದಿ: ನೇರಳೆ ಹಣ್ಣುಗಳನ್ನು ಅತಿಯಾಗಿ ಸೇವಿಸಿದರೆ ಏನಾಗುತ್ತದೆ?: ಆರೋಗ್ಯಕ್ಕೇನು ತೊಂದರೆ?

    ಗ್ರಾಮಸಭೆಗಳ ರೀತಿ ವಾರ್ಡ್ ಸಭೆ ಕರೆಯಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಫುಟ್ ಪಾತ್ ಒತ್ತುವರಿ, ಟ್ರಾಫಿಕ್ ಸಮಸ್ಯೆ, ಕಸದ ಸಮಸ್ಯೆ ಬಗ್ಗೆ ಹೇಳಿದ್ದಾರೆ. ಆನ್​ಲೈನ್​ನಲ್ಲಿ ಈಗಾಗಲೇ 300ಕ್ಕೂ ಅಧಿಕ ಸಲಹೆಗಳು ಬಂದಿವೆ, 50ಕ್ಕೂ ಅಧಿಕ ಅಧಿಕಾರಿಗಳು ಕೂಡ ಸಲಹೆ ನೀಡಿದ್ದಾರೆ. ಎಲ್ಲರೂ ಪಾರದರ್ಶಕತೆ ಕೇಳಿದ್ದಾರೆ, ಅಂಡರ್ ಗ್ರೌಂಡ್ ವಾಟರ್, ಡ್ರೈನೇಜ್ ಸಮಸ್ಯೆ ಹೇಳಿಕೊಂಡಿದ್ದಾರೆ ಎಂದಿರುವ ಡಿಸಿಎಂ, ಈಗಿರುವ ಟೆಕ್ನಾಲಜಿ ಬಳಸಿಕೊಂಡು ಉತ್ತಮ ಸೇವೆ ನೀಡುತ್ತೇವೆ ಎಂದರು. ಮಕ್ಕಳ ಜೊತೆ ಸಂವಾದ ನಡೆಸಿ ಅವರ ಅಭಿಪ್ರಾಯ ಸಂಗ್ರಹ ಮಾಡುವ ಕೆಲಸ ಕೂಡ ಮಾಡುತ್ತೇನೆ ಎಂದರು.

    ದುಬಾರಿ ತೆರಿಗೆ ಹಾಕುವ ಬಗ್ಗೆ ‌ಚರ್ಚಿಸಿಲ್ಲ. ಆದರೆ ದುರುಪಯೋಗ ಆಗುತ್ತಿರುವ ಬಗ್ಗೆ ಹೆಚ್ಚು ಕಾಳಜಿ ವಹಿಸಿ ತೆರಿಗೆ ಸಂಗ್ರಹಿಸುತ್ತೇವೆ. ಯಾರು ತೆರಿಗೆ ಕಟ್ಟುತ್ತಿಲ್ಲ, ಅವರಿಂದ ಕಾನೂನು ಪ್ರಕಾರ ತೆರಿಗೆ ಸಂಗ್ರಹ ಮಾಡುತ್ತೇವೆ.

    ಇದನ್ನೂ ಓದಿ: ರಾತ್ರಿ ಲೈಟ್ ಆನ್​ ಮಾಡಿಟ್ಟು ಮಲಗಿದರೆ ಏನಾಗುತ್ತೆ?; ಆರೋಗ್ಯದ ಮೇಲೆ ಏನು ಪರಿಣಾಮ?

    ತ್ಯಾಜ್ಯ ತಂದು ಫುಟ್​ಪಾತ್ ಮೇಲೆ ಹಾಕುತ್ತಿರುವ ಸ್ಥಳಗಳನ್ನು ಗುರುತಿಸಲಾಗಿದೆ. ಫುಟ್​ಪಾತ್ ತೆರವುಗೊಳಿಸಲು ಈಗಾಗಲೇ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಬೆಂಗಳೂರಿನಲ್ಲಿರುವ ಎಲ್ಲ ಆಸ್ತಿಗಳ ದಾಖಲೆಗಳನ್ನ ಸಂಗ್ರಹಿಸಿ, ಸ್ಕ್ಯಾನ್ ಮಾಡಿ ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡುತ್ತೇನೆ. ಇದಕ್ಕೆ ಸಾಕಷ್ಟು ಸಮಯ ಬೇಕಿದೆ. ದಾಖಲೆಗಳನ್ನು ಯಾರೂ ತಿದ್ದಬಾರದು. ಅದಕ್ಕಾಗಿ ಈ ಯೋಜನೆ ಮಾಡಲು ತೀರ್ಮಾನ ಮಾಡಿದ್ದೇವೆ. ಬಿಡಿಎ ಹಾಗೂ ಬಿಬಿಎಂಪಿ ಆಸ್ತಿ ದಾಖಲೆಗಳು ಸಾರ್ವಜನಿಕರ ಮನೆ ಬಾಗಿಲಿಗೆ ಬರುವಂತೆ ಮಾಡುವುದು ನನ್ನ ಉದ್ದೇಶ ಎಂದ ಡಿ.ಕೆ.ಶಿವಕುಮಾರ್, ನನ್ನ ಪ್ಲ್ಯಾನ್ ಏನಿದೆ ಅದನ್ನು 100 ದಿನಗಳೊಳಗೆ ಹೇಳುತ್ತೇನೆ ಎಂದೂ ಹೇಳಿದರು.

    ಯಂಗ್​ ಆಗಿಯೇ ಇರಲು ಕೋಟ್ಯಂತರ ರೂ. ಖರ್ಚು ಮಾಡಿದ, ಮಗನ ರಕ್ತ ತನ್ನ ದೇಹಕ್ಕೆ ಸೇರಿಸಿಕೊಂಡ: ಕೊನೆಗೆ ಆಗಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts